







ಕಾಲನಿಗಳ ಅಭಿವೃದ್ಧಿಗೆ ಮೊದಲ ಆದ್ಯತೆ ನೀಡಲಾಗುತ್ತಿದೆ: ಅಶೋಕ್ ಕುಮಾರ್ ರೈ
ಪುತ್ತೂರು: ಅರಿಯಡ್ಕ ಗ್ರಾಮದ ಪಾಪೆಮಜಲು ಪೆರ್ನೂಕು ಪರಿಶಿಷ್ಟ ಪಂಗಡದ ಕಾಲನಿಗೆ ಕಾಲು ಸಂಕ ರಚನೆಗೆ ಶಾಸಕರು 40 ಲಕ್ಷ ರೂಪಾಯಿ ಅನುದಾನ ಇಟ್ಟಿದ್ದು, ಇದರ ಶಿಲಾನ್ಯಾಸ ಕಾರ್ಯಕ್ರಮ ಜ.4ರಂದು ನಡೆಯಿತು. ಪುತ್ತೂರು ಶಾಸಕರಾದ ಅಶೋಕ್ ಕುಮಾರ್ ರೈಯವರು ಶಿಲನ್ಯಾಸ ನೆರವೇರಿಸಿ ಮಾತನಾಡಿ,ಕಾಲನಿಗಳ ಅಭಿವೃದ್ದಿಗೆ ಮೊದಲ ಆದ್ಯತೆ ನೀಡಲಾಗುತ್ತಿದ್ದು ತಾಲೂಕಿನ ಎಲ್ಲಾ ಕಾಲನಿಗಳ ಅಭಿವೃದ್ಧಿಗೆ ಈಗಾಗಲೇ ಅನುದಾನಗಳನ್ನು ಇಡುವ ವ್ಯವಸ್ಥೆ ಆಗಿದೆ. ಕಾಲನಿಗಳ ಸಮಗ್ರ ಅಭಿವೃದ್ಧಿಯೆ ನಮ್ಮ ಧ್ಯೇಯವಾಗಿದೆ.ಕಾಲನಿಗೆ ಎಲ್ಲಾ ಮೂಲಭೂತ ಸೌಕರ್ಯಗಳನ್ನು ಒದಗಿಸುವ ಕೆಲಸ ನಿರಂತರ ಆಗುತ್ತಿದೆ ಎಂದು ಹೇಳಿದರು.





ಅರಿಯಡ್ಕ ವಲಯ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಇಕ್ಭಾಲ್ ಹುಸೇನ್ ಕೌಡಿಚ್ಚಾರುರವರು ಮಾತನಾಡಿ, ಅರಿಯಡ್ಕ ಗ್ರಾಮದ ಅಭಿವೃದ್ಧಿಗೆ ಶಾಸಕರು ಈಗಾಗಲೇ 5 ಕೋಟಿ ರೂಪಾಯಿಗಿಂತಲೂ ಹೆಚ್ಚಿನ ಅನುದಾನ ಒದಗಿಸಿದ್ದು ಗ್ರಾಮದ ಸರ್ವತೋಮುಖ ಅಭಿವೃದ್ಧಿಯಲ್ಲಿ ಶಾಸಕರು ಎಲ್ಲಾ ರೀತಿಯಿಂದಲೂ ಸಹಕಾರ ನೀಡುತ್ತಿದ್ದಾರೆ ಈ ಹಿನ್ನೆಲೆಯಲ್ಲಿ ಶಾಸಕರಿಗೆ ಗ್ರಾಮಸ್ಥರ ಪರವಾಗಿ ಅಭಿನಂದನೆಗಳನ್ನು ಸಲ್ಲಿಸುತ್ತಿದ್ದೇವೆ ಎಂದರು.
ಈ ಸಂದರ್ಭದಲ್ಲಿ ಕುರಿಂಜ ಬೂತ್ ಅಧ್ಯಕ್ಷ ಚಂದ್ರಶೇಖರ ಮಣಿಯಾಣಿ ಕುರಿಂಜ, ಡಿ.ಅಮ್ಮಣ್ಣ ರೈ ಪಾಪೆಮಜಲು, ಐತ್ತಪ್ಪ ನಾಯ್ಕ ಪಾಪೆಮಜಲು, ನಾರಾಯಣ ನಾಯ್ಕ ಪಾಪೆಮಜಲು, ದೇವಪ್ಪ ನಾಯ್ಕ, ಅಶೋಕ ನಾಯ್ಕ, ದುರ್ಗೆಶ್ ಮುಂಗ್ಲಿಮೂಲೆ, ರಾಮಣ್ಣ ನಾಯ್ಕ ಮುಂಗ್ಲಿಮೂಲೆ, ವಿಶ್ವನಾಥ ಪಾಪೆಮಜಲು, ಬಶೀರ್ ಕೌಡಿಚ್ಚಾರ್, ಶಿವರಾಮ ಮಣಿಯಾಣಿ ಪೊನ್ನೆತ್ತಳಕ, ಉಮೇಶ್ ನಾಯ್ಕ್, ಅಭಿಷೇಕ್ ಕುರಿಂಜ, ವೆಂಕಪ್ಪ ನಾಯ್ಕ, ದೇವಪ್ಪ ನಾಯ್ಕ ಪೆರ್ನೂಕು ಮತ್ತಿತರರು ಉಪಸ್ಥಿತರಿದ್ದರು.
‘ಗ್ರಾಮದ ಅಭಿವೃದ್ಧಿಯ ದೃಷ್ಟಿಯಲ್ಲಿ ಕಾಮಗಾರಿ ಕಳಪೆಯಾದಲ್ಲಿ ಕೂಡಲೇ ಕಾಮಗಾರಿಯನ್ನು ರದ್ದುಗೊಳಿಸಿ ಲೋಕಾಯುಕ್ತಕ್ಕೆ ಹಾಗೂ ಕಂಟ್ರಾಕ್ಟರ್‌ದಾರರನ್ನು ಕಪ್ಪು ಪಟ್ಟಿಗೆ ಸೇರಿಸುವ ಕೆಲಸ ಆಗಲಿದೆ.’
ಇಕ್ಬಾಲ್ ಹುಸೇನ್ ಕೌಡಿಚ್ಚಾರು,
ಅಧ್ಯಕ್ಷರು, ಅರಿಯಡ್ಕ ವಲಯ ಕಾಂಗ್ರೆಸ್ ಸಮಿತಿ










