






ಪುತ್ತೂರು: ಕೊಯಂಬುತ್ತೂರು ICAR ಕಬ್ಬು ಸಂಶೊಧನ ಕೇಂದ್ರದಲ್ಲಿ ಮುಖ್ಯ ವಿಜ್ಞಾನಿಯಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದ ಹಿರೆಬಂಡಾಡಿ ಸೆಟ್ಲೆಪಾಲು ನಿವಾಸಿ ಡಾ.ಬಿ ಸುಂದರ್ (73 ವ.)ರವರು ಅಲ್ಪ ಕಾಲದ ಅಸೌಖ್ಯದಿಂದ ಮಂಗಳೂರಿನಲ್ಲಿ ಜ.11 ರಂದು ನಿಧನರಾದರು.


ಮೃತರು ಕೊಯಂಬುತ್ತೂರು ICAR ಕಬ್ಬು ಸಂಶೊಧನ ಕೇಂದ್ರದಲ್ಲಿ ಮುಖ್ಯ ವಿಜ್ಞಾನಿಯಾಗಿ, ಕ್ರಾಪ್ ಪ್ರೊಡಕ್ಷನ್ ಡಿಪಾರ್ಟ್‌ಮೆಂಟ್ ಮುಖ್ಯಸ್ಥರಾಗಿ, ನಿರ್ದೇಶಕರಾಗಿ, ಸೇವೆ ಸಲ್ಲಿಸಿ ನಿವೃತ್ತರಾಗಿದ್ದು, ತಮಿಳುನಾಡು ಯುನಿವರ್ಸಿಟಿಯಲ್ಲಿ ಚಿನ್ನದ ಪದಕದೊಂದಿಗೆ ತನ್ನ Ph.D ಪದವಿಯನ್ನು ಪೂರೈಸಿದ ಪ್ರತಿಭಾವಂತ.ಕೃಷಿ ಕ್ಷೇತ್ರದ ಸಂಶೋಧನೆಗಾಗಿ 1987 ರಲ್ಲಿ ಜವಹರ್‌ಲಾಲ್ ನೆಹರೂ ರಾಷ್ಟ್ರೀಯ ಪ್ರಶಸ್ತಿ ಪುರಸ್ಕ್ರತರಾಗಿದ್ದಾರೆ.ಕೃಷಿ ಸಂಶೋಧನೆಯಲ್ಲಿ ತನ್ನನ್ನು ತಾನು ತೊಡಗಿಸಿಕೊಂಡು ಎರಡು ಪುಸ್ತಕಗಳನ್ನು ಬರೆದಿದ್ದ ಇವರು ಶುಗರ್ ಕೇನ್ ಸುಂದರ್ ಎಂದು ಪ್ರಸಿದ್ದಿ ಪಡೆದಿದ್ದಾರೆ.



ಮೃತರು ಪತ್ನಿ ಅರುಣಾ ಸುಂದರ್,ಪುತ್ರಿ ಅಮೇರಿಕಾದಲ್ಲಿರುವ ಡಾ.ಜೋತ್ಸ್ನಾ,ಅಳಿಯ ಶಶಿ,ಪುತ್ರ ಆಸ್ಟ್ರೇಲಿಯಾದಲ್ಲಿರುವ ಹರ್ಷವರ್ಧನ್, ಸೊಸೆ ಮನಿಷಾ,ಮೊಮ್ಮಕ್ಕಳಾದ ಯಶ್ ಮತ್ತು ಕೃಷ್ ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.










