ಪುತ್ತೂರು ರೋಟರಿ ಮಲ್ಟಿ ಸ್ಪೆಷಾಲಿಟಿ ಸ್ಯಾಟಲೈಟ್ ಡೆಂಟಲ್ ಕ್ಲಿನಿಕ್ ನಲ್ಲಿ ಉಚಿತ ದಂತ ಚಿಕಿತ್ಸಾ ಶಿಬಿರ

0

ಪುತ್ತೂರು: ಬೊಳ್ವಾರು ಮಹಾವೀರ ವೆಂಚರ್ಸ್ ಬಿಲ್ಡಿಂಗ್ ನ ಪಾಲಿ ಕ್ಲಿನಿಕ್ ಒಂದನೇ ಮಹಡಿಯಲ್ಲಿ ಕಾರ್ಯಾಚರಿಸುತ್ತಿರುವ ಪುತ್ತೂರು ರೋಟರಿ ಮಲ್ಟಿ ಸ್ಪೆಷಾಲಿಟಿ ಸ್ಯಾಟಲೈಟ್ ಡೆಂಟಲ್ ಕ್ಲಿನಿಕ್ ನಲ್ಲಿ ಸುಳ್ಯ ಕೆವಿಜಿ ದಂತ ಮಹಾವಿದ್ಯಾಲಯ ಮತ್ತು ಆಸ್ಪತ್ರೆ ಯ ನಿರ್ವಹಣೆಯೊಂದಿಗೆ ಜ.12 ರಂದು ಬೆಳಿಗ್ಗೆಯಿಂದ ಅಪರಾಹ್ನದವರೆಗೆ ಉಚಿತ ದಂತ ಚಿಕಿತ್ಸಾ ಶಿಬಿರ ನಡೆಯಿತು.

ಕ್ಲಿನಿಕ್ ವೈದ್ಯೆ ಡಾ.ಶ್ರೀದೇವಿ ರವರು ಆಗಮಿಸಿದ ಫಲಾನುಭವಿಗಳಿಗೆ ಸೂಕ್ತ ಚಿಕಿತ್ಸೆ ನೀಡಿದರು.ಈ ಸಂದರ್ಭದಲ್ಲಿ ರೋಟರಿ ಕ್ಲಬ್ ಪುತ್ತೂರು ಅಧ್ಯಕ್ಷ ಡಾ.ಶ್ರೀಪ್ರಕಾಶ್ ಬಿ, ಪೂರ್ವಾಧ್ಯಕ್ಷರಾದ ಡಾ.ಅಶೋಕ್ ಪಡಿವಾಳ್, ಎ.ಜೆ ರೈ, ಸದಸ್ಯರಾದ ಹೆರಾಲ್ಡ್ ಮಾಡ್ತಾ, ಲೋವಲ್ ಮೆವಾಡ, ನಿಯೋಜಿತ ಅಧ್ಯಕ್ಷ ಪ್ರೊ. ದತ್ತಾತ್ರೇಯ ರಾವ್ ಸಹಿತ ಹಲವರು ಉಪಸ್ಥಿತರಿದ್ದರು.

ಕ್ಲಿನಿಕ್ ನಲ್ಲಿ ಮಂಗಳವಾರ ಬಾಯಿಯ, ಮುಖದ ಶಸ್ತ್ರ ಚಿಕಿತ್ಸಾ ತಜ್ಞರು, ಬುಧವಾರ ರೂಟ್ ಕ್ಯಾನಲ್ ತಜ್ಞರು, ಗುರುವಾರ ಕೃತಕ ದಂತ ಚಿಕಿತ್ಸಾ ತಜ್ಞರು, ಶನಿವಾರ ಮಕ್ಕಳ ದಂತ ತಜ್ಞರು ಲಭ್ಯರಿರುತ್ತಾರೆ. ಅಲ್ಲದೆ ಬೆಳಿಗ್ಗೆಯಿಂದ ಸಂಜೆವರೆಗೆ ಪ್ರತಿದಿನ ಕ್ಲಿನಿಕ್ ನಲ್ಲಿ ತಜ್ಞ ವೈದ್ಯರು ಲಭ್ಯರಿರುತ್ತಾರೆ.

LEAVE A REPLY

Please enter your comment!
Please enter your name here