






ಪುತ್ತೂರಿಗೆ ಪ್ರಮೋದ ಕುಮಾರ ಬಿ
ಅರುಣನಾಗೇಗೌಡ ರಾಜ್ಯ ಗುಪ್ತವಾರ್ತೆಗೆ
ಬಂಟ್ವಾಳದ ವಿಜಯಪ್ರಸಾದ್ ಐಜಿಪಿ ಕಚೇರಿಗೆ


ಪುತ್ತೂರು:ರಾಜ್ಯದ 19 ಡಿವೈಎಸ್ಪಿ(ಸಿವಿಲ್)ಗಳನ್ನು ವರ್ಗಾವಣೆ ಮಾಡಿ ಸರ್ಕಾರ ಆದೇಶಿಸಿದೆ.ಪುತ್ತೂರು ಉಪವಿಭಾಗದ ಡಿವೈಎಸ್ಪಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಅರುಣ ನಾಗೇಗೌಡ ಅವರನ್ನು ರಾಜ್ಯ ಗುಪ್ತವಾರ್ತೆಗೆ ವರ್ಗಾವಣೆಗೊಳಿಸಲಾಗಿದೆ.ರಾಜ್ಯ ಗುಪ್ತ ವಾರ್ತೆ ಘಟಕಕ್ಕೆ ವರ್ಗಾವಣೆ ಆದೇಶದಲ್ಲಿದ್ದ ಪ್ರಮೋದ ಕುಮಾರ ಬಿ.ಅವರ ಸ್ಥಳ ನಿಯುಕ್ತಿಯನ್ನು ಮಾರ್ಪಡಿಸಿ ಪುತ್ತೂರು ಉಪವಿಭಾಗದ ಡಿವೈಎಸ್ಪಿಯಾಗಿ ನೇಮಕಗೊಳಿಸಿ ವರ್ಗಾವಣೆಗೊಳಿಸಲಾಗಿದೆ.



ಮೈಸೂರು ಮೂಲದ ಅರುಣ ನಾಗೇಗೌಡ ಅವರು ಕಳೆದ ಎರಡೂವರೆ ವರ್ಷಗಳಿಂದ ಪುತ್ತೂರು ಉಪವಿಭಾಗದ ಡಿವೈಎಸ್ಪಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು.ಬಂಟ್ವಾಳ ಉಪವಿಭಾಗದ ಡಿವೈಎಸ್ಪಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಪುತ್ತೂರು ಮೂಲದ ವಿಜಯಪ್ರಸಾದ್ ಎಸ್.ಅವರನ್ನು ಪಶ್ಚಿಮ ವಲಯ ಐಜಿಪಿ ಕಚೇರಿಗೆ ನಿಯುಕ್ತಿಗೊಳಿಸಲಾಗಿದೆ.ಆಂತರಿಕ ಭದ್ರತೆ ವಿಭಾಗದಲ್ಲಿದ್ದ ಗಣೇಶ್ ಎಂ.ಹೆಗಡೆ ಅವರನ್ನು ಬಂಟ್ವಾಳ ಉಪವಿಭಾಗದ ಡಿವೈಎಸ್ಪಿಯಾಗಿ ವರ್ಗಾವಣೆಗೊಳಿಸಲಾಗಿದೆ.ಪಶ್ಚಿಮ ವಲಯ ಐಜಿಪಿ ಕಚೇರಿಯಲ್ಲಿದ್ದ ಬೆಳ್ಳಿಯಪ್ಪ ಕೆ.ಯು.ಅವರನ್ನು ಕಾರ್ಕಳ ಉಪವಿಭಾಗಕ್ಕೆ ವರ್ಗಾವಣೆಗೊಳಿಸಲಾಗಿದೆ.










