






ನೆಲ್ಯಾಡಿ: ಶಿರಾಡಿ ನಿವಾಸಿ ಮಂಜು ನಾಯ್ಕ (49ವ.) ಎಂಬವರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಜ.9ರಂದು ಸಂಜೆ ಕಡಬ ತಾಲೂಕಿನ ಶಿರಾಡಿ ಗ್ರಾಮದಲ್ಲಿ ನಡೆದಿದೆ.


ಮದ್ಯ ಸೇವನೆ ಮಾಡಿ ಕಿರುಕುಳ ನೀಡುತ್ತಿದ್ದ ಹಿನ್ನೆಲೆಯಲ್ಲಿ ಮಂಜುನಾಯ್ಕ್ ಅವರು ಪತ್ನಿ ಸುಶೀಲ ಅವರ ಮಾವ ತನಿಯಪ್ಪ ಅವರ ಮನೆಯಲ್ಲಿದ್ದರು. ಜ.9ರಂದು ಸಂಜೆ ಶಿರಾಡಿ ಗ್ರಾಮದ ಬರಮೇಲು ಎಂಬಲ್ಲಿ ಪ್ಲಾಸ್ಟಿಕ್ ಬೆಲ್ಟ್‌ನ ಒಂದು ತುದಿಯನ್ನು ತಾರಸಿ ಕಟ್ಟಡದ ಮೇಲ್ಭಾಗದ ಸಿಮೆಂಟ್ ಕಿಟಕಿಯ ತೂತಿಗೆ ಕಟ್ಟಿ ಇನ್ನೊಂದು ತುದಿಯನ್ನು ಕುತ್ತಿಗೆಗೆ ಕಟ್ಟಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವರದಿಯಾಗಿದೆ. ಈ ಬಗ್ಗೆ ಮೃತರ ಪತ್ನಿ ಸುಶೀಲ ಅವರು ನೀಡಿದ ದೂರಿನಂತೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.













