







ಪುತ್ತೂರು: ಈಶ್ವರಮಂಗಲ ಕುಂಟಾರು ಬ್ರಹ್ಮಶ್ರೀ ವಾಸುದೇವ ತಂತ್ರಿಗಳ ಮಾರ್ಗದರ್ಶನದಲ್ಲಿ ಪೂರ್ವಶಿಷ್ಠ ಸಂಪ್ರದಾಯ ಪ್ರಕಾರ ನಡೆಯಲಿರುವ ಶ್ರೀ ಪಂಚಲಿಂಗೇಶ್ವರ ದೇವರ ಜಾತ್ರೆ ಫೆ. 12 ರಿಂದ 20 ರತನಕ, ಫೆ. 21 ರಂದು ಕಿನ್ನಿಮಾಣಿ, ಪೂಮಾಣಿ, ಪಿಲಿಚಾಮುಂಡಿ ದೈವಗಳ ನೇಮೋತ್ಸವ ನಡೆಯಲಿದ್ದು, ಜ.14 ರಂದು ಆಮಂತ್ರಣ ಪತ್ರಿಕೆಯನ್ನು ದೇವಸ್ಥಾನದ ಪವಿತ್ರಪಾಣಿ ಗೋಪಾಲಕೃಷ್ಣ ಕುಂಜತ್ತಾಯ ಮೆಣಸಿನಕಾನ, ಆಡಳಿತಾಧಿಕಾರಿ ನರಿಯಪ್ಪ ಮಠದ ಬಿಡುಗಡೆಗೊಳಿಸಿದರು.


ಈ ಸಂಧರ್ಭದಲ್ಲಿ ಅರ್ಚಕ ರವೀಂದ್ರ ಮಾಣಿಲತ್ತಾಯ , ಜಾತ್ರೋತ್ಸವ ಸಮಿತಿಯ ಅಧ್ಯಕ್ಷ ವಿಕ್ರಮ್ ರೈ ಸಾಂತ್ಯ , ಗೌರವಾಧ್ಯಕ್ಷ ರತನ್ ಕುಮಾರ್ ನಾೖಕ್ ಕರ್ನೂರುಗುತ್ತು, ಜೀರ್ಣೋದ್ಧಾರ ಸಮಿತಿಯ ಪ್ರಧಾನ ಕಾರ್ಯದರ್ಶಿ ಎಸ್. ಮೋಹನ್ ದಾಸ್ ಶೆಟ್ಟಿ ನೂಜಿಬೈಲು, ಖಜಾಂಚಿ ದೀಪಕ್ ಕುಮಾರ್ ಮುಂಡ್ಯ, ಉಪಾಧ್ಯಕ್ಷ ನಾಗಪ್ಪ ಗೌಡ ಬೊಮ್ಮೆಟ್ಟಿ, ಆನಂದ ರೈ ಸಾಂತ್ಯ, ಗಿರೀಶ್ ರೈ ಮರಕ್ಕಡ, ಅಚ್ಯುತ ಮಣಿಯಾಣಿ, ಜಯಾನಂದ ಕೋರಿಗದ್ದೆ, ಜಯಚಂದ್ರ ಸೆರಾಜೆ, ಚಿನ್ಮಯ್ ರೈ ನಡುಬೈಲು, ಜಾತ್ರೋತ್ಸವ ಸಮಿತಿಯ ಪ್ರಧಾನ ಕಾರ್ಯದರ್ಶಿ ಪೂರ್ಣಚಂದ್ರ ನೆಲ್ಲಿತ್ತಡ್ಕ, ಜೊತೆ ಕಾರ್ಯದರ್ಶಿ ರಮಾನಂದ ಕೋರಿಗದ್ದೆ, ಉಪಾಧ್ಯಕ್ಷ ಮೋಹನಾಂಗಿ ಬೀಜಂತ್ತಡ್ಕ, ಶಂಕರ ಪಟ್ರೋಡಿ, ಯತೀಶ್ ಕತ್ರಿಬೈಲು, ಗೋಪಾಲಕೃಷ್ಣ ಮುಂಡ್ಯ, ಸುಂದರ ಆಚಾರ್ಯ, ಹಾಗೂ ಮತ್ತಿತರ ಭಕ್ತಾಧಿಗಳು ಉಪಸ್ಥಿತರಿದ್ದರು.













