







ನೆಲ್ಯಾಡಿ: ಗ್ರಾಮ ಪಂಚಾಯತ್ ಎಸ್.ಸಿ. ಹಾಗೂ ಎಸ್.ಟಿ. ಅನುದಾನದಲ್ಲಿ ಪಡುಬೆಟ್ಟು 4ನೇ ವಾರ್ಡ್‌ನ ಫಲಾನುಭವಿಗಳಿಗೆ ಟ್ಯಾಂಕ್ ಮತ್ತು ಅಂಗವಿಕಲರಿಗೆ ಫ್ಯಾನ್ ವಿತರಣೆ ಕಾರ್ಯಕ್ರಮ ಜ.11ರಂದು ಪಡುಬೆಟ್ಟುವಿನಲ್ಲಿ ಗ್ರಾ.ಪಂ.ಅಧ್ಯಕ್ಷ ಸಲಾಂ ಬಿಲಾಲ್ ಅವರ ಮನೆಯಲ್ಲಿ ನಡೆಯಿತು.



ಸೌಲಭ್ಯ ವಿತರಣೆ ಮಾಡಿದ ಜಿ.ಪಂ. ಮಾಜಿ ಸದಸ್ಯರಾದ ಸರ್ವೋತ್ತಮ ಗೌಡ ಅವರು ಮಾತನಾಡಿ, ಎಸ್‌ಟಿ, ಎಸ್‌ಸಿ ಅನುದಾನದ ಸೌಲಭ್ಯವನ್ನು ಗ್ರಾ.ಪಂ.ಅಧ್ಯಕ್ಷ ಸಲಾಂ ಬಿಲಾಲ್ ಹಾಗೂ ವಾರ್ಡ್‌ನ ಸದಸ್ಯರು ಪಕ್ಷ ಬೇಧ ಮರೆತು ವಾರ್ಡ್‌ನ ಮನೆ ಮನೆಗೆ ತಲುಪಿಸುವ ಕೆಲಸ ಮಾಡಿದ್ದಾರೆ. ನೆಲ್ಯಾಡಿ ಗ್ರಾಮ ಪಂಚಾಯಿತಿಯಲ್ಲಿ ಈ ತನಕ ಈ ರೀತಿ ಹಂಚಿಕೆಯಾಗಿಲ್ಲ ಎಂದು ಹೇಳಿ ಮೆಚ್ಚುಗೆ ವ್ಯಕ್ತಪಡಿಸಿದರು. ಮಹಿಳಾ ಕಾಂಗ್ರೆಸ್‌ನ ದ.ಕ.ಜಿಲ್ಲಾ ಅಧ್ಯಕ್ಷೆ ಉಷಾ ಅಂಚನ್, ನೆಲ್ಯಾಡಿ ವಲಯ ಕಾಂಗ್ರೆಸ್ ಅಧ್ಯಕ್ಷ ಜೋಸ್ ಕೆ.ಜೆ.ನೆಲ್ಯಾಡಿ, ಕರಾಯ ಶಾಲೆ ಮುಖ್ಯಗುರು ಮಹಾಲಿಂಗ ಮಾಸ್ಟರ್ ಅವರು ಮಾತನಾಡಿ ವಾರ್ಡ್‌ನ ಸದಸ್ಯರ ಕೆಲಸಗಳಿಗೆ ಮೆಚ್ಚುಗೆ ವ್ಯಕ್ತಪಡಿಸಿದರು.



ಗ್ರಾ.ಪಂ.ಅಧ್ಯಕ್ಷ ಸಲಾಂ ಬಿಲಾಲ್, ಸದಸ್ಯರಾದ ಪುಷ್ಪ ಪಡುಬೆಟ್ಟು, ಜಯಲಕ್ಷ್ಮಿಪ್ರಸಾದ್, ಭೂ ನ್ಯಾಯ ಮಂಡಳಿ ಸದಸ್ಯ ಅಬ್ರಹಾಂ ವರ್ಗೀಸ್, ಪಂಚ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಸದಸ್ಯ ಸತೀಶ್ ಇಚಿಲಂಪಾಡಿ, ದಲಿತ ಮುಖಂಡರಾದ ಕೆ.ಪಿ. ಆನಂದ, ಮಾರ್ಷಲ್ ಡಿ’ಸೋಜ ಉಪಸ್ಥಿತರಿದ್ದರು.
ಅಧ್ಯಕ್ಷರು/ಸದಸ್ಯರಿಗೆ ಗೌರವಾರ್ಪಣೆ
ಉತ್ತಮ ಸೇವೆ ಸಲ್ಲಿಸುತ್ತಿರುವ ಗ್ರಾ.ಪಂ.ಅಧ್ಯಕ್ಷ ಸಲಾಂ ಬಿಲಾಲ್, ಸದಸ್ಯರಾದ ಪುಷ್ಪಾ ಪಡುಬೆಟ್ಟು, ಜಯಲಕ್ಷ್ಮಿಪ್ರಸಾದ್ ಅವರನ್ನು ಈ ಸಂದರ್ಭದಲ್ಲಿ ಗ್ರಾಮಸ್ಥರು ಸನ್ಮಾನಿಸಿ ಗೌರವಿಸಿದರು.










