ಕೂರ್ನಡ್ಕ ಪ್ರೀಮಿಯರ್ ಲೀಗ್-ಸೀಸನ್ 4 ಕ್ರಿಕೆಟ್ ಸಂಪನ್ನ

0

ಕ್ಲಾಸಿಕ್ ಫ್ರೆಂಡ್ಸ್ ಚಾಂಪಿಯನ್, ಶೇಖ್ ವಾರಿಯರ್ಸ್ ರನ್ನರ್ಸ್

ಪುತ್ತೂರು: ರೆಣಿಗೇಡ್ಸ್ ಕೂರ್ನಡ್ಕ ಹಾಗೂ ಬ್ರದರ್ಸ್ ಕೂರ್ನಡ್ಕ ಇವರ ಸಾರಥ್ಯದಲ್ಲಿ ಕೂರ್ನಡ್ಕ, ಕೆಮ್ಮಿಂಜೆ, ಮರೀಲು, ಸಾಮೆತ್ತಡ್ಕ ವ್ಯಾಪ್ತಿಯ ಕ್ರಿಕೆಟ್ ಪಟುಗಳನ್ನೊಳಗೊಂಡ ಲೀಗ್ ಮಾದರಿಯ ‘ಕೂರ್ನಡ್ಕ ಪ್ರೀಮಿಯರ್ ಲೀಗ್-ಸೀಸನ್ 4’ ಓವರ್‌ಆರ್ಮ್ ನಿಗದಿತ ಓವರ್‌ಗಳ ಕ್ರಿಕೆಟ್ ಟೂರ್ನಮೆಂಟ್ ಜ.3 ಹಾಗೂ 4 ರಂದು ಕೊಂಬೆಟ್ಟು ತಾಲೂಕು ಕ್ರೀಡಾಂಗಣದಲ್ಲಿ ಜರಗಿದ್ದು ಯಶಸ್ವಿ ಸಂಪನ್ನ ಕಂಡಿದೆ.


ಈ ಟೂರ್ನಮೆಂಟಿನಲ್ಲಿ ಕ್ಲಾಸಿಕ್ ಫ್ರೆಂಡ್ಸ್ ತಂಡ ಚಾಂಪಿಯನ್ ಆಗಿ, ಶೇಖ್ ವಾರಿಯರ್ಸ್ ತಂಡ ರನ್ನರ್ಸ್ ಆಗಿ ಮೂಡಿ ಬಂದಿದೆ. ಟೂರ್ನಮೆಂಟ್‌ನ ಪಂದ್ಯಶ್ರೇಷ್ಟ ಹಾಗೂ ಸರಣಿಶ್ರೇಷ್ಟರಾಗಿ ಕ್ಲಾಸಿಕ್ ಫ್ರೆಂಡ್ಸ್‌ನ ಅಕ್ಷಯ್, ಉತ್ತಮ ಬ್ಯಾಟರ್ ಆಗಿ ರೆಡ್ ಕೆಮ್ಮಿಂಜೆ ತಂಡದ ಲತೀಫ್, ಉತ್ತಮ ಬೌಲರ್ ಆಗಿ ಶೇಖ್ ವಾರಿಯರ‍್ಸ್ ತಂಡದ ಶಾಹಿಲ್‌ರವರು ಹೊರ ಹೊಮ್ಮಿದ್ದಾರೆ.


ಅತಿಥಿಗಳಾಗಿ ಸಿಝ್ಲರ್ ಸಾಪ್ಟ್ ಡ್ರಿಂಕ್ಸ್ ಮಾಲಕ ಪ್ರಸನ್ನ ಕುಮಾರ್ ಶೆಟ್ಟಿ, ಪ್ರಸಾದ್ ಇಂಡಸ್ಟ್ರೀಸ್‌ನ ಶಿವಪ್ರಸಾದ್ ಶೆಟ್ಟಿ, ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯ ಈಶ್ವರ್ ಬೆಡೇಕರ್, ಕಾಂಗ್ರೆಸ್ ಯುವನಾಯಕ ಫಾರೂಕ್ ಬಾಯಾಬೆ, ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಎಚ್.ಮಹಮ್ಮದ್ ಆಲಿ, ಮಾಜಿ ನಗರಸಭಾ ಸದಸ್ಯ ಯೂಸುಫ್ ಡ್ರೀಮ್ಸ್, ಆಶೀರ್ವಾದ್ ಎಂಟರ್ಪ್ರೈಸಸ್‌ನ ಸುಲ್ತಾನ್, ಪುತ್ತೂರು ಯುವ ಕಾಂಗ್ರೆಸ್ ಅಧ್ಯಕ್ಷ ಅಖಿಲ್ ಕಲ್ಲಾರೆ, ಡ್ರೀಮ್ಸ್ ಪುತ್ತೂರು ಹಸೈನಾರ್, ಸಾಲ್ಮರ ಮೌಂಟನ್ ವ್ಯೂ ಶಾಲೆಯ ಸಂಚಾಲಕ ಮೊಹಮ್ಮದ್ ಸಾಹೇಬ್, ಉದ್ಯಮಿ ಹಾಫಿಲ್ ಕೆ.ಎಂ, ಕೆ.ಎಂ ಅಬ್ದುಲ್ಲ ಕೂರ್ನಡ್ಕ, ಖಾದರ್ ಕೆ.ಎಂ ಕೂರ್ನಡ್ಕ, ಕೆ.ಎಸ್ ಟ್ರೇಡರ್ಸ್ ಶಾಫಿ, ಅಬೂಬಕ್ಕರ್ ಪಿಸಿಎನ್ ಕೂರ್ನಡ್ಕ, ರಝಾಕ್ ಬಿ.ಎಚ್ ಬಪ್ಪಳಿಗೆ, ಶಮೀರ್ ಸ್ಕೇಲ್‌ರವರು ಭಾಗವಹಿಸಿದ್ದರು.

ವಿಶೇಷತೆಗಳು..
-ಹಿಂದು, ಮುಸ್ಲಿಂ, ಕ್ರಿಶ್ಚಿಯನ್ ಧರ್ಮದ ಮೂವರು ಫಲಾನುಭವಿ ವಿದ್ಯಾರ್ಥಿಗಳ ಕಲಿಕೆಗೆ ಪೂರಕವಾಗಿ ಸ್ಕಾಲರ್‌ಶಿಪ್ ಹಸ್ತಾಂತರ
-ಡ್ರಗ್ಸ್ ಮುಕ್ತ ಪುತ್ತೂರು ಇದರ ಅಂಗವಾಗಿ ಜನಜಾಗೃತಿ
-ಕಲರ್ಸ್ ಕನ್ನಡ ಅನುಬಂಧ ಪ್ರಶಸ್ತಿ ವಿಜೇತ ಮಾಧವ ಪ್ರಭುರವರಿಗೆ ಸನ್ಮಾನ

6 ತಂಡಗಳು…
-ಡಿಸಿಕೆ ಡಾಮಿನೇಟರ್ಸ್
-ರೆಡ್ ಕೆಮ್ಮಿಂಜೆ
-ಎಸ್&ಟಿ ಬೆಂಗಳೂರು
-ಶೇಖ್ ವಾರಿಯರ್ಸ್
-ಬಾಂಬೆ ರಾಕರ್ಸ್
-ಕ್ಲಾಸಿಕ್ ಫ್ರೆಂಡ್ಸ್

LEAVE A REPLY

Please enter your comment!
Please enter your name here