






ರಾಮಕುಂಜ: ಶ್ರೀ ರಾಮಕುಂಜೇಶ್ವರ ಕನ್ನಡ ಮಾಧ್ಯಮ ಪ್ರೌಢಶಾಲೆಯಲ್ಲಿ ಕರ್ನಾಟಕದ ಹ್ಯೂಮನ್ ಕಂಪ್ಯೂಟರ್ ಖ್ಯಾತಿಯ ಬಸವರಾಜ್ ಉಮ್ರಾಣಿ ಅವರಿಂದ ಗಣಿತದ ತರಬೇತಿ ಹಾಗೂ ಓದುವ ದಿನಚರಿಯ ಕುರಿತು ಮಾಹಿತಿ ಕಾರ್ಯಕ್ರಮವು ಶಾಲಾ ಸಭಾಂಗಣದಲ್ಲಿ ನಡೆಯಿತು.


ಹುಟ್ಟಿನಿಂದ ಅಂಧರಾದರೂ ಮೂರಂಕಿಯ ಮಗ್ಗಿಯನ್ನು ನೀರು ಕುಡಿದಷ್ಟೇ ಸುಲಭವಾಗಿ ಹೇಳಬಲ್ಲ, ಕಳೆದ ನೂರು ವರ್ಷದ ಯಾವುದೇ ದಿನಾಂಕಕ್ಕೂ ಕ್ಷಣದಲ್ಲಿ ಆ ದಿನಾಂಕದ ವಾರ ಹೇಳಬಲ್ಲ ಪ್ರತಿಭೆಯನ್ನು ಪ್ರದರ್ಶಿಸಿದ ಬಸವರಾಜ್ ಉಮ್ರಾಣಿ ಇವರು ಲೆಕ್ಕಗಳನ್ನು ಬಿಡಿಸುವ ಕಲೆಯನ್ನು ವಿದ್ಯಾರ್ಥಿಗಳಿಗೆ ತಿಳಿಸಿದರು.



ವಿದ್ಯಾರ್ಥಿಗಳ ಜೊತೆ ಸಂವಾದ ನಡೆಸಿ ಹಲವು ವಿದ್ಯಾರ್ಥಿಗಳ ಸಂಶಯಗಳನ್ನು ಪರಿಹರಿಸಿದರು. ಈ ಸಂದರ್ಭದಲ್ಲಿ ಎಸ್.ಆರ್.ಕೆ ಲ್ಯಾಡರ್ಸ್ ಮಾಲಕ ಕೇಶವ ಅಮೈ, ಪ್ರೌಢಶಾಲಾ ಮುಖ್ಯಗುರು ಸತೀಶ್ ಭಟ್, ನವೀನ್ ಅನಘವಾಡಿ, ಪ್ರೌಢಶಾಲಾ ಮತ್ತು ಪಿಯುಸಿ ವಿದ್ಯಾರ್ಥಿಗಳು ಹಾಗೂ ಬೋಧಕ ಮತ್ತು ಬೋಧಕೇತರ ವೃಂದದವರು ಉಪಸ್ಥಿತರಿದ್ದರು.










