33ನೇ ವರ್ಷದ ಕೋಟಿ-ಚೆನ್ನಯ ಜೋಡುಕರೆ ಕಂಬಳ ಸ್ಪರ್ಧೆ ಫಲಿತಾಂಶ

0

ಪುತ್ತೂರು: 33ನೇ ವರ್ಷದ ಕೋಟಿ-ಚೆನ್ನಯ ಜೋಡುಕರೆ ಕಂಬಳ ಸ್ಪರ್ಧೆಯಲ್ಲಿ ಒಟ್ಟು 157 ಜೊತೆ ಕೋಣಗಳು ಭಾಗವಹಿಸಿದ್ದು, ಜ.24ರಂದು ಆರಂಭವಾಗಿ ಜ.25ರಂದು ತಡರಾತ್ರಿ ಸಂಪನ್ನಗೊಂಡಿದೆ.


ವಿಜೇತರ ವಿವರ:
ಕನಹಲಗೆಯಲ್ಲಿ 9 ಜೊತೆ ಕೋಣಗಳು ಭಾಗವಹಿಸಿದ್ದು, ಬೈಂದೂರು ಸಸಿಹಿತ್ಲು ವೆಂಕಟಪೂಜಾರಿ (ಓಡಿಸಿದವರು ಬೈಂದೂರು ಹೊಸಕೋಟೆ ಮಹೇಶ್ ಪೂಜಾರಿ) ಹಾಗೂ ಬೋಳೀರ ತ್ರಿಶಾಲ್ ಕೆ.ಪೂಜಾರಿ (ಓಡಿಸಿದವರು ತೆಕ್ಕಟೆ ಸುಽರ್ ದೇವಾಡಿಗ) ಅವರ ಕೋಣಗಳು ಆರೂವರೆ ಕೋಲು ನಿಶಾನೆಗೆ ನೀರು ಚಿಮ್ಮಿಸಿವೆ.


ಹಗ್ಗ ಹಿರಿಯ:
ಹಗ್ಗ ಹಿರಿಯದಲ್ಲಿ 18 ಜೊತೆ ಕೋಣಗಳು ಭಾಗವಹಿಸಿದ್ದು, ಚೆನ್ನಯ ಕರೆಯಲ್ಲಿ ಅತ್ತೂರು ಮನ್ಮಥ ಜೆ.ಶೆಟ್ಟಿ ಬಿ. (ಓಡಿಸಿದ ಬಾರಾಡಿ ನತೇಶ್ ಸಪಲಿಗ) ರವರ ಕೋಣಗಳು(ಪ್ರ), ಕೋಟಿ ಕರೆಯಲ್ಲಿ ಕೊಳಕ್ಕೆ ಇರ್ವತ್ತೂರು ಭಾಸ್ಕರ ಸುಬ್ಬಯ್ಯ ಕೋಟ್ಯಾನ್‌ರವರು (ಓಡಿಸಿದವರು ಕಕ್ಕೆ ಪದವು ಪೆಂರ್ಗಾಲು ಕೃತಿಕ್ ಗೌಡ)ರವರಕೋಣಗಳು ದ್ವಿತೀಯ ಪ್ರಶಸ್ತಿ ಪಡೆದಿರುತ್ತದೆ.


ಹಗ್ಗ ಕಿರಿಯ:
ಹಗ್ಗ ಕಿರಿಯ ವಿಭಾಗದಲ್ಲಿ 25 ಜೊತೆ ಕೋಣಗಳು ಭಾಗವಹಿಸಿದ್ದು ಅದರಲ್ಲಿ ಕೋಟಿ ಕರೆಯಲ್ಲಿ ಕಡಂದಲೆ ಮೂಡಾಯಿಬೆಟ್ಟು ವಿಶ್ವನಾಥ ನಿವಾಸ ಕಾಳು ಪಾಣರ (ಓಡಿಸಿದವರು ಕಡಂದಲೆ ರೋಹಿತ್ ಪಾಣಾರ)ರವರ ಕೋಣಗಳು(ಪ್ರ), ಚೆನ್ನಯ ಕರೆಯಲ್ಲಿ ಎಂಬತ್ತು ಬಡಗಬೆಟ್ಟು ಕಲ್ಲಪಾಪು ಶ್ರೀಕ ಸಂದೀಪ್ ಶೆಟ್ಟಿ (ಓಡಿಸಿದವರು ಮಂದಾರ್ತಿ ಶೀರೂರು ಮುದ್ದುಮನೆ ಭರತ್ ನಾಯ್ಕ )ರವರ ಕೋಣಗಳು ದ್ವಿತೀಯ ಪಡೆದುಕೊಂಡಿದೆ.


ಅಡ್ಡಹಲಗೆ:
ಅಡ್ಡ ಹಲಗೆಯಲ್ಲಿ 6 ಜೊತೆ ಕೋಣಗಳು ಭಾಗವಹಿಸಿದ್ದು, ಅದರಲ್ಲಿ ಚೆನ್ನಯ ಕರೆಯಲ್ಲಿ ನಾರಾವಿ ರಕ್ಷಿತ್ ಜೈನ್ (ಓಡಿಸಿದವರು ಭಟ್ಕಳ ಹರೀಶ್)ರವರ ಕೋಣಗಳು (ಪ್ರ), ಕೋಟಿ ಕರೆಯಲ್ಲಿ ಉಡುಪಿ ಕೊರಂಗ್ರಪ್ಪಾಡಿ ಪಡುಮನೆ ವೀರ್‌ಕರ್ಣ ಪ್ರಭಾಕರ ಹೆಗ್ಡೆ (ಓಡಿಸಿದವರು ಬೈಂದೂರು ಹೊಸಕೋಟೆ ಮಹೇಶ್ ಪೂಜಾರಿ)ರವರ ಕೋಣಗಳು (ದ್ವಿ) ಪ್ರಶಸ್ತಿ ಪಡೆದುಕೊಂಡಿವೆ.


ನೇಗಿಲು ಹಿರಿಯ:
ನೇಗಿಲು ಹಿರಿಯದಲ್ಲಿ 24 ಜೊತೆ ಕೋಣಗಳು ಭಾಗವಹಿಸಿದ್ದು, ಚೆನ್ನಯ ಕರೆಯಲ್ಲಿ ಮಾಣಿ ನಾಗರಾಜ ಶೆಟ್ಟಿ ಬಿ. (ಓಡಿಸಿದವರು ಕುಂದಾಬಾರಂದಡಿ ಮಾಸ್ತಿಕಟ್ಟೆ ಸ್ವರೂಪ್) ರವರ ಕೋಣಗಳು(ಪ್ರ), ಕೋಟಿ ಕರೆಯಲ್ಲಿ ಮಾಣಿ ನಾಗರಾಜ್ ಶೆಟ್ಟಿ ಎ. (ಓಡಿಸಿದವರು ಸೂರಾಲು ಪ್ರದೀಪ್ ನಾಯ್ಕ್)ರವರ ಕೋಣಗಳು(ದ್ವಿ) ಪ್ರಶಸ್ತಿ ಪಡೆದುಕೊಂಡಿವೆ.‌


ನೇಗಿಲು ಕಿರಿಯ:
ನೇಗಿಲು ಕಿರಿಯದಲ್ಲಿ 75 ಜೊತೆ ಕೋಣಗಳು ಭಾಗವಹಿಸಿದ್ದು, ಚೆನ್ನಯ ಕರೆಯಲ್ಲಿ ಶ್ರೀ ಪಂಚಲಿಂಗೇಶ್ವರ ಉರುವಾಲು ನಾಕಳಗುತ್ತು ಸದಾನಂದ ಗೌಡ (ಓಡಿಸಿದ ವರು ಪಡು ಸಾಂತೂರು ಪ್ರಥ್ವಿ ರಾಜ್ ಪೂಜಾರಿ)ರವರ ಕೋಣಗಳು(ಪ್ರ), ಕೋಟಿ ಕರೆಯಲ್ಲಿ ಮುನಿಯಾಲು ಉದಯ ಕುಮಾರ್ ಶೆಟ್ಟಿ (ಓಡಿಸಿದವರು ಕುಂದಿ ಬಾರಂದಡಿ ಮಾಸ್ತಿಕಟ್ಟೆ ಸ್ವರೂಪ್)ರವರ ಕೋಣಗಳು (ದ್ವಿ) ಪ್ರಶಸ್ತಿ ಪಡೆದುಕೊಂಡಿವೆ.

LEAVE A REPLY

Please enter your comment!
Please enter your name here