







ಪುತ್ತೂರು :ಪುತ್ತೂರು ತೆಂಕಿಲ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ’ಸಾಂಸ್ಕೃತಿಕ ಸಮನ್ವಯ – ವಾರ್ಷಿಕ ಹಬ್ಬ – 2025’ ಡಿ.27ರಂದು ನಡೆಯಲಿದೆ. ಉದ್ಘಾಟಕರಾಗಿ ಕರ್ನಾಟಕ ಸರಕಾರದ ವಿಧಾನ ಪರಿಷತ್ನ ಸದಸ್ಯ ಪ್ರತಾಪ್ ಸಿಂಹ ನಾಯಕ್, ಸಭಾಧ್ಯಕ್ಷರಾಗಿ ವಿವೇಕಾನಂದ ವಿದ್ಯಾವರ್ಧಕ ಸಂಘ ಪುತ್ತೂರು ಇದರ ಕಾರ್ಯದರ್ಶಿ ಡಾ. ಕೆ.ಎಂ ಕೃಷ್ಣ ಭಟ್, ಶಾಲಾ ವಾರ್ಷಿಕ ಸಂಚಿಕೆ ’ಸಾಹಿತ್ಯ ಮಿತ್ರ’ದ ಬಿಡುಗಡೆಯನ್ನು ಮಾಡಲಿದ್ದಾರೆ.


ಎಸ್.ಎಲ್.ವಿ ಬುಕ್ ಏಜೆನ್ಸಿಯ ಮಾಲಕ ದಿವಾಕರ್ ದಾಸ್ ನೇರ್ಲಾಜೆ ಮತ್ತು ಅಭ್ಯಾಗತರಾಗಿ ಪುತ್ತೂರಿನ ಪ್ರಭಾರ ಕ್ಷೇತ್ರಶಿಕ್ಷಣಾಧಿಕಾರಿ ವಿಷ್ಣುಪ್ರಸಾದ್ ಸಿ, ವಿವೇಕಾನಂದ ಆಂಗ್ಲ ಮಾಧ್ಯಮ ಶಾಲಾ ಮುಖ್ಯಗುರು ಸತೀಶ್ ಕುಮಾರ್ ರೈ, ಶಾಲಾ ಹಿರಿಯ ವಿದ್ಯಾರ್ಥಿನಿ ಪ್ರಸ್ತುತ ಬೆಂಗಳೂರಿನಲ್ಲಿ ಉದ್ಯಮಿ ಕ್ಷಮಾ ಭಾರದ್ವಾಜ್ ಹಾಗೂ ಶಾಲಾ ಶಿಕ್ಷಕ-ರಕ್ಷಕ ಸಂಘ, ಮಾತೃಭಾರತಿ ಸಮಿತಿ, ಅನ್ನಪೂರ್ಣಾ ಕಾರ್ಯಾಕಾರಿಣಿ ಸಮಿತಿಯ ಅಧ್ಯಕ್ಷರು ವೇದಿಕೆಯಲ್ಲಿ ಉಪಸ್ಥಿತರಿರಲ್ಲಿದ್ದಾರೆ.



ಅಪರಾಹ್ನ ಸಮಯ 2.30ಕ್ಕೆ ಸಾಂಸ್ಕೃತಿಕ ಕಾರ್ಯಕ್ರಮ ಆರಂಭವಾಗಲಿದ್ದು ಗಂಟೆ 3.15ಕ್ಕೆ ಸಭಾಕಾರ್ಯಕ್ರಮ ನಡೆಯಲಿದೆ. ಸಭಾಕಾರ್ಯಕ್ರಮದ ಬಳಿಕ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮ ಮುಂದುವರಿಯಲಿದೆ ಎಂದು ಶಾಲಾ ಮುಖ್ಯಗುರು ಆಶಾ ಬೆಳ್ಳಾರೆ ಪ್ರಕಟನೆಯಲ್ಲಿ ತಿಳಿಸಿರುತ್ತಾರೆ.










