ಶ್ರೀ ರಾಮಕುಂಜೇಶ್ವರ ದೇವಸ್ಥಾನದ ವಾರ್ಷಿಕ ಜಾತ್ರೆಗೆ ಗೊನೆ ಮುಹೂರ್ತ

0

ರಾಮಕುಂಜ: ಜ.29ರಿಂದ ಫೆ.2ರ ತನಕ ನಡೆಯುವ ರಾಮಕುಂಜ ಶ್ರೀ ರಾಮಕುಂಜೇಶ್ವರ ದೇವಸ್ಥಾನದ ವಾರ್ಷಿಕ ಜಾತ್ರೆಗೆ ಜ.22ರಂದು ಬೆಳಿಗ್ಗೆ ಗೊನೆ ಮುಹೂರ್ತ ನೆರವೇರಿಸಲಾಯಿತು.
ದೇವಸ್ಥಾನದ ಪ್ರಧಾನ ಅರ್ಚಕರಾದ ಅನಂತ ಉಡುಪ ಅವರು ಪ್ರಾರ್ಥನೆ ನೆರವೇರಿಸಿದರು. ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಗುರುಪ್ರಸಾದ ರಾಮಕುಂಜ, ಸದಸ್ಯರಾದ ಕರುಣಾಕರ ಯು.ದೊಡ್ಡ ಉರ್ಕ, ಜಗದೀಶ ಶೆಟ್ಟಿ ಅಂಬಾಬೀಡು, ಮಹೇಶ್ ಬಿ.ಬಾಂತೊಟ್ಟು, ಉತ್ಸವ ಸಮಿತಿ ಉಪಾಧ್ಯಕ್ಷ ತಿಮ್ಮಪ್ಪ ಗೌಡ ಆನ, ಸದಸ್ಯರಾದ ಲಕ್ಷ್ಮೀನಾರಾಯಣ ರಾವ್ ಆತೂರು, ತೇಜಕುಮಾರ್ ರೈ ವಳೆಂಜ, ಶೇಖರ ಗೌಡ ಆನ, ಸದಾಶಿವ ಶೆಟ್ಟಿ ಮಾರಂಗ, ಅರ್ಚಕ ಶ್ರೀನಿಧಿ ಜೋಷಿ, ಸಿಬ್ಬಂದಿ ಅಶೋಕ ಹಲ್ಯಾರ ಹಾಗೂ ಗ್ರಾಮಸ್ಥರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here