






ಪುತ್ತೂರು: ಸಾಂದೀಪನಿ ಗ್ರಾಮೀಣ ವಿದ್ಯಾಸಂಸ್ಥೆಯಲ್ಲಿ ಶಿಶುಮಂದಿರ, ಪ್ರಾಥಮಿಕ, ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಸಾಂದೀಪೋತ್ಸವ ಹೊನಲು ಬೆಳಕಿನ ಕ್ರೀಡೋತ್ಸವ – ವಾರ್ಷಿಕೋತ್ಸವ 202-26 ಡಿ.29ರಂದು ಸಂಜೆ ಗಂಟೆ 5.15ಕ್ಕೆ ಆರಂಭಗೊಳ್ಳಲಿದೆ.


ಸಂಸದ ಕ್ಯಾ| ಬ್ರಿಜೇಶ್ ಚೌಟ ಅವರು ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಮಂಗಳೂರು ಕೆ.ಸಿ.ಎಂ.ಎ ಅಧ್ಯಕ್ಷರಾಗಿರುವ ಮೂಡಬಿದಿರೆ ಶ್ರೀ ವಿಜಯಲಕ್ಷ್ಮೀ ಕ್ಯಾಶ್ ಇಂಡಸ್ಟ್ರೀಸ್‌ನ ಆಡಳಿತಪಾಲುದಾರರಾಗಿರುವ ಎಸ್ ಅನಂತಕೃಷ್ಣ ರಾವ್, ಪೋಷಕರಾಗಿರುವ ಕಾನಾವು ಸ್ಕಿನ್ ಕ್ಲಿನಿಕ್‌ನ ಡಾ. ನರಸಿಂಹ ಶರ್ಮ ಕೆ, ವಿಜಯಪುರದ ಪ್ರಗತಿಪರ ಕೃಷಿಕ ಪೋಷಕರಾಗಿರುವ ಬಸವರಾಜ್ ಪಾಟೀಲ್, ಸಂತ ಫಿಲೋಮಿನಾ ಕಾಲೇಜಿನ ಉಪನ್ಯಾಸಕ ಮತ್ತು ಹಿರಿಯ ವಿದ್ಯಾರ್ಥಿ ಚಂದ್ರಾಕ್ಷ ಪಿ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಸಂಜೆ ಗಂಟೆ 6.30ರಿಂದ ಸಾಂಸ್ಕೃತಿಕ ಮತ್ತು ಸಾಹ ಪ್ರದರ್ಶನ, ಯಕ್ಷಗಾನ ನಡೆಯಲಿದೆ. ಸಮೂಹ ನೃತ್ಯಗೂ, ಯೋಗಾಸನ, ಕರಾಟೆ, ಕೂಪಿಕಾ ಸಮತೋಲನ, ಬೆಂಕಿಯಲ್ಲಿ ಸಾಹಸಗಳು, ಕೋಲಾಟ, ಗೋಪುರ, ಮಲ್ಲಕಂಬ, ದೀಪಾರತಿ, ತುಳುನಾಡ ವೈಭವ, ರಾಣಿ ಅಬ್ಬಕ್ಕ ಪ್ರದರ್ಶನ ಕಾರ್ಯಕ್ರಮ ನಡೆಯಲಿದೆ ಎಂದು ಆಡಳಿತ ಮಂಡಳಿಯ ಅಧ್ಯಕ್ಷ ಎಸ್.ಜಯರಾಮ ಕೆದಿಲಾಯ ಅವರು ತಿಳಿಸಿದ್ದಾರೆ.













