ಜನವರಿ 19 : ಮಾಡನ್ನೂರ್‌ನಲ್ಲಿ “ಮಜ್ಲಿಸುನ್ನೂರ್” ಬೃಹತ್ ಆಧ್ಯಾತ್ಮಿಕ ಮಹಾಸಂಗಮ, ಸಿರಾಜುದ್ದೀನ್ ಖಾಸಿಮಿ ಪ್ರಭಾಷಣ

0

ಮಾಡನ್ನೂರ್: ನೂರುಲ್ ಹುದಾ ಇಸ್ಲಾಮಿಕ್ ಅಕಾಡಮಿ, ಮಾಡನ್ನೂರ್ ಇದರ ಆಶ್ರಯದಲ್ಲಿ ಸಮಾಜದಲ್ಲಿ ಆಧ್ಯಾತ್ಮಿಕ ಮೌಲ್ಯಗಳು, ನೈತಿಕ ಜಾಗೃತಿ, ಶಾಂತಿ ಹಾಗೂ ಸೌಹಾರ್ದತೆಯನ್ನು ವೃದ್ಧಿಸುವ ಉದ್ದೇಶದೊಂದಿಗೆ “ಮಜ್ಲಿಸುನ್ನೂರ್” ಬೃಹತ್ ಆಧ್ಯಾತ್ಮಿಕ ಮಹಾಸಂಗಮ – ತಂಕೀನ್ ಅಭಿಯಾನದ ಉದ್ಘಾಟನಾ ಕಾರ್ಯಕ್ರಮವನ್ನು ಇದೇ ಜನವರಿ 19, ಸೋಮವಾರ ಸಂಜೆ 5:00 ರಿಂದ ರಾತ್ರಿ 10:00 ಗಂಟೆಯವರೆಗೆ ಮಾಡನ್ನೂರಿನಲ್ಲಿ ಹಮ್ಮಿಕೊಳ್ಳಲಾಗಿದೆ.

ಕಾರ್ಯಕ್ರಮದ ಮಖಾಂ ಝಿಯಾರತ್ಗೆ ಸಯ್ಯಿದ್ ಬುರ್ಹಾನ್ ಅಲಿ ತಂಗಳ್ ಅಲ್ ಬುಖಾರಿ ಅವರು ನೇತೃತ್ವ ವಹಿಸಲಿದ್ದಾರೆ. ಕಾರ್ಯಕ್ರಮದ ಪ್ರಾರಂಭಿಕ ಪ್ರಾರ್ಥನೆಯನ್ನು ಅಸ್ಸಯ್ಯಿದ್ ಅಹ್ಮದ್ ಪೂಕೋಯ ತಂಗಳ್, ಪುತ್ತೂರು ಅವರು ನೆರವೇರಿಸಲಿದ್ದಾರೆ.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ನೂರುಲ್ ಹುದಾ ಇಸ್ಲಾಮಿಕ್ ಅಕಾಡಮಿಯ ಅಧ್ಯಕ್ಷರಾದ ಬುಶ್ರಾ ಅಬ್ದುಲ್ ಅಝೀಝ್ ಅವರು ವಹಿಸಲಿದ್ದಾರೆ. ಮಜ್ಲಿಸುನ್ನೂರ್ ಬೃಹತ್ ಆಧ್ಯಾತ್ಮಿಕ ಮಹಾಸಂಗಮದ ಸಮಗ್ರ ನೇತೃತ್ವವನ್ನು ಸಮಸ್ತ ಉಲಮಾ ಒಕ್ಕೂಟದ ಸದಸ್ಯರಾದ ಶೈಖುನಾ ಬಂಬ್ರಾಣ ಅಬ್ದುಲ್ ಖಾದರ್ ಅಲ್ ಖಾಸಿಮಿ ಅವರು ವಹಿಸಲಿದ್ದಾರೆ.

ಕಾರ್ಯಕ್ರಮದ ಉದ್ಘಾಟನೆಯನ್ನು ಸಮಸ್ತ ಉಲಮಾ ಒಕ್ಕೂಟದ ಸದಸ್ಯರಾದ ಶೈಖುನಾ ಉಸ್ತಾದ್ ಉಸ್ಮಾನುಲ್ ಫೈಝಿ ತೋಡಾರ್ ಅವರು ನೆರವೇರಿಸಲಿದ್ದಾರೆ. ದಿಕ್ಸೂಚಿ ಪ್ರಭಾಷಣವನ್ನು ದಿಕ್ಸೂಚಿ ಪ್ರಭಾಷಣ ಸಂಸ್ಥೆಯ ಪ್ರಾಂಶುಪಾಲರಾದ ಅಡ್ವೊಕೇಟ್ ಹನೀಫ್ ಹುದವಿ ದೇಲಂಪಾಡಿ ಅವರು ನೀಡಲಿದ್ದಾರೆ. ಸ್ವಾಗತ ಭಾಷಣವನ್ನು ನೂರುಲ್ ಹುದಾ ಸಂಸ್ಥೆಯ ವ್ಯವಸ್ಥಾಪಕರಾದ ಕೆ. ಯು. ಖಲೀಲ್ ರಹ್ಮಾನ್ ಅರ್ಶದಿ ಅವರು ಮಾಡಲಿದ್ದಾರೆ.

ಕಾರ್ಯಕ್ರಮದ ಮುಖ್ಯ ಆಕರ್ಷಣೆಯಾಗಿ ಅಂತರರಾಷ್ಟ್ರೀಯ ಖ್ಯಾತಿಯ ವಾಗ್ಮಿ ಅಲ್ ಹಾಫಿಳ್ ಸಿರಾಜುದ್ದೀನ್ ಖಾಸಿಮಿ ಪತ್ತನಾಪುರಂ ಉಸ್ತಾದ್ ಅವರು ಪ್ರಮುಖ ಧಾರ್ಮಿಕ ಪ್ರವಚನವನ್ನು ನೀಡಲಿದ್ದಾರೆ.

ಈ ಬೃಹತ್ ಆಧ್ಯಾತ್ಮಿಕ ಮಹಾಸಂಗಮದಲ್ಲಿ ಅನೇಕ ಗಣ್ಯಾತಿಗಣ್ಯ ಉಲಮಾಗಳು, ಧಾರ್ಮಿಕ ನಾಯಕರು, ಸಾಮಾಜಿಕ, ರಾಷ್ಟ್ರೀಯ ಹಾಗೂ ರಾಜಕೀಯ ಕ್ಷೇತ್ರಗಳ ಪ್ರಮುಖರು ಭಾಗವಹಿಸುವ ನಿರೀಕ್ಷೆಯಿದ್ದು, ವಿವಿಧ ಪ್ರದೇಶಗಳಿಂದ ಸಾವಿರಾರು ವಿಶ್ವಾಸಿಗಳು ಆಗಮಿಸುವ ಸಾಧ್ಯತೆ ಇದೆ.

ಪವಿತ್ರ ರಂಜಾನ್ ತಿಂಗಳ ಸ್ವಾಗತದ ಹಿನ್ನೆಲೆಯಲ್ಲಿ ಆಯೋಜಿಸಲಾದ ಈ ಕಾರ್ಯಕ್ರಮವು ಸಮಾಜದಲ್ಲಿ ಶಾಂತಿ, ಸಹಬಾಳ್ವೆ, ನೈತಿಕತೆ ಹಾಗೂ ಆಧ್ಯಾತ್ಮಿಕ ಚೈತನ್ಯವನ್ನು ಬಲಪಡಿಸುವ ಮಹತ್ವದ ವೇದಿಕೆಯಾಗಲಿದೆ ಎಂದು ಆಯೋಜಕರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here