






ಪುಣಚ: ಪುಣಚ ಬೈಲುಗುತ್ತು, ಸಂಕೇಶ ಕೊಡಂಗೆ ಗ್ರಾಮದೈವ ಶ್ರೀ ಧೂಮಾವತಿ ದೈವದ ನೇಮೋತ್ಸವ ಸಂಕೇಶ ಕೊಡಂಗೆ ದೈವಸ್ಥಾನದಲ್ಲಿ ಜ.7ರಂದು ಬೆಳಿಗ್ಗೆ ನಡೆಯಿತು.


ಜ.6ರಂದು ಬೆಳಿಗ್ಗೆ ಗುರುರಾಜ್ ಕುಂಟುಕುಡೇಲು ರವರ ಪೌರೋಹಿತ್ಯದಲ್ಲಿ ನಾಗತಂಬಿಲ ನಡೆದು ರಾತ್ರಿ ಪುದುಕೋಲ ನೇಮೋತ್ಸವ ನಡೆಯಿತು.



ಜ.7ರಂದು ಬೆಳಿಗ್ಗೆ ಗ್ರಾಮದೈವ ಶ್ರೀ ಧೂಮಾವತಿ ದೈವದ ನೇಮೋತ್ಸವ ನಡೆದು ಹರಿಕೆ, ಪ್ರಸಾದ ವಿತರಣೆ ಮಧ್ಯಾಹ್ನ ಅನ್ನಸಂತರ್ಪಣೆ ನಡೆಯಿತು. ಬೈಲುಗುತ್ತು ಕುಟುಂಬದ ಯಜಮಾನ ಜಗನ್ನಾಥ ರೈ, ಬೈಲುಗುತ್ತು ಕುಟುಂಬಸ್ಥರು-ಬಂಧುಗಳು, ಸಂಕೇಶ ಕೊಡಂಗೆ ಮನೆ ನಾಗಪ್ಪ ಪೂಜಾರಿ ಸೇರಿದಂತೆ ಗ್ರಾಮಸ್ಥರು, ಭಕ್ತಾದಿಗಳು ಪಾಲ್ಗೊಂಡು ಪ್ರಸಾದ ಸ್ವೀಕರಿಸಿದರು.










