ಪೆರುವೋಡಿ ಶ್ರೀ ವಿಷ್ಣುಮೂರ್ತಿ ದೇವಸ್ಥಾನಕ್ಕೆ ಮುಕ್ಕೂರು ಜ್ಯೋತಿ ಯುವಕ ಮಂಡಲ, ವೈಷ್ಣವಿ ಮಹಿಳಾ ಮಂಡಳಿಯಿಂದ ಅಲಂಕಾರಿಕೃತ ಸಾಮಾಗ್ರಿ ಹಸ್ತಾಂತರ

0

ಪುತ್ತೂರು: ಜ್ಯೋತಿ ಯುವಕ ಮಂಡಲ ಮುಕ್ಕೂರು ಪೆರುವಾಜೆ ಮತ್ತು ವೈಷ್ಣವಿ ಮಹಿಳಾ ಮಂಡಳಿ ಮುಕ್ಕೂರು ಪೆರುವಾಜೆ ಇದರ ವತಿಯಿಂದ ಅಂದಾಜು ರೂ 60,000 ವೆಚ್ಚದಲ್ಲಿ ಪೆರುವೋಡಿ ಶ್ರೀ ವಿಷ್ಣುಮೂರ್ತಿ ದೇವಸ್ಥಾನಕ್ಕೆ ಅಲಂಕಾರಕ್ಕೆ ಸಂಬಂಧಪಟ್ಟ ಸಾಮಾಗ್ರಿಗಳನ್ನು ಸೇವಾರೂಪದಲ್ಲಿ ನೀಡಲಾಯಿತು.

ಜ್ಯೋತಿ ಯುವಕ ಮಂಡಲದ ಅಧ್ಯಕ್ಷ ದಿನೇಶ್ ಕಾನಾವು, ಕಾರ್ಯದರ್ಶಿ ಪ್ರಶಾಂತ್ ಬೊಮ್ಮೆಮಾರು ಹಾಗೂ ಸದಸ್ಯರು ಮತ್ತು ವೈಷ್ಣವಿ ಮಹಿಳಾ ಮಂಡಳಿಯ ಅಧ್ಯಕ್ಷೆ ಸುಮಿತ್ರಾ ಬೀರುಸಾಗು, ಕಾರ್ಯದರ್ಶಿ ಪ್ರೀತಿ ಶೆಟ್ಟಿ ಬರಮೇಲು ಹಾಗೂ ಸದಸ್ಯರು ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಆಡಳಿತ ಮೊಕ್ತೇಸರ ಉಮೇಶ್ ರಾವ್ ಕೊಂಡೆಪ್ಪಾಡಿ, ಮಾಜಿ ಆಡಳಿತ ಮೊಕ್ತೇಸರ ಎಂ‌.ಕೆ. ಬಾಲಚಂದ್ರ ರಾವ್, ಉತ್ಸವ ಸಮಿತಿ ಅಧ್ಯಕ್ಷ ದಯಾನಂದ ಗೌಡ ಜಾಲು, ಅರ್ಚಕ ಸುರೇಶ್ ಉಪಾಧ್ಯಾಯ, ಮೊಕ್ತೇಸರರಾದ ಕುಂಬ್ರ ದಯಾಕರ ಆಳ್ವ, ಡಾ.ನರಸಿಂಹ ಶರ್ಮ ಕಾನಾವು, ವಸಂತ ಬೈಪಡಿತ್ತಾಯ ಮುಕ್ಕೂರು, ಕುಶಾಲಪ್ಪ ಗೌಡ ಪೆರುವಾಜೆ, ಸುಜಾತಾ ವಿ ರಾಜ್ ಕಜೆ, ಪುಷ್ಷಾವತಿ ಕಂಡಿಪ್ಪಾಡಿ, ಕೃಷ್ಣಪ್ಪ ನಾಯ್ಕ ದೇವಿಮೂಲೆ, ಪ್ರಮುಖರಾದ ನಾರಾಯಣ ಕೊಂಡೆಪ್ಪಾಡಿ, ಉಮೇಶ್ ಕೆ.ಎಂ.ಬಿ, ನವೀನ್ ಶೆಟ್ಟಿ ಬರಮೇಲು, ಸತ್ಯಪ್ರಸಾದ್ ಕಂಡಿಪ್ಪಾಡಿ, ಸಂಜೀವ ಗೌಡ ಬೈಲಂಗಡಿ, ರಾಮಚಂದ್ರ ಭಟ್ ಕೋಡಿಬೈಲು, ಗುಡ್ಡಪ್ಪ ಗೌಡ ಅಡ್ಯತಕಂಡ ಮೊದಲಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here