







ನಿಡ್ಪಳ್ಳಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿಸಿ ಟ್ರಸ್ಟ್ ಪುತ್ತೂರು ಬಲ್ನಾಡು ವಲಯದ ಕಬಕ, ಕಬಕ ಎ ಮತ್ತು ಕೊಡಿಪ್ಪಾಡಿ ಒಕ್ಕೂಟದ ವಾರ್ಷಿಕೋತ್ಸವ ಕಾರ್ಯಕ್ರಮ ಡಿ.21ರಂದು ಗೌಡ ಸಮುದಾಯ ಭವನ ಮುರ ಇಲ್ಲಿ ನಡೆಯಿತು.



ಶ್ರೀ ಲಕ್ಷ್ಮಿ ವೆಂಕಟರಮಣ ಮಠ ಪೋಳ್ಯ ಇದರ ಅಧ್ಯಕ್ಷ ಉಮಾಶಂಕರ್ ಎದುರ್ಕಳ ದೀಪ ಬೆಳಗಿಸಿ ಉದ್ಘಾಟಿಸಿ ಶುಭ ಹಾರೈಸಿದರು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಲ್ನಾಡು ವಲಯದ ಅಧ್ಯಕ್ಷ ಸತೀಶ್ ಒಳಗುಡ್ಡೆ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಪುತ್ತೂರು ಯೋಜನಾಧಿಕಾರಿ ಶಶಿಧರ .ಎಂ ಮಾತನಾಡಿ ಯೋಜನೆಯ ಕಾರ್ಯಕ್ರಮಗಳ ಸಾಧನೆ ಮತ್ತು ಮಾಹಿತಿ ನೀಡಿದರು. ಕಬಕ ಗ್ರಾಮ ಪಂಚಾಯತ್ ಅಧ್ಯಕ್ಷೆ ಗೀತಾ, ಕೊಡಿಪ್ಪಾಡಿ ಗ್ರಾಮ ಪಂಚಾಯತ್ ಅಧ್ಯಕ್ಷ ಸೋಮಪ್ಪ ಪೂಜಾರಿ ಓಜಾಳ, ಪುತ್ತೂರು ವಕೀಲರಾದ ಹರಿಣಾಕ್ಷಿ ಜೆ ಶೆಟ್ಟಿ, ಶ್ರೀ ಮಂಜುನಾಥೇಶ್ವರ ಭಜನಾ ಪರಿಷತ್ ಬಲ್ನಾಡು ವಲಯದ ಅಧ್ಯಕ್ಷ ವೆಂಕಟಕೃಷ್ಣ ಭಟ್, ಸಪ್ತಗಿರಿ ಕನ್ ಸ್ಟ್ರಕ್ಷನ್ ಕೊಡಿಪಾಡಿ ಇದರ ಸಿವಿಲ್ ಇಂಜಿನಿಯರ್ ಅಭಿಜಿತ್ ನಾಯ್ಕ ಕೊಳಕ್ಕಿಮಾರ್, ಅಖಿಲ ಕರ್ನಾಟಕ ಜನ ಜಾಗೃತಿ ವೇದಿಕೆ ಪುತ್ತೂರು ಇದರ ಸದಸ್ಯ ಪ್ರಶಾಂತ್ ಮುರ, ಗೌಡ ಸಮುದಾಯ ಭವನದ ಮೆಲ್ವೀಚಾರಕ ನಾರಾಯಣ ಗೌಡ, ಕೊಡಿಪಾಡಿ ಒಕ್ಕೂಟದ ಅಧ್ಯಕ್ಷ ದಿನೇಶ್ ಗೌಡ ಗೋಮುಖ, ಕಬಕ ಎ ಒಕ್ಕೂಟದ ಅಧ್ಯಕ್ಷೆ ಜಯಲಕ್ಷ್ಮಿ, ಕಬಕ ಒಕ್ಕೂಟದ ಅಧ್ಯಕ್ಷೆ ಸೌಮ್ಯ ವೇದಿಕೆಯಲ್ಲಿ ಉಪಸ್ಥಿತರಿದ್ದರು.



ಬಲ್ನಾಡು ವಲಯ ಮೆಲ್ವೀಚಾರಕ ಪ್ರಶಾಂತ್ ಕುಮಾರ್ ಸ್ವಾಗತಿಸಿ, ಸೇವಾ ಪ್ರತಿನಿಧಿ ಚಿತ್ರಾ ವರದಿ ವಾಚಿಸಿದರು.ಸೇವಾ ಪ್ರತಿನಿಧಿ ನಳಿನಿ ವಂದಿಸಿದರು. ಶೃತಿ ವಿಸ್ಮಿತ್ ಬಲ್ನಾಡು ಕಾರ್ಯಕ್ರಮ ನಿರೂಪಿಸಿದರು.ಸಭಾ ಕಾರ್ಯಕ್ರಮದ ನಂತರ ಒಕ್ಕೂಟದ ಸದಸ್ಯರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಮೂರು ಒಕ್ಕೂಟಗಳ ಪದಾಧಿಕಾರಿಗಳು, ಸದಸ್ಯರು ಪಾಲ್ಗೊಂಡರು.









