







*ಗ್ರಾಹಕರೊಂದಿಗೆ ವ್ಯವಹರಿಸುವ ಜಾಣ್ಮೆ ರಫೀಕ್ರವರಲ್ಲಿದೆ-ಅಬ್ದುಲ್ ಅಝೀಝ್
*ಗ್ರಾಹಕರ ಒಳಿತಿಗೋಸ್ಕರ ವಿನ್-ವಿನ್ ಶಾಪಿಂಗ್ ಹಬ್ಬ-ರವಿಕೃಷ್ಣ ಕಲ್ಲಾಜೆ
*ನಯಾ ಚಪ್ಪಲ್ ಬಜಾರ್ ಪುತ್ತೂರಿನಲ್ಲಿ ಹೆಸರು ಗಳಿಸಿದ ಸಂಸ್ಥೆಯಾಗಿದೆ-ಬಲರಾಮ ಆಚಾರ್ಯ
*ಲಾಭದಲ್ಲಿನ ಒಂದಂಶವನ್ನು ಬಡಬಗ್ಗರಿಗೆ ಹಂಚುವುದೇ ನಿಜವಾದ ಧರ್ಮ-ರೆ|ವಿಜಯ ಹಾರ್ವಿನ್
*ಸಂಸ್ಥೆಯಿಂದ ಗುಣಮಟ್ಟದ ಸೇವೆ ಶ್ಲಾಘನೀಯ-ಸಿಸ್ಟರ್ ಅನಿತಾ
*ಹಿರಿ-ಕಿರಿಯರೊಂದಿಗೆ ಬಾಂಡ್ ಆಗಿ ಇದ್ದದ್ದೆ ಬಂಡವಾಳ-ಚಿದಾನಂದ ಬೈಲಾಡಿ
*ಶ್ರದ್ಧಾಭಕ್ತಿಯಿಂದ ವ್ಯವಹಾರ ಮಾಡಿದ್ದಲ್ಲಿ ದೇವರು ಕೈ ಬಿಡೋದಿಲ್ಲ-ಉಮೇಶ್ ನಾಯಕ್
*ರೋಟರಿ ವಲಯದಲ್ಲಿ ರಫೀಕ್ರವರು ಆರ್ಥಿಕ ಚಾಣಕ್ಯ-ಡಾ.ಶ್ರೀಪ್ರಕಾಶ್ ಬಿ
*ವ್ಯಾಪಾರಸ್ಥರು ಒಗ್ಗಟ್ಟಾಗಿ ವ್ಯವಹರಿಸಿದ್ದಲ್ಲಿ ಬಾಂಧವ್ಯ ಹೆಚ್ಚುತ್ತದೆ-ಕೆ.ಪಿ ಸಾದಿಕ್
*ಗ್ರಾಹಕರ ಹೆಚ್ಚಿನ ಪ್ರೋತ್ಸಾಹದೊಂದಿಗೆ ಆಕಾಶದೆತ್ತರಕ್ಕೆ ಬೆಳೆಯಲಿ-ಎಂಜಿ ರಝಾಕ್


ಪುತ್ತೂರು: ಕಳೆದ 28 ವರ್ಷಗಳಿಂದ ದರ್ಬೆ ಬುಶ್ರಾ ಕಾಂಪ್ಲೆಕ್ಸ್ನಲ್ಲಿ ಹವಾನಿಯಂತ್ರಿತ ಪಾದರಕ್ಷೆ ಮಳಿಗೆಯನ್ನು ನಡೆಸಿಕೊಂಡು ಬರುತ್ತಿದ್ದ ನಯಾ ಚಪ್ಪಲ್ ಬಜಾರ್ ಇದೀಗ ಗ್ರಾಹಕರ ಅಗತ್ಯತೆಗಳಿಗೆ ಸ್ಪಂದಿಸಿ ಅವರ ಮನಗೊಪ್ಪುವ ಐಟಂಗಳನ್ನು ಜೋಡಿಸಿಕೊಂಡು ಮಳಿಗೆಯನ್ನು ವಿಸ್ತೃತಗೊಳಿಸಿ ಜ.22ರಂದು ಶುಭಾರಂಭಗೊಂಡಿತು.




ಗ್ರಾಹಕರೊಂದಿಗೆ ವ್ಯವಹರಿಸುವ ಜಾಣ್ಮೆ ರಫೀಕ್ರವರಲ್ಲಿದೆ-ಅಬ್ದುಲ್ ಅಝೀಝ್ ಬಿ.ಎ:
ಬುಶ್ರಾ ಎಜ್ಯುಕೇಶನಲ್ ಟ್ರಸ್ಟ್ ಇದರ ಸಂಚಾಲಕ ಅಬ್ದುಲ್ ಅಝೀಝ್ ಬಿ.ಎರವರು ವಿಸ್ತೃತ ಮಳಿಗೆಯನ್ನು ರಿಬ್ಬನ್ ಕತ್ತರಿಸುವ ಮೂಲಕ ಉದ್ಘಾಟಿಸಿ ಮಾತನಾಡಿ, ನನ್ನ ಮತ್ತು ರಫೀಕ್ರವರ ಸಂಬಂಧ ಬಹಳ ಹಳೆಯದು. ಕಳೆದ ೨೮ ವರ್ಷಗಳಿಂದ ಮಳಿಗೆಯು ಒಳ್ಳೆಯ ರೀತಿಯಲ್ಲಿ ಸೇವೆ ನೀಡುತ್ತಿದೆ. ರಫೀಕ್ರವರು ಎಲ್ಲರೊಂದಿಗೆ ಉತ್ತಮ ಸ್ನೇಹ, ಸೌಹಾರ್ದತೆಯೊಂದಿಗೆ ಇರುವುದು ಮಾತ್ರವಲ್ಲ ಗ್ರಾಹಕರೊಂದಿಗೆ ಹೇಗೆ ವ್ಯವಹರಿಸಬೇಕು ಎನ್ನುವ ಜಾಣ್ಮೆ ರಫೀಕ್ರವರಲ್ಲಿದೆ ಎಂದರು.

ಗ್ರಾಹಕರ ಒಳಿತಿಗೋಸ್ಕರ ವಿನ್-ವಿನ್ ಶಾಪಿಂಗ್ ಹಬ್ಬ-ರವಿಕೃಷ್ಣ ಕಲ್ಲಾಜೆ:
ಅಧ್ಯಕ್ಷತೆ ವಹಿಸಿದ ಪುತ್ತೂರು ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ರವಿಕೃಷ್ಣ ಡಿ.ಕಲ್ಲಾಜೆ ಮಾತನಾಡಿ, ರಫೀಕ್ರವರಿಗೆ ಒಂದು ಸಲ ಪರಿಚಯವಾದರೆ ಸಾಕು, ಬಳಿಕ ಅವರು ನಮಗೆ ಬಹಳ ಆತ್ಮೀಯರಾಗುತ್ತಾರೆ. ಸಂಸ್ಥೆ ಪ್ರಾರಂಭಗೊಳಿಸುವುದು ಸುಲಭ, ಆದರೆ ಈಗಿನ ಪರಿಸ್ಥಿತಿಯಲ್ಲಿ ಅದನ್ನು ನಡೆಸಿಕೊಂಡು ಹೋಗುವುದು ದೊಡ್ಡ ಚಾಲೆಂಜ್. ಇಂದು ಆನ್ಲೈನ್ ಖರೀದಿ ಭರಾಟೆಯಲ್ಲಿ ಸ್ಥಳೀಯ ವ್ಯಾಪಾರಸ್ಥರ ವ್ಯಾಪಾರಕ್ಕೆ ಧಕ್ಕೆ ಆಗಿದೆ. ಸ್ಥಳೀಯ ವ್ಯಾಪಾರಸ್ಥರ ವ್ಯವಹಾರಕ್ಕೆ ಹಾಗೂ ಗ್ರಾಹಕರ ಒಳಿತಿಗೋಸ್ಕರ ವಿನ್-ವಿನ್ ಶಾಪಿಂಗ್ ಹಬ್ಬವನ್ನು ವರ್ತಕರ ಸಂಘ ಆಯೋಜಿಸಿದೆ ಎಂದರು.

ನಯಾ ಚಪ್ಪಲ್ ಬಜಾರ್ ಪುತ್ತೂರಿನಲ್ಲಿ ತನ್ನದೇ ಆದ ಹೆಸರು ಗಳಿಸಿದೆ-ಬಲರಾಮ ಆಚಾರ್ಯ:
ಗೌರವ ಅತಿಥಿ, ಜಿ.ಎಲ್ ಆಚಾರ್ಯ ಇದರ ಮುಖ್ಯಸ್ಥ ಬಲರಾಂ ಆಚಾರ್ಯ ಮಾತನಾಡಿ, ನಾವು ಚಿಕ್ಕವರಿದ್ದಾಗ ಒಂದು ಜೊತೆ ಚಪ್ಪಲ್ ಅದು ಸವೆದು ಹೋಗುವಷ್ಟು ಹಾಕುತ್ತಿದ್ದೆವು. ಆದರೆ ಇಂದು ಮನೆಯೊಳಗೆ, ಮನೆ ಹೊರಗೆ, ಬಾತ್ ರೂಂಗೆ, ಜಾಗಿಂಗ್ಗೆ, ವಾಕಿಂಗ್ಗೆ ಹೀಗೆ ಚಪ್ಪಲ್ಗಳ ಬಳಕೆ ಜಾಸ್ತಿಯಾಗಿದೆ. ನಯಾ ಚಪ್ಪಲ್ ಬಜಾರ್ ಪುತ್ತೂರಿನಲ್ಲಿ ತನ್ನದೇ ಆದ ಹೆಸರು ಗಳಿಸಿದೆ. ಹೆಂಗಸರ ಮನಸೂರೆಗೊಳ್ಳುವಂತಹ ಆಕರ್ಷಕ ವಸ್ತುಗಳು ಈ ಮಳಿಗೆಯಲ್ಲಿದೆ ಎಂದರು.
ವ್ಯಾಪಾರದಲ್ಲಿನ ಲಾಭದಲ್ಲಿ ಒಂದಂಶವನ್ನು ಬಡಬಗ್ಗರಿಗೆ ಹಂಚುವುದೇ ನಿಜವಾದ ಧರ್ಮ-ರೆ|ವಿಜಯ ಹಾರ್ವಿನ್:
ಸುದಾನ ಸಮೂಹ ವಿದ್ಯಾಸಂಸ್ಥೆಯ ಸಂಚಾಲಕ ರೆ|ವಿಜಯ ಹಾರ್ವಿನ್ ಮಾತನಾಡಿ, ರಫೀಕ್ರವರೋರ್ವ ಒಳ್ಳೆಯ ಮುಸಲ್ಮಾನ. ಸರಕಾರ ಶಾಲಾ ಮಕ್ಕಳಿಗೆ ಕೊಡುವ ಪಾದರಕ್ಷೆಗಳ ಬಗ್ಗೆ ಊಹಿಸಿ. ತಾಲೂಕಿನ ಅಂಗನವಾಡಿಯ ಮಕ್ಕಳಿಗೆ ಒಳ್ಳೆಯ ಗುಣಮಟ್ಟದ ಪಾದರಕ್ಷೆಗಳನ್ನು ಉಚಿತವಾಗಿ ರಫೀಕ್ರವರು ನೀಡುತ್ತಿರುವ ಕರ್ತವ್ಯಕ್ಕೆ ಕುರಾನ್ನಲ್ಲಿನ ಜಕಾತ್ ಪದಕ್ಕೆ ಅರ್ಥವನ್ನು ಕಲ್ಪಿಸುತ್ತದೆ. ವ್ಯಾಪಾರದಲ್ಲಿ ಗಳಿಸಿದ ಲಾಭದಲ್ಲಿ ಒಂದಂಶವನ್ನು ಬಡಬಗ್ಗರಿಗೆ ಹಂಚುವುದೇ ನಿಜವಾದ ಧರ್ಮ. ಅದನ್ನು ರಫೀಕ್ರವರು ಪಾಲಿಸಿಕೊಂಡು ಬರುತ್ತಿದ್ದಾರೆ ಎಂದರು.

ಸಂಸ್ಥೆಯಿಂದ ಗುಣಮಟ್ಟದ ಸೇವೆ ಶ್ಲಾಘನೀಯ-ಸಿಸ್ಟರ್ ಅನಿತಾ:
ಬೆಥನಿ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯ ಶಿಕ್ಷಕಿ ಸಿಸ್ಟರ್ ಅನಿತಾ ಮಾತನಾಡಿ, ಸಮಾಜಮುಖಿ ಕೆಲಸಗಳನ್ನು ಮಾಡುವ ಮೂಲಕ ದೇವರು ಮೆಚ್ಚುವ ಕೆಲಸ ಈ ಸಂಸ್ಥೆಯಿಂದ ಆಗುತ್ತಿದೆ. ಈ ಸಂಸ್ಥೆಯು ಸಮಾಜದಲ್ಲಿ ಗುಣಮಟ್ಟದ ಸೇವೆಯನ್ನು ನೀಡುತ್ತಿದ್ದು ಇದು ಮುಂದಿನ ದಿನಗಳಲ್ಲಿ ಮುಂದುವರೆಯಲಿ ಮಾತ್ರವಲ್ಲ ಅತ್ಯಂತ ಎತ್ತರಕ್ಕೆ ಏರಲಿ ಎಂದರು.
ಹಿರಿ-ಕಿರಿಯರೊಂದಿಗೆ ಬಾಂಡ್ ಆಗಿ ಇದ್ದದ್ದೆ ಅವರ ಬಂಡವಾಳ-ಚಿದಾನಂದ ಬೈಲಾಡಿ:
ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಚಿದಾನಂದ ಬೈಲಾಡಿ ಮಾತನಾಡಿ, ದುಬೈಯಲ್ಲಿ ಹಲವು ವರ್ಷ ಇದ್ದು ಬಳಿಕ ಉಪ್ಪಿನಂಗಡಿ ಪ್ರಸ್ತುತ ಪುತ್ತೂರಿನಲ್ಲಿ ನೆಲೆಯಾಗಿರುವ ರಫೀಕ್ರವರು ವ್ಯವಹಾರದಲ್ಲಿ ಸಾಕಷ್ಟು ಏಳಿಗೆಯನ್ನು ಕಂಡುಕೊಂಡಿದ್ದಾರೆ. ಹಿರಿ-ಕಿರಿಯರೊಂದಿಗೆ ಬಾಂಡ್ ಆಗಿ ಇದ್ದದ್ದೆ ಅವರ ಬಂಡವಾಳ ಎಂದರು.

ಶ್ರದ್ಧಾಭಕ್ತಿಯಿಂದ ವ್ಯವಹಾರ ಮಾಡಿದ್ದಲ್ಲಿ ದೇವರು ಕೈ ಬಿಡೋದಿಲ್ಲ-ಉಮೇಶ್ ನಾಯಕ್:
ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಪುತ್ತೂರು ಉಮೇಶ್ ನಾಯಕ್ ಮಾತನಾಡಿ, ವ್ಯಾಪಾರಸ್ಥರಲ್ಲಿ ಪುತ್ತೂರು ಮೂಲ ನಿವಾಸಿಗಳು ಕೆಲವೇ ಕೆಲವು. ಶ್ರದ್ಧಾಭಕ್ತಿಯಿಂದ ಪೂರಕವಾಗಿ ವ್ಯವಹಾರ ಮಾಡಿದ್ದಲ್ಲಿ ದೇವರು ಕೈ ಬಿಡೋದಿಲ್ಲ. ಕೆರೆಯ ನೀರನ್ನು ಕೆರೆಗೆ ಚೆಲ್ಲಿ ಎಂಬಂತೆ ದಾನರೂಪದಲ್ಲಿ ರಫೀಕ್ರವರು ತಮ್ಮ ಕಾಯಕದಲ್ಲಿನ ಒಂದಂಶವನ್ನು ಸಮಾಜದ ಅಭಿವೃದ್ಧಿಗೆ ವಿನಿಯೋಗಿಸುತ್ತಿರುವುದು ಶ್ಲಾಘನೀಯ. ರೋಟರಿ ಪುತ್ತೂರಿನ 51ನೇ ಅಧ್ಯಕ್ಷರಾಗಿದ್ದ ಸಂದರ್ಭದಲ್ಲಿ 51 ಅಂಗನವಾಡಿಗಳಿಗೆ ಪಾದರಕ್ಷೆ, 51 ದಂತ ಚಿಕಿತ್ಸಾ ಶಿಬಿರಗಳು ನಡೆಸಿದ್ದಾರೆ ಎಂದರು.

ರೋಟರಿ ವಲಯದಲ್ಲಿ ರಫೀಕ್ರವರು ಆರ್ಥಿಕ ಚಾಣಕ್ಯ-ಡಾ.ಶ್ರೀಪ್ರಕಾಶ್ ಬಿ:
ರೋಟರಿ ಕ್ಲಬ್ ಪುತ್ತೂರು ಅಧ್ಯಕ್ಷ ಡಾ.ಶ್ರೀಪ್ರಕಾಶ್ ಬಿ ಮಾತನಾಡಿ, ಚಪ್ಪಲ್ ಖರೀದಿ ಮಾಡಬೇಕು ಅಂದಾಗ ತಕ್ಷಣ ಬರುವುದೇ ರಫೀಕ್ರವರ ಮಳಿಗೆ. ಎಲ್ಲಾ ಆಯಾಮಗಳಲ್ಲಿ ಗೌರವಾನ್ವಿತ ವ್ಯಕ್ತಿಯಾಗಿ ಗುರುತಿಸಿಕೊಂಡಿರುವ ರಫೀಕ್ರವರು ವ್ಯಾಪಾರದ ಜೊತೆಗೆ ಅವರು ನೀಡುವ ಸೇವೆ ಸಮಾಜದಲ್ಲಿ ಗುರುತಿಸಿಕೊಂಡಿದೆ. ರೋಟರಿ ವಲಯದಲ್ಲಿ ರಫೀಕ್ ರವರು ಆರ್ಥಿಕ ಚಾಣಕ್ಯ ಎಂದು ಹೆಸರು ಗಳಿಸಿದ್ದಾರೆ. ವ್ಯಾಪಾರದಲ್ಲಿ ಜನಾನುರಾಗಿಯಾಗಿರುವ ರಫೀಕ್ರವರ ಉತ್ಸಾಹ ನಮಗೆ ಮಾರ್ಗದರ್ಶಿ ಎಂದರು.

ವ್ಯಾಪಾರಸ್ಥರು ಒಗ್ಗಟ್ಟಾಗಿ ವ್ಯವಹರಿಸಿದ್ದಲ್ಲಿ ಬಾಂಧವ್ಯ ಹೆಚ್ಚುತ್ತದೆ-ಕೆ.ಪಿ ಸಾದಿಕ್:
ಆಕರ್ಷಣ್ ಇಂಡಸ್ಟ್ರೀಸ್ನ ಸಿಇಒ ಕೆ.ಪಿ ಸಾದಿಕ್ ಮಾತನಾಡಿ, ಸ್ಥಳೀಯ ವ್ಯಾಪಾರಸ್ಥರು ಒಗ್ಗಟ್ಟಾಗಿ ವ್ಯವಹರಿಸಿದ್ದಲ್ಲಿ ಬಾಂಧವ್ಯ ಹೆಚ್ಚುತ್ತದೆ. ಕೆಲವು ಮಳಿಗೆಗಳು ಮಾತ್ರ ವ್ಯಾಪಾರದಲ್ಲಿ ಏಳಿಗೆ ಹೊಂದಿ ಮಳಿಗೆ ವಿಸ್ತರಿಸುತ್ತಾ ಹೋಗುತ್ತಿದೆ. ರಫೀಕ್ರವರ ಅಚ್ಚುಕಟ್ಟಾಗಿರುವಿಕೆ, ಸಮಯಪಾಲನೆ, ಶಿಸ್ತು, ಸೇವೆಯಿಂದ ಮಳಿಗೆಯ ಅಭಿವೃದ್ಧಿಗೆ ಪೂರಕವಾಗಿದೆ ಎಂದರು.
ಗ್ರಾಹಕರ ಹೆಚ್ಚಿನ ಪ್ರೋತ್ಸಾಹದೊಂದಿಗೆ ಆಕಾಶದೆತ್ತರಕ್ಕೆ ಬೆಳೆಯಲಿ-ಎಂಜಿ ರಝಾಕ್:
ಮದರ್ ಇಂಡಿಯಾ ಮಾಲಕ ಎಂ.ಜಿ ರಝಾಕ್ ಮಾತನಾಡಿ, ಚಪ್ಪಲ್ ಬಜಾರ್ ಪಾಲುದಾರರಾದ ರಫೀಕ್ ಹಾಗೂ ಸಿದ್ಧೀಕ್ರವರ ಜೊತೆಯಾಟದಲ್ಲಿ ಇಲ್ಲಿನ ಶೋರೂಂ ಪ್ರಗತಿಪಥದಲ್ಲಿ ಸಾಗುತ್ತಿದ್ದು ಗ್ರಾಹಕರ ಇನ್ನೂ ಹೆಚ್ಚಿನ ಪ್ರೋತ್ಸಾಹದೊಂದಿಗೆ ಆಕಾಶದೆತ್ತರಕ್ಕೆ ಬೆಳೆಯಲಿ ಎಂದರು.
ಪುತ್ತೂರು ತಾಲೂಕು ಸೀರತ್ ಸಮಿತಿಯ ಅಧ್ಯಕ್ಷ ಅಬ್ದುಲ್ ಖಾದರ್, ಸಿಡ್ಕೋ ಅಧ್ಯಕ್ಷ ಟಿ.ವಿ ರವೀಂದ್ರನ್, ಎಕ್ಸ್ಟೆನ್ ಗ್ರೂಪ್ ಆಫ್ ಕಂಪೆನಿಯ ಸಿಇಒ ದಾವೂದ್ ಬೆಂಗಳೂರು, ಸಾರ್ವಜನಿಕ ಮಹಾಲಿಂಗೇಶ್ವರ ಉತ್ಸವ ಕಿಲ್ಲೆ ಮೈದಾನ ಹಾಗೂ ಕಿಲ್ಲೆ ಮೈದಾನ ದೇವತಾ ಸಮಿತಿ ಅಧ್ಯಕ್ಷ ಅಭಿಜಿತ್ ಶೆಟ್ಟಿ ನೆಲ್ಲಿಕಟ್ಟೆ, ಕೊಡಾಜೆ ಸುಲ್ತಾನ್ ಕಂಪೆನಿಯ ಫಾರೂಕ್ ಸುಲ್ತಾನ್ ಸಹಿತ ರೋಟರಿ ಕ್ಲಬ್ ಪುತ್ತೂರು ಸದಸ್ಯರು, ಪುತ್ತೂರು ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಸದಸ್ಯರು, ಹಿತೈಷಿಗಳು, ಎಂ.ಜಿ ರಫೀಕ್ರವರ ಕುಟುಂಬಸ್ಥರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ನಯಾ ಚಪ್ಪಲ್ ಬಜಾರ್ ಮಳಿಗೆಯ ಮಾಲಕ ಎಂ.ಜಿ ರಫೀಕ್ರವರು ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿ, ವಂದಿಸಿದರು. ನಯಾ ಚಪ್ಪಲ್ ಬಜಾರ್ ಪಾಲುದಾರರಾದ ಎಂ.ಜಿ ರಫೀಕ್ ಹಾಗೂ ಸಿದ್ಧೀಕ್ರವರು ಅತಿಥಿಗಳಿಗೆ ಶಾಲು ಹೊದಿಸಿ ಸ್ವಾಗತಿಸಿದರು. ಹಿರಿಯ ಶಿಕ್ಷಕ ಹಾಗೂ ರೋಟರಿ ಕ್ಲಬ್ ಪುತ್ತೂರು ಸದಸ್ಯ ಸುರೇಶ್ ಶೆಟ್ಟಿ ಮತ್ತು ರೋಟರಿ ಪುತ್ತೂರು ಸದಸ್ಯ ಪರಮೇಶ್ವರ ಗೌಡ ಕಾರ್ಯಕ್ರಮ ನಿರೂಪಿಸಿದರು. ನಯಾ ಚಪ್ಪಲ್ ಬಜಾರ್ ಸಿಬ್ಬಂದಿ ಸಹಕರಿಸಿದರು.
ಮಳಿಗೆಯಲ್ಲಿ ಏನೇನಿದೆ…
*ವಿವಿಧ ಕಂಪೆನಿಗಳ ವಿನ್ಯಾಸದ ಪಾದರಕ್ಷೆಗಳು, *ಮನೆಯ ಅಲಂಕಾರಿಕ ವಸ್ತುಗಳು, *ಡೆಕೋರೇಶನ್ ಐಟಮ್ಸ್, *ಆರ್ಟಿಫಿಶಿಯಲ್ ಹೂಗಳ ಸಂಗ್ರಹ, *ಗೋಡೆ ಗಡಿಯಾರ, *ಡಾಲ್, ಕ್ರೋಕರಿ, *ಫ್ಲವರ್ ಪಾಟ್, *ಡೋರ್ ಮ್ಯಾಟ್, *ಇಂಡಿಯನ್ ಟಾಯ್ಸ್ ವಿಶೇಷ ಸಂಗ್ರಹ, *ಬ್ರಾಂಡೆಡ್ ಹೆಲ್ಮೆಟ್ಸ್, *ಗಿಫ್ಟ್ ಐಟಂ, *ಕೂಲಿಂಗ್ ಕನ್ನಡಕಗಳು, *ಮಹಿಳೆಯರ ವ್ಯಾನಿಟಿ ಬ್ಯಾಗ್ಸ್, ವನ್ ಗ್ರಾಂ ಗೋಲ್ಡ್ ಇತ್ಯಾದಿ..
ಸನ್ಮಾನ..
ಕಳೆದ 35 ವರ್ಷಗಳಿಂದ ಶಿಕ್ಷಕಿಯಾಗಿ ಸೇವೆ, 20 ವರ್ಷದಿಂದ ವಿಶೇಷ ಮಕ್ಕಳನ್ನು ಮುಖ್ಯವಾಹಿನಿಗೆ ಸೇರಿಸುವಲ್ಲಿ ಸೇವೆ ನೀಡುತ್ತಿರುವ ತನುಜಾ ಝೇವಿಯರ್, ಕಳೆದ ವರ್ಷದಲ್ಲಿ ಗ್ರಾಹಕರಾಗಿ ಉತ್ತಮ ಸೇವೆ ನೀಡಿದ ಮೋಹನ್ ಜಿ, 28 ವರ್ಷದ ಹಿಂದೆ ನಯಾ ಚಪ್ಪಲ್ ಬಜಾರ್ ವ್ಯವಹಾರದ ಹಿಂದೆ ನಾವಿದ್ದೇವೆ ಎಂದು ಪ್ರೋತ್ಸಾಹ ನೀಡಿರುವ ಹಿರಿಯರಾದ ವಿಶ್ವನಾಥ್, ಅಬೂಬಕ್ಕರ್ ಪರ್ಲಡ್ಕ, ವಿಸ್ತೃತ ಮಳಿಗೆಯ ಇಂಟೀರಿಯರ್ ಮಾಡಿಕೊಟ್ಟ ನೈಮು, ಇಲೆಕ್ಟ್ರಿಕಲ್ ಹಾಗೂ ಪ್ಲಂಬಿಂಗ್ ಕೆಲಸ ಮಾಡಿಕೊಟ್ಟ ಬಾತೀಷ್ ರವರುಗಳನ್ನು ಸನ್ಮಾನಿಸಲಾಯಿತು.
ಪ್ರಥಮ ಖರೀದಿ..
ಬೊಳ್ವಾರು ಮಹಾವೀರ ಆಸ್ಪತ್ರೆಯ ಆಡಳಿತ ನಿರ್ದೇಶಕ ಡಾ.ಅಶೋಕ್ ಪಡಿವಾಳ್ರವರ ಸೊಸೆ ರಚನಾ ಪಡಿವಾಳ್ರವರು ಮೊದಲ ಖರೀದಿಯನ್ನು ಮಾಡುವ ಮೂಲಕ ವಿಸ್ತೃತ ಮಳಿಗೆಗೆ ಚಾಲನೆ ನೀಡಿ ಶುಭ ಹಾರೈಸಿದರು.










