







ಪುತ್ತೂರು: ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬೊಳುವಾರು ಶ್ರೀ ಆಂಜನೇಯ ಯಕ್ಷಗಾನ ಕಲಾಸಂಘದಿಂದ ನಡೆಯುವ ತಿಂಗಳ ಸರಣಿ ತಾಳಮದ್ದಳೆ ಜ.5ರಂದು ದೇವಳದ ರಾಜಗೋಪುರದಲ್ಲಿ”ಅತಿಕಾಯ ಮೋಕ್ಷ ” ತಾಳಮದ್ದಳೆಯೊಂದಿಗೆ ನಡೆಯಿತು.


ಹಿಮ್ಮೇಳದಲ್ಲಿ ಎಲ್ ಯನ್,ಭಟ್ ಬಟ್ಯ ಮೂಲೆ, ನಿತೀಶ್ ಎಂಕಣ್ಣ ಮೂಲೆ, ಮುರಳಿಧರ ಕಲ್ಲೂರಾಯ ಕುಂಜೂರು ಪಂಜ, ಶ್ರೀಪತಿ ಭಟ್ ಉಪ್ಪಿನಂಗಡಿ, ಶರಣ್ಯ ನೆತ್ತರಕೆರೆ, ಸಮರ್ಥ ವಿಷ್ಣು ಕಡಂಬಳಿಕೆ, ಹರೀಶ್ ಕೃಷ್ಣ ಪುಣಚ ಸಹಕರಿಸಿದ್ದರು.



ಮುಮ್ಮೇಳದಲ್ಲಿ ಶ್ರೀರಾಮ ( ಭಾಸ್ಕರ್ ಬಾರ್ಯ), ರಾವಣ ( ಹರಿಣಾಕ್ಷಿ ಜೆ ಶೆಟ್ಟಿ), ಅತಿಕಾಯ ( ಗುಂಡ್ಯಡ್ಕ ಈಶ್ವರ ಭಟ್ ಮತ್ತು ಗುಡ್ಡಪ್ಪ ಬಲ್ಯ), ವಿಭೀಷಣ ( ಲಕ್ಷ್ಮಿಕಾಂತ ಹೆಗಡೆ ಪುತ್ತೂರು ) ಸಹಕರಿಸಿದರು. ಅಧ್ಯಕ್ಷ ಭಾಸ್ಕರ್ ಬಾರ್ಯ ಸ್ವಾಗತಿಸಿ ಟಿ. ರಂಗನಾಥರಾವ್ ವಂದಿಸಿದರು.










