







ಪುತ್ತೂರು: ಜ.24 ಮತ್ತು 25 ರಂದು ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಳದ ಎದುರಿನ ದೇವರಮಾರು ಗದ್ದೆಯಲ್ಲಿ 33ನೇ ವರ್ಷದ ಹೊನಲು ಬೆಳಕಿನ ಪುತ್ತೂರು ಕೋಟಿ-ಚೆನ್ನಯ ಜೋಡುಕರೆ ಕಂಬಳ ನಡೆಯಲಿದ್ದು ಕಂಬಳದ ಯಶಸ್ವಿಗಾಗಿ ಪೂರ್ವಭಾವಿ ಸಭೆಯನ್ನು ನಡೆಸಲಾಯಿತು.


ಸಭೆಯ ಅಧ್ಯಕ್ಷತೆ ವಹಿಸಿದ್ದ ಪುತ್ತೂರು ಕೋಟಿ ಚೆನ್ನಯ ಕಂಬಳ ಸಮಿತಿಯ ಅಧ್ಯಕ್ಷ ಚಂದ್ರಹಾಸ ಶೆಟ್ಟಿ ಕಂಬಳದ ರೂಪುರೇಷೆಯ ಬಗ್ಗೆ ಮಾಹಿತಿಯನ್ನು ನೀಡಿದರು. ಈಗಾಗಲೇ ಕಂಬಳದ ಆಮಂತ್ರಣ ಪತ್ರವನ್ನು ಬಹುತೇಕ ಅತಿಥಿಗಳಿಗೆ ನೀಡಲಾಗಿದ್ದು ಬಾಕಿಯಿದ್ದ ಅತಿಥಿಗಳಿಗೆ ಆಮಂತ್ರಣ ಪತ್ರ ಮುಟ್ಟಿಸಲು ಕೆಲವೊಂದು ಪದಾಧಿಕಾರಿಗಳಿಗೆ ಜವಾಬ್ದಾರಿಯನ್ನು ನೀಡಲಾಗಿದೆ. ಕಂಬಳದ ಯಶಸ್ವಿಗೆ ಯಾವುದೇ ಚ್ಯುತಿ ಬಾರದಂತೆ ಕಂಬಳದ ಎಲ್ಲಾ ಪದಾಧಿಕಾರಿಗಳು, ಸದಸ್ಯರು, ಮುಂಚೂಣಿಯಲ್ಲಿ ನಿಂತು ಕೆಲಸ ಕಾರ್ಯಗಳನ್ನು ಮಾಡಬೇಕು ಕಳೆದ 32 ವರ್ಷಗಳಿಂದಲೂ ಪುತ್ತೂರು ಕೋಟಿ ಚೆನ್ನಯ ಕಂಬಳವು ಅತ್ಯಂತ ಯಶಸ್ವಿಯಾಗಿ ನಡೆಯುತ್ತಾ ಹತ್ತೂರಿನಲ್ಲೂ ಹೆಸರುವಾಸಿಯಾಗಿದೆ 33ನೇ ವರ್ಷದ ಕೋಟಿ ಚೆನ್ನಯ ಕಂಬಳ ಕೂಡ ಇದೇ ರೀತಿಯಲ್ಲಿ ಅತ್ಯಂತ ಯಶಸ್ವಿಯಾಗಿ ಮುಂದುವರಿಯಲು ತಮ್ಮೆಲ್ಲರ ಸಹಕಾರ ಸಹಾಯ ಬೇಕಾಗಿದೆ ಎಂದು ಅವರು ಹೇಳಿದರು.



ಕಂಬಳ ಸಮಿತಿಯ ಖಜಾಂಜಿ ಈಶ್ವರ ಭಟ್ ಪಂಜಿಗುಡ್ಡೆ ಅವರು ಮಾತನಾಡಿ ಪುತ್ತೂರಿನಲ್ಲಿ ನಡೆಯುವ ಕೋಟಿ ಚೆನ್ನಯ ಕಂಬಳದ ಯಶಸ್ವಿಗೆ ಸದಸ್ಯರ ಸಹಕಾರ ಬೇಕಾಗಿದೆ. ಪುತ್ತೂರಿನ ಕಂಬಳವು ರಾಜ್ಯದಲ್ಲೇ ಹೆಸರುವಾಸಿಯಾದ ಕಂಬಳವಾಗಿದೆ. ಈ ಕಂಬಳವು ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವರ ಮಾರುಗದ್ದೆಯಲ್ಲಿ ನಡೆಯುವುದರಿಂದ ಮಹಾಲಿಂಗೇಶ್ವರನ ಅನುಗ್ರಹ ಖಂಡಿತ ಇದೆ ಎಂದು ಅವರು ಹೇಳಿದರು.
ಕಂಬಳ ಸಮಿತಿಯ ಉಪಾಧ್ಯಕ್ಷ ಸುದರ್ಶನ್ ನ್ಯಾಕ್ ಕಂಪ ರವರು ಮಾತನಾಡಿ, ಕಂಬಳವು ಶನಿವಾರ ಪ್ರಾರಂಭವಾಗಿ ಆದಿತ್ಯವಾರ ಸಂಜೆ ಒಳಗೆ ಮುಗಿಯುವಂತೆ ಎಲ್ಲರೂ ಸಹಕರಿಸಬೇಕು ಮತ್ತು ಈ ಬಗ್ಗೆ ಕೋಣದ ಮಾಲಕರೊಂದಿಗೆ ಕೂಡ ಚರ್ಚಿಸಿ ತೀರ್ಮಾನ ಕೈಗೊಳ್ಳಬೇಕು ಎಂದು ಹೇಳಿದರು.
ಕಂಬಳ ಸಮಿತಿಯ ಪ್ರಧಾನ ಕಾರ್ಯದರ್ಶಿ ದಿನೇಶ್ ಕುಲಾಲ್ ಪಿ ವಿ ವಂದಿಸಿದರು. ಕಂಬಳ ಸಮಿತಿಯ ಪದಾಧಿಕಾರಿಗಳಾದ ನಿರಂಜನ ರೈ ಮಠಂತಬೆಟ್ಟು ಜಿನ್ನಪ್ಪ ಪೂಜಾರಿ ಮುರ, ಜೋಕಿಮ್ ಡಿ ಸೋಜಾ, ರಂಜಿತ್ ಬಂಗೇರ, ಪ್ರೇಮಾನಂದ ನಾೖಕ್, ,ಕೃಷ್ಣ ಪ್ರಸಾದ ಆಳ್ವ ರೋಶನ್ ರೈ ಬನ್ನೂರು, ಸನತ್ ರೈ ವಳತಡ್ಕ, ವಿಕ್ರಂ ಶೆಟ್ಟಿ ಅಂತರ, ಶಶಿಕಿರಣ್ ರೈ ನೂಜಿಬೈಲು, ನವೀನ ನಾೖಕ್ ಬೆದ್ರಾಳ, ಸುದೇಶ್ ಕುಮಾರ್ ಚಿಕ್ಕಪುತ್ತೂರು, ಗಂಗಾಧರ ಶೆಟ್ಟಿ ಕೈಕಾರ, ಬಿಪಿನ್ ಶೆಟ್ಟಿ ಸವಣೂರು, ಹಸೈನಾರ್ ಬನಾರಿ, ಸುಮಿತ್ ಶೆಟ್ಟಿ, ಕಂಬಳಬೆಟ್ಟು, ಸುಶಾಂತ ಶೆಟ್ಟಿ ಕಂಬಳಬೆಟ್ಟು, ,ಗಣೇಶ ರಾಜ್ ಬೆಳಿಯೂರು, ಅಬೂಬಕ್ಕರ್ ಮುಲಾರ್, ಅಭಿಷೇಕ್ ಬೆಳ್ಳಿಪ್ಪಾಡಿ, ಖಾದರ್ ಪೋಳ್ಯ, ಯೋಗಿಶ್ ಸಾಮಾನಿ, ಬಾಲಕೃಷ್ಣ ಪಳ್ಳತ್ತಾರು, ಶಶಿ ನೆಲ್ಲಿಕಟ್ಟೆ, ರಮೇಶ್ ಪೂಜಾರಿ ಬನ್ನೂರು, ಚಂದ್ರಹಾಸ ಶೆಟ್ಟಿ ಬನ್ನೂರು, ರಾಕೇಶ್ ರೈ, ಅಶ್ವತ್ ಕೋನಡ್ಕ, ಜಯಪ್ರಕಾಶ್ ಕೈಕಾರ, ಸಂತೋಷ್ ಗೌಡ ಸವಣೂರು, ಅರುಣ್ ರೆಬೆಲ್ಲೊ, ಸನ್ಮಿತ್ ರೈ ಕುಂಬ್ರ, ರಾಕೇಶ್ ಕೆಮ್ಮಾರ, ಶರತ್ ಪೆರಾಜೆ, ಕಿರಣ್ ಡಿಸೋಜ, ಶಿವಪ್ರಸಾದ ರೈ ಮಠಂದಬೆಟ್ಟು, ಕಿಶನ್ ಸರೋಳಿ, ಚಂದ್ರಶೇಖರ ರೈ ಪಾಲ್ತಾಡಿ, ಉಮಾಶಂಕರ್ ನಾೖಕ್ ಪಾಂಗಳಾಯಿ, ಜಯಪ್ರಕಾಶ್ ನಾೖಕ್ ಬೈರಂಗಾಡಿ, ಕೃಷ್ಣ ನಾಯ್ಕ್, ರಾಜೇಶ್ ಬನಾರಿ, ಮಂಜುನಾಥ ಗೌಡ, ಪ್ರಜನ್ ಪೂಜಾರಿ ಮೊದಲಾದವರು ಮಾತನಾಡಿ ವಿವಿಧ ಸಲಹೆ ಸೂಚನೆಗಳನ್ನು ನೀಡಿದರು.










