ಕೈಕಾರ ಹಿ.ಪ್ರಾ ಶಾಲಾ ಶತಮಾನೋತ್ಸವದ ಆಮಂತ್ರಣ ಪತ್ರ ಬಿಡುಗಡೆ

0

ಪುತ್ತೂರು: ಒಳಮೊಗರು ಗ್ರಾಮದ ಕೈಕಾರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಫೆ.14 ಮತ್ತು 15ರಂದು ನಡೆಯಲಿರುವ ಶಾಲಾ ಶತಮಾನೋತ್ಸವ ಸಮಾರಂಭದ ಆಮಂತ್ರಣ ಪತ್ರಿಕೆಯುವ ಜ.24ರಂದು ಸರಕಾರಿ ನೌಕರರ ಸಂಘದ ಸಭಾಂಗಣದಲ್ಲಿ ನಡೆದ ಕಾರ್ಯನಿರತ ಪತ್ರಕರ್ತರ ಸಂಘದ ಪದಗ್ರಹ ಸಮಾರಂಭದಲ್ಲಿ ಬಿಡುಗಡೆಗೊಂಡಿತು.


ಶಾಲಾ ಶತಮಾನೋತ್ಸವದ ಸಮಿತಿ ಗೌರವಾಧ್ಯಕ್ಷರಾಗಿರುವ ಶಾಸಕ ಅಶೋಕ್ ಕುಮಾರ್ ರೈ ಆಮಂತ್ರಣ ಬಿಡುಗಡೆಗೊಳಿಸಿದರು. ಶತಮಾನೋತ್ಸವ ಸಮಿತಿ ಗೌರವಾಧ್ಯಕ್ಷ ಶಿವರಾಮ ಶೆಟ್ಟಿ ಶಿವಸದಸನ ಬಿಲ್ಲಾಜೆ, ಅಧ್ಯಕ್ಷ ಪ್ರಕಾಶ್ಚಂದ್ರ ರೈ ಕೈಕಾರ, ಸಂಚಾಲಕ ಸೀತಾರಾಮ ರೈ ಚೆಲ್ಯಡ್ಕ, ಆನಂದ ರೈ ಪುಂಡಿಕಾ, ಎಸ್‌ಡಿಎಂಸಿ ಅಧ್ಯಕ್ಷ ಶೀಲಾವತಿ, ಎಲ್‌ಕೆಜಿ, ಯುಕೆಜಿ ಅಭಿವೃದ್ಧಿ ಸಮಿತಿ ಅಧ್ಯಕ್ಷ ಸಂಜಿತ್ ರೈ ತೊಟ್ಲ, ಸಂಚಾಲಕಿ ಶಾರದಾ ಎಸ್ ಶೆಟ್ಟಿ, ಬ್ಲಾಕ್ ಕಾಂಗ್ರೆಸ್ ಅದ್ಯಕ್ಷ ಕೃಷ್ಣಪ್ರಸಾದ್ ಆಳ್ವ, ಶತಮಾನೋತ್ಸವ ಸಮಿತಿ ಉಪಾಧ್ಯಕ್ಷರಾದ ಗಣೇಶ್ ರೈ ಪನಡ್ಕ, ಜಯಂತ ಶೆಟ್ಟಿ ಕಂಬಳತ್ತಡ್ಡ, ಚಂದ್ರಹಾಸ ರೈ ಪನಡ್ಕ, ಕಾರ್ಯಕಾರಿ ಸಮಿತಿ ಸದಸ್ಯರಾದ ಅಮರನಾಥ ರೈ ಐಂಬಾಗಿಲು, ಸಂತೋಷ್ ಕುಮಾರ್ ರೈ, ರಕ್ಷಿತ್ ರೈ ತೊಟ್ಲ, ಹರೀಶ್ ಮಿನಿಪದವು, ಪದಾಧಿಕಾರಿಗಳಾದ ಕಿರಣ್ ರೈ ಪುಂಡಿಕಾ, ಪವಿತ್ರ ಆಳ್ವ ಕೈಕಾರ, ಪ್ರಜನ್ ರೈ ತೊಟ್ಲ, ಗಿರೀಶ್ ರೈ ಮೂಲೆ, ಹರೀಶ್ ಕುಲಾಲ್ ಕೈಕಾರ, ಕಾರ್ತಿಕ್ ರೈ ಕೈಕಾರ, ಪ್ರಭಾರ ಮುಖ್ಯಗುರು ರಾಮಣ್ಣ ರೈ, ಶಿಕ್ಷಕ ಸುರರಾಜ್ ಮೊದಲಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here