ವಿಟ್ಲದ ಸುರಕ್ಷಾ ಹೆಲ್ತ್ ಸೆಂಟರ್‌ಗೆ 25 ವರ್ಷದ ಸಂಭ್ರಮ

0

ವಿಟ್ಲ: ಗ್ರಾಮೀಣ ಪ್ರದೇಶದ ಜನರಿಗೆ ಗುಣಮಟ್ಟದ ಆರೋಗ್ಯ ಸೇವೆ ಒದಗಿಸುವ ಉದ್ದೇಶದಿಂದ ಆರಂಭಗೊಂಡ ವಿಟ್ಲದ ಸುರಕ್ಷಾ ಹೆಲ್ತ್ ಸೆಂಟರ್ 25 ವರ್ಷದ ಸೇವಾ ಪಯಣವನ್ನು ಯಶಸ್ವಿಯಾಗಿ ಪೂರೈಸಿದೆ. 2000ರ ಡಿಸೆಂಬರ್ 28ರಂದು ಡಾ. ಗೀತಪ್ರಕಾಶ್‌ ಹಾಗೂ ಡಾ. ಗಾಯತ್ರಿ ಜಿ. ಪ್ರಕಾಶ್‌ ದಂಪತಿಗಳು ಸ್ಥಾಪಿಸಿದ ಈ ಆರೋಗ್ಯ ಕೇಂದ್ರ, ಕುಟುಂಬ ವೈದ್ಯಪದ್ದತಿಯನ್ನು ಆಧಾರವಾಗಿಟ್ಟುಕೊಂಡು ನಿರಂತರ ಸೇವೆ ನೀಡುತ್ತ ಬಂದಿದೆ.

ಹೆರಿಗೆ ಮತ್ತು ಸ್ತ್ರೀರೋಗ ತಜ್ಞರಾಗಿರುವ ಡಾ. ಗೀತಪ್ರಕಾಶ್‌ ಅವರು ಇದುವರೆಗೆ 7,000ಕ್ಕೂ ಅಧಿಕ ಸುರಕ್ಷಿತ ಹೆರಿಗೆಗಳನ್ನು ನಡೆಸಿ ಜನಾನುರಾಗಿಯಾಗಿ ಗುರುತಿಸಿಕೊಂಡಿದ್ದಾರೆ. ಲಯನ್ಸ್ ಸಂಸ್ಥೆಯ ಜಿಲ್ಲಾ ಗವರ್ನರ್ ಆಗಿಯೂ ಕಾರ್ಯನಿರ್ವಹಿಸಿ ಸಮಾಜಸೇವೆಯಲ್ಲೂ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಡಾ. ಗಾಯತ್ರಿ ಜಿ. ಪ್ರಕಾಶ್‌ ಅವರು ವೈದ್ಯಕೀಯ ಕ್ಷೇತ್ರದಲ್ಲಿ ಸಮರ್ಪಿತ ಸೇವೆ ಸಲ್ಲಿಸುತ್ತಾ ಕಳೆದ 25 ವರ್ಷಗಳಿಂದ ರೋಗಿಗಳ ಆರೈಕೆಯಲ್ಲಿ ತೊಡಗಿಸಿಕೊಂಡಿದ್ದಾರೆ.
ಹುಟ್ಟೂರಿನಲ್ಲೇ ಆರೋಗ್ಯ ಸೇವೆ ಆರಂಭಿಸಿ ತಾಯಿ–ಮಕ್ಕಳ ಆರೋಗ್ಯ ಸಂರಕ್ಷಣೆಗೆ ವಿಶೇಷ ಒತ್ತು ನೀಡಿದ ಸುರಕ್ಷಾ ಹೆಲ್ತ್ ಸೆಂಟರ್ ಇಂದು ಗ್ರಾಮೀಣ ಜನತೆಗೆ ಭರವಸೆಯ ಕೇಂದ್ರವಾಗಿ ಬೆಳೆದಿದೆ. ಸಂಸ್ಥೆಯ ಈ ಬೆಳವಣಿಗೆಗೆ ಸಹಕಾರ ನೀಡಿದ ಎಲ್ಲರಿಗೂ ಹೃತ್ಪೂರ್ವಕ ಕೃತಜ್ಞತೆ ಸಲ್ಲಿಸುತ್ತೇವೆ ಎಂದು ವೈದ್ಯ ದಂಪತಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here