ಪರ್ಪುಂಜ ಹಾಲು ಉತ್ಪಾದಕರ ಸಹಕರ ಸಂಘಕ್ಕೆ ಅವಿರೋಧ ಆಯ್ಕೆ

0

ಅಧ್ಯಕ್ಷ: ಮಿತ್ರದಾಸ ರೈ ಡೆಕ್ಕಳ, ಉಪಾಧ್ಯಕ್ಷ :ವಿನಯ ಕುಮಾರ್ ರೈ ನೀರ್ಪಾಡಿ
ನಿರ್ದೇಶಕರುಗಳು: ಶ್ಯಾಮ್‌ಸುಂದರ ರೈ ಕೊಪ್ಪಳ, ರಾಮಣ್ಣ ಗೌಡ, ವಿಠಲ ರೈ, ಸದಾಶಿವ, ಕಿಶೋರ್ ಕುಮಾರ್, ಕಸ್ತೂರಿ ಟಿ.ಶೆಟ್ಟಿ, ಶರಣಾಕ್ಷಿ ಆಳ್ವ


ಪುತ್ತೂರು: ಪರ್ಪುಂಜ ಹಾಲು ಉತ್ಪಾದಕರ ಸಹಕಾರ ಸಂಘದ ಮುಂದಿನ 5 ವರ್ಷಗಳ ಅವಧಿಯ ಆಡಳಿತ ಮಂಡಳಿಗೆ 9 ಮಂದಿ ನಿರ್ದೇಶಕರುಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಅಧ್ಯಕ್ಷರಾಗಿ ಮಿತ್ರದಾಸ ರೈ ಡೆಕ್ಕಳ, ಉಪಾಧ್ಯಕ್ಷರಾಗಿ ವಿನಯ ಕುಮಾರ್ ರೈ ನೀರ್ಪಾಡಿ ಆಯ್ಕೆಗೊಂಡಿದ್ದಾರೆ.7 ಸಾಮಾನ್ಯ ಸ್ಥಾನ, 2 ಮಹಿಳಾ ಸ್ಥಾನ, ಹಿಂದುಳಿದ ವರ್ಗ ಎ ಮತ್ತು ಹಿಂದುಳಿದ ವರ್ಗ ಬಿ, ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ಒಂದೊಂದು ಸ್ಥಾನ ಮೀಸಲಿಡಲಾಗಿತ್ತು. ಇದರಲ್ಲಿ 7 ಸಾಮಾನ್ಯ ಸ್ಥಾನಕ್ಕೆ 8 ನಾಮಪತ್ರ ಸಲ್ಲಿಕೆಯಾಗಿದ್ದು ಇದರಲ್ಲಿ ವೀರಪ್ಪ ಮೂಲ್ಯರವರು ತಮ್ಮ ನಾಮಪತ್ರವನ್ನು ಹಿಂಪಡೆದುಕೊಂಡಿದ್ದಾರೆ. 2 ಮಹಿಳಾ ಸ್ಥಾನಕ್ಕೆ ತಲಾ ಒಂದೊಂದು ನಾಮಪತ್ರ ಸಲ್ಲಿಕೆಯಾಗಿದ್ದು ಹಿಂದುಳಿದ ವರ್ಗ ಎ ಮತ್ತು ಬಿ ಹಾಗೂ ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ಯಾವುದೇ ನಾಮಪತ್ರ ಸಲ್ಲಿಕೆಯಾಗದೆ ಇರುವುದರಿಂದ ಖಾಲಿಯಾಗಿ ಇಡಲಾಗಿದೆ.


ಈ ಪೈಕಿ ಅಧ್ಯಕ್ಷರಾಗಿ ಮಿತ್ರದಾಸ ರೈ ಡೆಕ್ಕಳ, ಉಪಾಧ್ಯಕ್ಷರಾಗಿ ವಿನಯ ಕುಮಾರ್ ರೈ ನೀರ್ಪಾಡಿ, ನಿರ್ದೇಶಕರಾಗಿ ಶ್ಯಾಮ್‌ಸುಂದರ ರೈ ಕೊಪ್ಪಳ, ರಾಮಣ್ಣ ಗೌಡ ಪರನೀರು, ಮಹಿಳಾ ಮೀಸಲು ಸ್ಥಾನದಿಂದ ಕಸ್ತೂರಿ ಟಿ.ಶೆಟ್ಟಿ, ಶರಣಾಕ್ಷಿ ಆಳ್ವರವರು ಆಯ್ಕೆಯಾಗಿದ್ದಾರೆ. ಸಹಕಾರ ಸಂಘಗಳ ಸಹಾಯಕ ನಿಬಂಧಕರ ಕಛೇರಿಯ ಶಿವಲಿಂಗಯ್ಯ ಚುನಾವಣಾ ಅಧಿಕಾರಿಯಾಗಿದ್ದರು. ಪರ್ಪುಂಜ ಹಾಲು ಉತ್ಪಾದಕರ ಸಹಕಾರ ಸಂಘದ ಕಾರ್ಯದರ್ಶಿ ಸರೋಜ, ಹಾಲು ಪರೀಕ್ಷಕಿ ಶ್ರೀಮತಿ ಕೆ ಸಹಕರಿಸಿದ್ದರು.

LEAVE A REPLY

Please enter your comment!
Please enter your name here