






ಪುತ್ತೂರು : ಪುತ್ತೂರು :ಈಶ್ವರಮಂಗಲ ಶ್ರೀ ಕ್ಷೇತ್ರ ಹನುಮಗಿರಿ ಬ್ರಹ್ಮಕಲಶೋತ್ಸವ ಪ್ರಯುಕ್ತ ನಡೆಯಲಿರುವ ಶ್ರೀರಾಮ ಹನುಮ ಜ್ಯೋತಿ ರಥಯಾತ್ರೆ ಹಾಗೂ ಶ್ರೀರಾಮ ತಾರಕ ಜಪ ದೀಕ್ಷೆಯ ಸಲುವಾಗಿ ಜ.4ರಂದು ಪಾಣಾಜೆ ಹಾಲು ಉತ್ಪಾದಕರ ಸಹಕಾರ ಸಂಘದ ಸಭಾಭವನದಲ್ಲಿ ಪಾಣಾಜೆ ಗ್ರಾಮ ಸಮಿತಿ ರಚನೆಯ ಬಗ್ಗೆ ಭಕ್ತಾಧಿಗಳ ಸಭೆ ನಡೆಯಿತು.


ನಗರ ಗ್ರಾಮ ರಚನಾ ಸಮಿತಿಯ ಸಂಚಾಲಕ ಸಾಜ ರಾಧಾಕೃಷ್ಣ ಆಳ್ವರ ಅಧ್ಯಕ್ಷತೆ ವಹಿಸಿದ್ದರು.ಹನುಮಗಿರಿ ಕ್ಷೇತ್ರದ ಆಡಳಿತ ಧರ್ಮದರ್ಶಿಗಳಾದ ನನ್ಯ ಅಚ್ಚುತ ಮೂಡೆತ್ತಾಯ, , ಸಮಿತಿಯ ಪ್ರಧಾನ ಕಾರ್ಯದರ್ಶಿಗಳಾದ ಆರ್ ಸಿ ನಾರಾಯಣ್,ಬ್ರಹ್ಮಕಲಶೋತ್ಸವ ಸ್ವಾಗತ ಸಮಿತಿಯ ಉಪಾಧ್ಯಕ್ಷರಾದ ಸೀತಾರಾಮ ರೈ ಕೆದಂಬಾಡಿಗುತ್ತು , ಪದಾಧಿಕಾರಿಗಳಾದ ಶ್ರೀರಾಂ ಪಕ್ಕಳ, ನಹುಷ ,ರಣಮಂಗಲ ಸುಬ್ರಹ್ಮಣ್ಯ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಶ್ರೀ ಕೃಷ್ಣ ಬೊಳಿಲಾಯ ,ಪಾಣಾಜೆ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರಾದ ನಾರಾಯಣ ಪ್ರಕಾಶ್ ನೆಲ್ಲಿತ್ತಿಮಾರು ಹಾಗೂ ಗ್ರಾಮದ ಭಕ್ತರ ಸಮ್ಮುಖದಲ್ಲಿ ಗ್ರಾಮ ಸಮಿತಿ ರಚನೆ ರಚಿಸಿದರು.




ಪಾಣಾಜೆ ಗ್ರಾಮ ಸಮಿತಿ ಅಧ್ಯಕ್ಷರಾಗಿ ನಾರಾಯಣ ಪ್ರಕಾಶ್ ನಿಲ್ಲೆತ್ತಿಮಾರು,ಪ್ರಧಾನ ಕಾರ್ಯದರ್ಶಿಯಾಗಿ ಲಕ್ಷ್ಮೀನಾರಾಯಣ ರೈ ಕೆದಂಬಾಡಿ,ಜಪ ಯಜ್ಞ ಸಮಿತಿ ಗ್ರಾಮ ಸಂಚಾಲಕರಾಗಿ ಅರವಿಂದ ಎಡಮಲೆ, ಸಹ ಸಂಚಾಲಕರಾಗಿ ಡಾ. ಅಖಿಲೇಶ್ ಪಾಣಾಜೆ,ಗಣಪತಿ ಬಲ್ಯಾಯ,ಜಯರಾಮ್ ರೈ ಚಂಬರಕಟ್ಟ,ನಾರಾಯಣ ಪೂಜಾರಿ ತೂಂಬಡ್ಕ ರಥಯಾತ್ರೆ ಗ್ರಾಮ ಸಂಚಾಲಕರಾಗಿ ರಮನಾಥ ರೈ ಪಡ್ಡಂಬೆಟ್ಟು,ಸಹ ಸಂಚಾಲಕರಾಗಿ ಶ್ರೀ ಹರಿ ನಡುಕಟ್ಟ, ಸಂದೀಪ್ ವಾಣಿಯನ್. ಲಕ್ಷೋತ್ತರ ನಾರಿಕೇಳ ಗ್ರಾಮ ಸಂಚಾಲಕರಾಗಿ ಬಾಬು ರೈ ಕೋಟೆ,ಸಹ ಸಂಚಾಲಕರಾಗಿ – ಪ್ರಕಾಶ್ ಕುಲಾಲ್,ಪ್ರವೀಣ್ ರೈ ಕೋಟೆ,ಹರೀಶ್ ಗುರಿಕ್ಕಿಲು, ಸುರೇಶ್ ಬೊಳ್ಳಿಂಬಳ
ಭಜನಾ ಸಂಕೀರ್ತನಾ ಗ್ರಾಮ ಸಂಚಾಲಕರಾಗಿ ಭರತ್ ಭರಣ್ಯ, ಸಹ ಸಂಚಾಲಕರಾಗಿ ಉದಯಸುಡುಕ್ಕುಳಿ, ಶಾರದಾ ಕೊಂದಲ್ಕ್ಕಾನ,ಮಹಿಳಾ ಸಮಿತಿ ಗ್ರಾಮ
ಸಂಚಾಲಕಿಯಾಗಿ ಜಯಶ್ರೀ ದೆವಸ್ಯ, ಸಾಮಾಜಿಕ ಜಾಲತಾಣ ಸಂಚಾಲಕರಾಗಿ ಪ್ರದೀಪ್ ಪಾಣಾಜೆ ಅವರನ್ನು ನೇಮಕಗೊಳಿಸಲಾಯಿತು.
ಈ ಸಂದರ್ಭದಲ್ಲಿ ನಾರಾಯಣ ಪ್ರಕಾಶ್, ಡಾ. ಅಖಿಲೇಶ್ ಪಾಣಾಜೆ, ಪುಷ್ಪರಾಜ ರೈ, ನಾರಾಯಣ ಪೂಜಾರಿ, ಸುಭಾಷ್ ರೈ , ಬಾಬು ಕೋಟೆ, ತಮ್ಮಣ್ಣ ನಾಯ್ಕ, ಸಂದೀಪ್, ಭರತ್ ಭರಣ್ಯ, ವೆಂಕಟಕೃಷ್ಣ ಭಟ್, ಶ್ರೀಧರ, ಸಂತೋಷ್ ಕುಮಾರ್, ಗೋಪಾಲಕೃಷ್ಣ, ಶಶಿಧರ, ಜಯರಾಮ, ರವಿಚಂದ್ರ, ಪ್ರಕಾಶ್, ಹರೀಶ, ಲಕ್ಷ್ಮೀನಾರಾಯಣ ರೈ ಕೆದಂಬಾಡಿ, ಜಯಶ್ರೀ, ಬಾಲಕೃಷ್ಣ ರೈ ಸೂರಂಬೈಲು, ಪ್ರದೀಪ್ ಪಾಣಾಜೆ, ಅರವಿಂದ ಎಡಮಲೆ, ಗಣೇಶ್, ಕೃಷ್ಣಪ್ರಕಾಶ್, ರಮಾನಾಥ ರೈ, ರವಿಶಂಕರ್, ಸುಶಾಂತ್, ರಾಧಾಕೃಷ್ಣ ಯಾದವ್, ಹರೀಶ್, ಪ್ರೀತೇಶ್, ಶ್ರೀಹರಿ, ಪ್ರವೀಣ್ ರೈ, ಉಮೇಶ ಭರಣ್ಯ ಹಾಗೂ ಇತರರು ಉಪಸ್ಥಿತರಿದ್ದರು.










