







ಪುತ್ತೂರು: ತುಳುನಾಡ ಜಾತ್ರೆ ಶ್ರೀ ಒಡಿಯೂರು ರಥೋತ್ಸವಕ್ಕೆ ಪುತ್ತೂರು ಒಡಿಯೂರು ಶ್ರೀ ಗುರುದೇವ ಸೇವಾ ಬಳಗ ಮತ್ತು ಒಡಿಯೂರು ಶ್ರೀ ವಜ್ರಮಾತಾ ಮಹಿಳಾ ಘಟಕ, ಒಡಿಯೂರು ಶ್ರೀ ಗ್ರಾಮ ವಿಕಾಸ ಯೋಜನೆ ವತಿಯಿಂದ ಹೊರೆಕಾಣಿಕೆ ಮೆರವಣಿಗೆ ಜ.25ರಂದು ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಬಳಿಯಿಂದ ನಡೆಯಿತು.



ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಸದಸ್ಯ ವಿನಯ್ ಸುವರ್ಣ ರವರು ತೆಂಗಿನಕಾಯಿಯನ್ನು ಹೊಡೆಯುವ ಮೂಲಕ ಚಾಲನೆ ನೀಡಿದರು. ಗುರುದೇವ ಸೇವಾ ಬಳಗದ ಅಧ್ಯಕ್ಷ ಸುಧೀರ್ ನೋಂಡ, ವಜ್ರಮಾತ ಮಹಿಳಾ ಘಟಕದ ಅಧ್ಯಕ್ಷೆ ನಯನ ರೈ, ಒಡಿಯೂರು ಬ್ಯಾಂಕಿನ ನಿರ್ದೇಶಕ ಮೋನಪ್ಪ ಪೂಜಾರಿ, ಗುರುದೇವ ಸೇವಾ ಬಳಗದ ಕಾರ್ಯದರ್ಶಿ ಹರಿಣಾಕ್ಷಿ ಜೆ ಶೆಟ್ಟಿ, ಗುರುದೇವ ಸೇವಾ ಬಳಗದ ಸದಸ್ಯರಾದ ವಿಶ್ವನಾಥ್ ಶೆಟ್ಟಿ, ಅಶೋಕ್ ಕುಮಾರ್ ಅರ್ಪಿಣಿ ಗುತ್ತು, ಒಡಿಯೂರು ಗ್ರಾಮವಿಕಾಸ ಯೋಜನೆ ಪುತ್ತೂರು ತಾಲೂಕು ಮೇಲ್ವಿಚಾರಕರಾದ ಸವಿತಾ ರೈ, ಪುತ್ತೂರು ವಲಯ ಸಂಯೋಜಕಿ ಶಶಿ ಡಿ, ಕುಂಬ್ರ ವಲಯ ಸಂಯೋಜಕಿ ಜಯಂತಿ, ಈಶ್ವರಮಂಗಲ ವಲಯ ಸಂಯೋಜಕಿ ಮಹಿತ ರೈ, ಗೋಳಿತೊಟ್ಟು ವಲಯ ಸಂಯೋಜಕಿ ಭಾರತಿ, ಉಪ್ಪಿನಂಗಡಿ ವಲಯ ಸಂಯೋಜಕಿ ಸುಮಿತ್ರಾ ರೈ, ಸೇವಾಧೀಕ್ಷಿತರಾದ ಸುನಂದಾ, ಸುಜಾತಾ, ಹರಿಣಾಕ್ಷಿ, ಪ್ರೇಮಲತಾ, ಅಶ್ವಿನಿ, ಘಟಕ ಸಮಿತಿ ಅಧ್ಯಕ್ಷರಾದ ಅವಿನಾಶ್, ಕೇಶವ, ರವಿ, ಯಶವಂತ ರೈ ಉಪಸ್ಥಿತರಿದ್ದರು.












