







ಪುತ್ತೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ವತಿಯಿಂದ 5 ವರ್ಷಗಳ ಕಾಲ ಅಪಘಾತ/ ಅಪರಾಧ ರಹಿತ ಚಾಲಕ/ನಿರ್ವಾಹಕರಿಗೆ ’ಸುರಕ್ಷಾ ಚಾಲಕ’ ಎಂಬ ಹೆಸರಿನಲ್ಲಿ ಪ್ರದಾನ ಮಾಡುವ 2022ನೇ ಸಾಲಿನ ಬೆಳ್ಳಿ ಪದಕ ಮತ್ತು ರೂ. 5ಸಾವಿರ ಪುರಸ್ಕಾರಕ್ಕೆ ನಿಗಮದ ಪುತ್ತೂರು ವಿಭಾಗದ 17 ಮಂದಿ ಚಾಲಕರು ಆಯ್ಕೆಗೊಂಡಿದ್ದಾರೆ.


ಪುತ್ತೂರು ಘಟಕದ ಚಾಲಕರಾದ ವಾಸುದೇವ ಗೌಡ, ರಮೇಶ್ ಪ್ರಭು, ವಿಶ್ವನಾಥ ರೈ, ಗುರುವಪ್ಪ ಕೆ, ನಾರಾಯಣ ಪಿ, ಬಾಬು ಮೇರ, ಬಸವರಾಜ್ ಲಮಾಣಿ, ಸುಳ್ಯ ಘಟಕದ ವಸಂತ ಕುಮಾರ್ ಹೆಚ್.ಪಿ, ಬಿ.ಸಿ.ರೋಡ್ ಘಟಕದ ಲೋಕನಾಥ್ ರೈ ಕೆ, ಚಂದ್ರಶೇಖರ ವಿ, ನವೀನ್ ಕುಮಾರ್, ಚಂದ್ರಶೇಖರ ಪಿ, ಧರ್ಮಸ್ಥಳ ಘಟಕದ ರಾಮಣ್ಣ ಗೌಡ, ಕಲ್ಲಪ್ಪ ಕಾಂಬ್ಲೆ, ಧರ್ಮರಾಜ್ ಎನ್, ಮಡಿಕೇರಿ ಘಟಕದ ಮೆಕಬುಲ್ ಅಹ್ಮದ್ ಕಲ್ಯೆಗಾರ, ಶೇಖರ ಬಿ.ಬಿ ಅವರು ಬೆಳ್ಳಿಪದಕ ವಿಜೇತರಾಗಿದ್ದಾರೆ.



ಇವರಿಗೆ ಜ.26ರಂದು ಮಂಗಳೂರಿನ ನೆಹರು ಮೈದಾನದಲ್ಲಿ ನಡೆಯುವ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಗಣರಾಜ್ಯೋತ್ಸವ ಆಚರಣೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಗಣ್ಯರು ಬೆಳ್ಳಿಪದಕ ವಿತರಣೆ ಮಾಡಲಿದ್ದಾರೆ ಎಂದು ಕೆಎಸ್‌ಆರ್‌ಟಿಸಿ ಪುತ್ತೂರು ವಿಭಾಗೀಯ ನಿಯಂತ್ರಣಾಧಿಕಾರಿ ಎಂ.ಪಿ.ಶ್ರೀಹರಿಬಾಬು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.










