ಗಿರೀಶ್ ರೈ ಕಳಂಜ ಹೃದಯಾಘಾತಕ್ಕೆ ಬಲಿ

0

ಪುತ್ತೂರು:ಸುಳ್ಯ ತಾಲೂಕು ಬೆಳ್ಳಾರೆ ಸಮೀಪದ ಕಳಂಜ ಗೋಪಣ್ಣ ರೈಯವರ ಪುತ್ರ ಗಿರೀಶ್ ರೈ(49ವ.)ರವರು ಹೃದಯಾಘಾತದಿಂದ ಜ.13ರಂದು ಮಧ್ಯಾಹ್ನ ನಿಧನರಾದರು.

ಮಧ್ಯಾಹ್ನ ಮನೆಯಲ್ಲಿ ಮಲಗಿದ್ದ ಗಿರೀಶ್ ರೈಯವರು ದಿಢೀರ್ ಅಸ್ವಸ್ಥಗೊಂಡ ಹಿನ್ನೆಲೆಯಲ್ಲಿ ತಕ್ಷಣ ಅವರನ್ನು ಸುಳ್ಯ ಕೆವಿಜಿ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಅಲ್ಲಿಗೆ ತಲುಪುವಷ್ಟರಲ್ಲೇ ಗಿರೀಶ್ ರೈಯವರು ಮೃತಪಟ್ಟಿದ್ದರು.

ಬಳಿಕ ಮೃತದೇಹವನ್ನು ಮನೆಗೆ ತರಲಾಯಿತು.ಮೃತರ ಸಹೋದರ ರಮೇಶ್ ರೈಯವರು ತಮ್ಮ ವ್ಯಾನ್‌ನಲ್ಲಿ ಶಬರಿಮಲೆಗೆ ತೆರಳಿದ್ದು ಜ.14ರಂದು ಹಿಂತಿರುಗಲಿರುವುದರಿಂದ ಮೃತ ದೇಹವನ್ನು ಮನೆಯಿಂದ ವಾಪಸ್ ಕೆವಿಜಿ ಮೆಡಿಕಲ್ ಕಾಲೇಜಿಗೆ ಕೊಂಡಯ್ಯಲಾಗಿದ್ದು,ಜ.14ರಂದು ಅಂತಿಮ ಸಂಸ್ಕಾರ ನಡೆಯಲಿರುವುದಾಗಿ ಕುಟುಂಬದ ಮೂಲಗಳು ತಿಳಿಸಿವೆ.

ಮೃತರು ತಂದೆ ಗೋಪಣ್ಣ ರೈ, ತಾಯಿ ಕೆದಂಬಾಡಿ ಗ್ರಾಮದ ಚಾವಡಿ ಪೊಟ್ಟಮೂಲೆ ಶ್ರೀಮತಿ ಸುಶೀಲ ಜಿ.ರೈ,ಸಹೋದರರಾದ ರವೀಂದ್ರ ರೈ ಕೊಡಿಯಾಲ, ರಮೇಶ್ ರೈ ಕೊಡಿಯಾಲ, ದಿನೇಶ್ ರೈ ಅವರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here