ಜ.25ರಿಂದ ಪುತ್ತೂರು ನಗರ ವ್ಯಾಪ್ತಿಯ 8 ವಸತಿಗಳಲ್ಲಿ ಹಿಂದೂ ಸಂಗಮ

0

ಪುತ್ತೂರು:ರಾಷ್ಟ್ರೀಯ ಸ್ವಯಂಸೇವಕ ಸಂಘದ ಶತಾಬ್ದಿಯ ಹಿನ್ನೆಲೆಯಲ್ಲಿ ನಿರಂತರ ಚಟುವಟಿಕೆಯ ಹಿನ್ನೆಲೆಯಲ್ಲಿ ಪುತ್ತೂರು ನಗರ ವ್ಯಾಪ್ತಿಯ 8 ವಸತಿಗಳಲ್ಲೂ ಹಿಂದೂ ಸಂಗಮ ನಡೆಯಲಿದೆ ಎಂದು ಹಿಂದೂ ಸಂಗಮ ಪುತ್ತೂರು ಆಯೋಜನಾ ಸಮಿತಿ ಅಧ್ಯಕ್ಷ ಲಕ್ಷ್ಮೀಕಾಂತ್ ಅಚಾರ್ಯ ಅವರು ಸುದ್ದಿಗೋಷ್ಟಿಯಲ್ಲಿ ತಿಳಿಸಿದರು.


ಸಂಘದ ಪ್ರೇರಣೆಯಂತೆ ಪ್ರಮುಖವಾದ 5 ವಿಷಯಗಳನ್ನು ಜನರಿಗೆ ತಿಳಿಸುವ ಉದ್ದೇಶದಿಂದ ಹಿಂದೂ ಸಂಗಮ ನಡೆಯಲಿದೆ.ಅದರಲ್ಲಿ ಸಾಮಾಜಿಕ ಸಾಮರಸ್ಯ, ಪರಿಸರ ಸಂರಕ್ಷಣೆ ಸಂವರ್ಧನೆ, ಕುಟುಂಬ ಪ್ರಬೋಧನೆ, ಸ್ವದೇಶಿ ಜೀವನಶೈಲಿ, ನಾಗರಿಕ ಶಿಷ್ಟಾಚಾರ ಈ ವ್ಯವಸ್ಥೆಗಳನ್ನು ರಾಷ್ಟ್ರದ ಸರ್ವಾಂಗೀಣ ಉನ್ನತಿಯ ಕುರಿತು ತಿಳಿಸಲಾಗುವುದು ಎಂದು ಅವರು ವಿವರಿಸಿದರು.


ಹಿಂದೂ ಸಂಗಮದ ಪ್ರಧಾನ ಕಾರ್ಯದರ್ಶಿ ಅಶೋಕ್ ಕುಂಬ್ಳೆ ಅವರು ಮಾತನಾಡಿ, ಹಿಂದೂ ಸಂಗಮ ಆಯೋಜನಾ ಸಮಿತಿ ಪುತ್ತೂರು ಇದರ ವ್ಯಾಪ್ತಿಯಲ್ಲಿ ಬರುವ ನಗರದ 8 ವಸತಿಗಳಾದ ವಿದ್ಯಾರಣ್ಯ, ಯಾಧವ, ಉಳ್ಳಾಲ್ತಿ, ಮಾಧವ, ವಿನಾಯಕ, ವಿವೇಕ, ಕೇಶವ, ಕೃಷ್ಣನಗರ ವಸತಿಗಳಲ್ಲಿ ಹಿಂದು ಸಂಗಮ ಕಾರ್ಯಕ್ರಮ ನಡೆಯಲಿದೆ.ಜ.25ಕ್ಕೆ ಉಳ್ಳಾಲ್ತಿ ವಸತಿಗೆ ಸಂಬಂಧಿಸಿ ಹಿಂದೂ ಸಂಗಮ ಕಾರ್ಯಕ್ರಮ ಸಂಜೆ ಗಂಟೆ 3.30 ರಿಂದ ನರೇಂದ್ರ ಕಾಲೇಜು ಆವರಣದಲ್ಲಿ ನಡೆಯಲಿದೆ. ಜ.26ಕ್ಕೆ ಸಂಜೆ ಗಂಟೆ 3.30ರಿಂದ ವಿವೇಕ ವಸತಿಗೆ ಸಂಬಂಧಿಸಿ ಹಿಂದೂ ಸಂಗಮ ಕಾರ್ಯಕ್ರಮ ನೆಹರುನಗರ ವಿವೇಕಾನಂದ ಕಾನೂನು ಮಹಾವಿದ್ಯಾಲಯದ ಆವರಣದಲ್ಲಿ ನಡೆಯಲಿದೆ. ಅದೇ ದಿನ ಸಂಜೆ ಗಂಟೆ 4 ರಿಂದ ಕೃಷ್ಣನಗರ ವಸತಿಗೆ ಸಂಬಂಧಿಸಿ ಶ್ರೀ ವಿಷ್ಣು ಮಂಟಪ ಕೆಮ್ಮಾಯಿ ಇಲ್ಲಿ ಹಿಂದು ಸಂಗಮ ಕಾರ್ಯಕ್ರಮ ನಡೆಯಲಿದೆ.

ಫೆ. 1ರಂದು 5 ಕಡೆ ಕಾರ್ಯಕ್ರಮ ನಡೆಯಲಿದ್ದು, ಸಂಜೆ ಗಂಟೆ 5.15ಕ್ಕೆ ವಿದ್ಯಾರಣ್ಯ ವಸತಿಗೆ ಸಂಬಂಧಿಸಿ ಶ್ರೀ ಸುಕೃತೀಂದ್ರ ಸಭಾಭವನ ಶ್ರೀ ವೆಂಕಟರಮಣ ದೇವಸ್ಥಾನದ ಬಳಿ, ಸಂಜೆ ಗಂಟೆ 4 ರಿಂದ ಮಾಧವ ವಸತಿ ವ್ಯಾಪ್ತಿಯ ಹಿಂದೂ ಸಂಗಮ ಕಾರ್ಯಕ್ರಮ ಕಲ್ಲಾರೆ ಶ್ರೀ ಗುರುರಾಘವೇಂದ್ರ ಸ್ವಾಮಿ ಸಭಾ ಭವನದಲ್ಲಿ, ಸಂಜೆ ಗಂಟೆ 4 ರಿಂದ ವಿನಾಯಕ ವಸತಿ ವ್ಯಾಪ್ತಿಯ ಹಿಂದೂ ಸಂಗಮ ಕಾರ್ಯಕ್ರಮ ಕೆಮ್ಮಿಂಜೆ ಶ್ರೀ ಷಣ್ಮುಖ ಸುಬ್ರಹ್ಮಣ್ಯ ಮಹಾವಿಷ್ಣು ಸಭಾಭವನದಲ್ಲಿ, ಸಂಜೆ ಗಂಟೆ 4 ರಿಂದ ಕೇಶವ ವಸತಿ ವ್ಯಾಪ್ತಿಯ ಹಿಂದೂ ಸಂಗಮ ಕಾರ್ಯಕ್ರಮವು ಬನ್ನೂರು ಅಯೋಧ್ಯಾನಗರ ಶ್ರೀ ಶಿವಪಾರ್ವತಿ ಮಂದಿರದಲ್ಲಿ, ಸಂಜೆ ಗಂಟೆ 4 ರಿಂದ ಯಾಧವ ವಸತಿ ವ್ಯಾಪ್ತಿಯ ಹಿಂದೂ ಸಂಗಮ ಕಾರ್ಯಕ್ರಮ ಮುಕ್ರಂಪಾಡಿ ಸುಭದ್ರ ಕಲ್ಯಾಣ ಮಂಟಪದಲ್ಲಿ ನಡೆಯಲಿದೆ ಎಂದು ಮಾಹಿತಿ ನೀಡಿದ ಅವರು ಎಲ್ಲಾ ವಸತಿಗಳಲ್ಲಿ ಅಲ್ಲಿನ ಆಯೋಜನಾ ಸಮಿತಿಯ ನೇತೃತ್ವದಲ್ಲಿ ಗೋ ಪೂಜೆ, ಭಾರತ್ ಮಾತಾ ಪೂಜನಾ ಕಾರ್ಯಕ್ರಮ, ಭಜನಾ ಕಾರ್ಯಕ್ರಮ, ಶೋಭಾಯಾತ್ರೆಗಳು ಹಿಂದೂ ಸಂಗಮ ಕಾರ್ಯಕ್ರಮಕ್ಕೆ ಮೆರುಗು ನೀಡಲಿದೆ ಎಂದು ತಿಳಿಸಿದರು.


ದಿಕ್ಸೂಚಿ ಭಾಷಣ:
ಹಿಂದೂ ಸಂಗಮದ ಸಭಾ ಕಾರ್ಯಕ್ರಮದಲ್ಲಿ ದಿಕ್ಸೂಚಿ ಭಾಷಣವಿರುತ್ತದೆ.ಪಂಚ ಉದ್ದೇಶಕ್ಕೆ ಸಂಬಂಧಿಸಿ ದಿಕ್ಸೂಚಿ ಭಾಷಣ ನಡೆಯಲಿದೆ.ಪ್ರಶಿಕ್ಷಣ ಆದವರೇ ದಿಕ್ಸೂಚಿ ಭಾಷಣ ಮಾಡಲಿದ್ದಾರೆ ಎಂದು ಹಿಂದೂ ಸಂಗಮ ಸಂಯೋಜಕ ಸಂತೋಷ್ ಬೋನಂತಾಯ ಅವರು ತಿಳಿಸಿದರು.ಪತ್ರಿಕಾಗೋಷ್ಟಿಯಲ್ಲಿ ಸಮಿತಿ ಉಪಾಧ್ಯಕ್ಷ ಸಚ್ಚಿದಾನಂದ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here