ನಾಳೆ(ಜ.26) ಕುಂಬ್ರ ಮರ್ಕಝುಲ್ ಹುದಾದಲ್ಲಿ ಬೆಳ್ಳಿ ವರ್ಷದ ಉದ್ಘಾಟನೆ, ಮದನೀಯಂ ಮಜ್ಲಿಸ್

0

ಪುತ್ತೂರು: ಕುಂಬ್ರ ಮರ್ಕಝುಲ್ ಹುದಾ ಮಹಿಳಾ ಕಾಲೇಜಿನ ಬೆಳ್ಳಿ ವರ್ಷದ ಉದ್ಘಾಟನೆ ಹಾಗೂ `ಮದನೀಯಂ’ ಆಧ್ಯಾತ್ಮಿಕ ಮಜ್ಲಿಸ್ ಜ.26ರಂದು ಕುಂಬ್ರ ಮರ್ಕಝ್ ಕ್ಯಾಂಪಸ್‌ನಲ್ಲಿ ನಡೆಯಲಿದೆ.


ಮಗ್ರಿಬ್ ನಮಾಜಿನ ಬಳಿಕ ಅಬ್ದುಲ್ ಲತೀಫ್ ಸಖಾಫಿ ಕಾಂತಪುರ ನೇತೃತ್ವದಲ್ಲಿ ಮದನೀಯಂ ಆಧ್ಯಾತ್ಮಿಕ ಮಜ್ಲಿಸ್ ನಡೆಯಲಿದ್ದು ಕುಂಬ್ರ ಮರ್ಕಝುಲ್ ಹುದಾದ ಅಧ್ಯಕ್ಷ ಅಬ್ದುಲ್ ರಹಿಮಾನ್ ಹಾಜಿ ಅರಿಯಡ್ಕ ಅಧ್ಯಕ್ಷತೆ ವಹಿಸಲಿದ್ದಾರೆ. ಕುಂಬ್ರ ಮರ್ಕಝುಲ್ ಹುದಾದ ಪ್ರಾಂಶುಪಾಲ ಮುಹಮ್ಮದ್ ಸಅದಿ ವಳವೂರು ದುವಾ ನಿರ್ವಹಿಸಲಿದ್ದು, ಕಾರ್ಯಾಧ್ಯಕ್ಷ ಡಾ.ಅಬ್ದುಲ್ ರಶೀದ್ ಸಖಾಫಿ ಝೈನಿ ಕಾಮಿಲ್ ಮುನ್ನುಡಿ ಭಾಷಣ ನಡೆಸಲಿದ್ದಾರೆ.

ಬೆಳ್ಳಿ ವರ್ಷ ಉದ್ಘಾಟನೆ:
ಸಂಜೆ 4 ಗಂಟೆಗೆ ಬೆಳ್ಳಿ ವರ್ಷದ ಉದ್ಘಾಟನೆಯನ್ನು ಕುಂಬ್ರ ಮರ್ಕಝುಲ್ ಹುದಾ ಮಹಿಳಾ ಕಾಲೇಜಿನ ಪ್ರಧಾನ ಸಲಹೆಗಾರರಾದ ಸಯ್ಯದ್ ಕೆ.ಎಸ್ ಆಟಕೋಯ ತಂಙಳ್ ಕುಂಬೋಳ್ ನೆರವೇರಿಸಲಿದ್ದಾರೆ. ಸಂಜೆ ಗಂಟೆ 4.30ಕ್ಕೆ ಸುನ್ನೀ ಸಂಘ ಕುಟುಂಬದ `ಸಾರಥಿ ಸಂಗಮ’ ನಡೆಯಲಿದ್ದು ಈ ಕಾರ್ಯಕ್ರಮದಲ್ಲಿ ಎರಡು ದಶಕಗಳ ಹಿಂದೆ ಸುನ್ನತ್ ಜಮಾಅತ್ ಸಂಘಟನೆಗಾಗಿ ತ್ಯಾಗಮಯ ಸೇವೆ ಸಲ್ಲಿಸಿದ ಕೆಲವು ಪ್ರಮುಖ ಸಂಘಟನಾ ಕಾರ್ಯಕರ್ತರನ್ನು ಗೌರವಿಸುವ ಕಾರ್ಯಕ್ರಮ ನಡೆಯಲಿದೆ. ಕುಂಬ್ರ ಮರ್ಕಝುಲ್ ಹುದಾದ ಸದಸ್ಯ ಸಲಹೆಗಾರರಾದ ಬಿ.ಕೆ ಮುಹಮ್ಮದ್ ಅಲೀ ಫೈಝಿ ಬಾಳೆಪುಣಿ ಅಧ್ಯಕ್ಷತೆ ವಹಿಸಲಿದ್ದು ಪುತ್ತೂರು ಸುನ್ನೀ ಜಂಇಯ್ಯತುಲ್ ಉಲಮಾದ ಅಧ್ಯಕ್ಷ ಅಬ್ದುಲ್ ಜಲೀಲ್ ಸಖಾಫಿ ಜಾಲ್ಸೂರು ಉದ್ಘಾಟಿಸಲಿದ್ದಾರೆ. ಕೆ.ಎಂ.ಜೆ ದ.ಕ ಈಸ್ಟ್ ಅಧ್ಯಕ್ಷ ಜಿ.ಎಂ ಮುಹಮ್ಮದ್ ಕಾಮಿಲ್ ಸಖಾಫಿ ವಿಷಯ ಮಂಡನೆ ಮಾಡಲಿದ್ದಾರೆ. ಹಲವು ಗಣ್ಯರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ಕುಂಬ್ರ ಮರ್ಕಝುಲ್ ಹುದಾ ಸಂಸ್ಥೆಯ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here