






ವಾಹನದ ಹಾಗೆ ದೇಹಕ್ಕೂ ಸರ್ವಿಸ್ ಮಾಡುತ್ತಿರಬೇಕು: ಶಾಸಕ ಅಶೋಕ್ ರೈ


ಪುತ್ತೂರು : ನಾವು ನಮ್ಮ ವಾಹನವನ್ನು ಸಮಯಕ್ಕೆ ಸರಿಯಾಗಿ ಸರ್ವಿಸ್ ಮಾಡುತ್ತೇವೆ ಆದರೆ ನಮ್ಮ ದೇಹ ,ಆರೋಗ್ಯದ ಬಗ್ಗೆ ನಮಗೆ ನಿರ್ಲಕ್ಷ್ಯ ಸಲ್ಲದು ವಾಹನಕ್ಕೆ ಸರ್ವಿಸ್ ಮಾಡುವ ಹಾಗೆ ನಮ್ಮ ದೇಹಕ್ಕೂ ಮಾಡಿಸಬೇಕು ಎಂದು ಶಾಸಕ ಅಶೋಕ್ ರೈ ಹೇಳಿದರು.



ಅವರು ಶ್ರೀ ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಹಾಗೂ ಇತರೆ ಸಂಘಟನೆಗಳ ಸಹಯೋಗದೊಂದಿಗೆ ಪುತ್ತೂರಿನ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ನಟರಾಜ ವೇದಿಕೆಯಲ್ಲಿ ನಡೆದ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.
ದೇಹ ರಿಪೇರಿಗೆ ಬರುವ ಮೊದಲೇ ನಮ್ಮ ಶರೀರದ ಆರೋಗ್ಯ ಸ್ಥಿತಿ ಹೇಗಿದೆ ಎಂಬುದನ್ನು ಪರಿಶೀಲನೆ ಮಾಡಿಕೊಳ್ಳಬೇಕು. ದುರಸ್ತಿ ಬಂದ ದೇಹ ಎಂದಿಗೂ ಆರೋಗ್ಯದಿಂದ ಇರಲು ಸಾಧ್ಯವಿಲ್ಲ. ದೇಹಕ್ಕೆ ಅಥವಾ ಹೊಟ್ಟೆಗೆ ಎಷ್ಟು ಬೇಕೋ ಅಷ್ಟೇ ತಿನ್ನುವ ಹವ್ಯಾಸ ರೂಡಿಸಿಕೊಳ್ಳಿ. ನಮ್ಮ ಆರೋಗ್ಯವನ್ನು ನಾವೇ ಕಾಪಾಡಬೇಕು ಎಂದು ಹೇಳಿದರು.
ನಾವು ಪ್ರತೀಯೊಬ್ಬರೂ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ಇರಬೇಕು, ಆಗಾಗ ನಮ್ಮ ಆರೋಗ್ಯವನ್ನು ತಪಾಸಣೆ ಮಾಡಿಕೊಳ್ಳುವ ಪೃವೃತ್ತಿಯನ್ನು ರೂಡಿಸಿಕೊಳ್ಳಿ ಆರೋಗ್ಯವೇ ದೊಡ್ಡ ಸಂಪತ್ತು. ಏನೇ ಆದರೂ ನಾವು ಟೆನ್ಸ್ಯನ್ ತೆಗೆದುಕೊಳ್ಳಬಾರದು, ಟೆನ್ಸ್ಯನ್ ಅನೇಕ ರೋಗಗಳಿಗೆ ಅಡಿಪಾಯ ಹಾಕುತ್ತದೆ . ಸಣ್ಣ ಪ್ರಾಯದಲ್ಲಿಯೇ ಕಾಳಜಿ ವಹಿಸಿಕೊಂಡಲ್ಲಿ ವೃದ್ದಾಪ್ಯದಲ್ಲಿ ನೆಮ್ಮದಿ ಕಾಣಲು ಸಾಧ್ಯ ಎಂದು ಹೇಳಿದರು.
ಬೇರೆ ದೇಶಗಳಿಗೆ ಹೋಲಿಕೆ ಮಾಡಿದರೆ ನಮ್ಮಲ್ಲಿ ಆರೋಗ್ಯದ ಬಗ್ಗೆ ಕಾಳಜಿ ಕಡಿಮೆ ಇದೆ ಎಂದು ಶಾಸಕರು ಹೇಳಿದರು.ಆರೋಗ್ಯದ ಬಗ್ಗೆ ನಮ್ಮ ಕಾಳಜಿ ಕಡಿಮೆಯಾಗಿರುವುದೇ ನಮ್ಮಲ್ಲಿ ಅನೇಕ ಸಾವು ನೋವುಗಳಿಗೆ ಕಾರಣವಾಗುತ್ತಿದೆ,ನೀವು ಆರೋಗ್ಯವಂತರಾಗಿಯೇ ಇದ್ದರೂ ದೇಹವನ್ನು ಕಡ್ಡಾಯವಾಗಿ ತಪಾಸಣೆಗೊಳಪಡಿಸಿ ಎಂದು ಸಲಹೆ ಮಾಡಿದರು.
ಆಹಾರ ಪದ್ದತಿಯೇ ರೋಗಕ್ಕೆ ಕಾರಣ
ನಾವು ನಿತ್ಯ ಸೇವಿಸುವ ಆಹಾರವೇ ನಮ್ಮ ಆರೋಗ್ಉ ಕೆಡಲು ಕಾರಣವಾಗುತ್ತಿದೆ. ದೇಹಕ್ಕೆ ಸಮತೋಲನ ಆಹಾರವನ್ನು ನೀಡದೆ ಸಿಕ್ಕಿ ಸಿಕ್ಕಿದ್ದನ್ನೆಲ್ಲಾ ನಾವು ತಿನ್ನುತ್ತಾ ಹೊಟ್ಟೆ ತುಂಬಿಸಿಕೊಂಡಲ್ಲಿ ಅದನ್ನು ನಮ್ಮ ದೇಹ ಸ್ವೀಕರಿಸುವುದಿಲ್ಲ. ವೈದ್ಯರ ಸಲಹೆ ಪಡೆದು ನಾವು ದೇಹವನ್ನು ಸುರಕ್ಷಿತವಾಗಿಡಲು ಪ್ರಯತ್ನಿಸಿ. ಹೆಚ್ಷು ತರಕಾರಿ ಜೊತೆಗೆ ಮಾಂಸಾಹಾರವನ್ನು ತಿನ್ನಿ ಆದರೆ ಆಹಾರದಲ್ಲಿ ನಿಯಂತ್ರಣದಲ್ಲಿರಲಿ ಎಂದು ಸಲಹೆ ನೀಡಿದರು.
ವೇದಿಕೆಯಲ್ಲಿ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪಂಜಿಗುಡ್ಡೆ ಈಶ್ವರಭಟ್, ವಿಜಯಕುಮಾರ, ಕೋರಂ ಸಮಿತಿ ಸದಸ್ಯರಾದ ಸುಬಾಶ್ ರೈ, ವಿನಯಕುಮಾರ್ ,ರಾಕೇಶ್ ರೈ ಕೆಡೆಂಜಿ ಮೊದಲಾದವರು ಇದ್ದರು.










