







ಪುತ್ತೂರು: ಶ್ರೀ ಸರಸ್ವತಿ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘದ ಆಡಳಿತ ಮಂಡಳಿಗೆ ನಡೆದ ಚೊಚ್ಚಲ ಚುನಾವಣೆಯಲ್ಲಿ ಹಾಲಿ ಅಧ್ಯಕ್ಷ ಎಸ್.ಆರ್. ಸತೀಶ್ಚಂದ್ರರವರ ನೇತೃತ್ವದ ತಂಡ ಎಲ್ಲಾ 12 ಸ್ಥಾನಗಳನ್ನು ಭಾರಿ ಅಂತರಗಳ ಮತಗಳಿಂದ ಗೆದ್ದುಕೊಂಡಿದೆ. ಸುನಿಲ್ ಬೋರ್ಕರ್ ಮುಂಡಕೊಚ್ಚಿ ನೇತೃತ್ವದ ತಂಡವು ಹೀನಾಯವಾಗಿ ಸೋಲು ಅನುಭವಿಸಿದೆ.
2001 ರಿಂದ ಈವರೆಗೆ ಸತೀಶ್ಚಂದ್ರ ಎಸ್‌ಆರ್ ಅವರೇ ಸಂಘದ ಅಧ್ಯಕ್ಷರಾಗಿದ್ದು, 12 ನಿರ್ದೇಶಕ ಸ್ಥಾನಗಳಿಗೂ ಅವಿರೋಧ ಆಯ್ಕೆ ನಡೆಯುತ್ತಿತ್ತು. ಬೆಳ್ಳಿ ಹಬ್ಬದ ಸಂಭ್ರಮದಲ್ಲಿರುವ ಸಂಘದ ಆಡಳಿತ ಮಂಡಳಿಗೆ ಇದೇ ಮೊದಲ ಬಾರಿಗೆ ಚುನಾವಣೆ ನಡೆದಿದೆ.


ಹಿಂದುಳಿದ (2ಎ) ವರ್ಗದ ಸ್ಥಾನಕ್ಕೆ ಒಂದೇ ನಾಮಪತ್ರ ಸಲ್ಲಿಕೆಯಾದ ಹಿನ್ನೆಲೆ ಎಸ್.ಆರ್. ಸತೀಶ್ಚಂದ್ರ ತಂಡದ ಅಭ್ಯರ್ಥಿ ಉಮೇಶ್ ಪ್ರಭು ಕುಂಟಿಹಿತ್ಲು ಅವಿರೋಧವಾಗಿ ಆಯ್ಕೆಯಾಗಿದ್ದರು. ಇನ್ನುಳಿದಂತೆ, 11 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಎಸ್.ಆರ್. ಸತೀಶ್ಚಂದ್ರರವರ ನೇತೃತ್ವದ ತಂಡವು ಕ್ಲೀನ್ ಸ್ವೀಪ್ ಮಾಡಿಕೊಂಡಿದ್ದು, ಆಡಳಿತ ಮಂಡಳಿಯ ಚುಕ್ಕಾಣಿ ಹಿಡಿಯಲು ಸಜ್ಜಾಗುತ್ತಿದೆ.
ಬೆಳಗ್ಗೆ 9 ಗಂಟೆಗೆ ಪ್ರಾರಂಭವಾದ ಮತಚಲಾವಣೆ ಪ್ರಕ್ರಿಯೆ ಸಂಜೆ 4 ಗಂಟೆಗೆ ಮುಕ್ತಾಯಗೊಂಡಿತು. 4.15ಕ್ಕೆ ಮತ ಎಣಿಕೆ ಪ್ರಾರಂಭವಾಗಿ 6 ಗಂಟೆಗೆ ಚುನಾವಣಾಧಿಕಾರಿ ತ್ರಿವೇಣಿ ಅವರು ಫಲಿತಾಂಶ ಘೋಷಿಸಿದರು. ಒಟ್ಟು 1039 ಮತಗಳು ಚಲಾವಣೆಯಾಗಿವೆ.



ಎಸ್.ಆರ್. ಸತೀಶ್ಚಂದ್ರರವರ ತಂಡ ಪಡೆದ ಮತ:
12 ಸ್ಥಾನಗಳಲ್ಲೂ ಎಸ್.ಆರ್. ಸತೀಶ್ಚಂದ್ರ ನೇತೃತ್ವದ ತಂಡ ಅಭ್ಯರ್ಥಿಳು ಗೆಲುವು ಸಾಧಿಸಿದ್ದಾರೆ. ವಿಜೇತ ಅಭ್ಯರ್ಥಿಗಳು ಪಡೆದ ಮತಗಳ ವಿವರ ಇಲ್ಲಿದೆ.
ಸತೀಶ್ಚಂದ್ರ ಎಸ್.ಆರ್ 807, ಹರೀಶ್ ಬೋರ್ಕರ್ ಕತ್ತಲಕಾನ 720, ರಾಜಗೋಪಾಲ್ ಬಾಳೆಗುಳಿ 742, ರವೀಶ ಪೊಸವಳಿಕೆ 785, ವಿ.ವಸಂತಶಂಕರ್ 820, ವೇದವ್ಯಾಸ್ ಕಟ್ಟೆ 773, ಸಂಜೀವ ನಾಯಕ್ ಸುಳ್ಯ 750, ಚಂದ್ರಶೇಖರ್ ಭಟ್ ಮುಂಡುಗಾರು 831, ದಯಾನಂದ ನಾಯಕ್ ಕುಂಟಿಕಾನ 773, ದೇವಕಿ ಎಚ್. ನಾಯಕ್ ವಾಗ್ಲೆ ಸಂಟ್ಯಾರು 769, ರಂಜಿತಾ ಆರ್.ಪ್ರಭು ಗೋಳಿತ್ತಡಿ 796 ಮತಗಳನ್ನು ಪಡೆದಿದ್ದಾರೆ.
ಸುನಿಲ್ ಬೋರ್ಕರ್ ತಂಡ ಪಡೆದ ಮತ:
ಸುನಿಲ್ ಬೋರ್ಕರ್ ಮುಂಡಕೊಚ್ಚಿ ನೇತೃತ್ವದಲ್ಲಿ ಸ್ಪರ್ಧಿಸಿದ್ದ 7 ಅಭ್ಯರ್ಥಿಗಳೂ ಪರಾಭವ ಹೊಂದಿದ್ದಾರೆ. ಅವರು ಪಡೆದ ಮತಗಳ ವಿವರ ಇಲ್ಲಿದೆ. ಸುನಿಲ್ ಬೋರ್ಕರ್ ಮುಂಡಕೊಚ್ಚಿ 270, ಸುಬ್ರಹ್ಮಣ್ಯ ಕೆ. 188, ಎಸ್.ರಾಧಾಕೃಷ್ಣ ನಾಯಕ್ ದಾಸನಕಜೆ 242, ಜಯರಾಮ್ ಪಿ. 264, ಪ್ರಕಾಶ್ ಪಂಜಿಗಾರು 237, ಶ್ರೀಧರ್ ಪಿ. 201, ಅರುಣ ಎಸ್ 324 ಮತಗಳನ್ನು ಪಡೆದಿದ್ದಾರೆ.










