






ಪಾಣಾಜೆ: ಆರ್ಲಪದವು ಶ್ರೀ ಪೂಮಾಣಿ, ಕಿನ್ನಿಮಾಣಿ, ಪಿಲಿಭೂತ ದೈವಗಳ ಜಾತ್ರೋತ್ಸವದ ಅಂಗವಾಗಿ ಪುಳಿತ್ತಡಿ ಬಳಗದ 4 ನೇ ವರ್ಷದ ಕಾರ್ಯಕ್ರಮವು ಜ. 26 ರಂದು ಸಂಜೆ ರಣಮಂಗಲ ಸಭಾಭವನದಲ್ಲಿ ಜರಗಿತು.


ಕಾರ್ಯಕ್ರಮವನ್ನು ಕ್ಷೇತ್ರದ ಅನುವಂಶಿಕ ಆಡಳಿತ ಮೊಕ್ತೇಸರ ಶ್ರೀಕೃಷ್ಣ ಬೋಳಿಲ್ಲಾಯ ರವರು ದೀಪ ಬೆಳಗಿಸಿ ಉದ್ಘಾಟಿಸಿದರು. ಇದೇ ವೇಳೆ ಬಳಗದಿಂದ ಕ್ಷೇತ್ರದ ಶ್ರೀ ಪಿಲಿಭೂತ ದೈವ ನರ್ತಕರಾದ ನೇಮು ಪರವ, ರಂಗಭೂಮಿ ಕಲಾವಿದ ಸದಾಶಿವ ಅಮೀನ್ ರವರನ್ನು ಸನ್ಮಾನಿಸಿ ಗೌರವಿಸಲಾಯಿತು. ಚಾಪರ್ಕ ಕಲಾವಿದೆರ್ ಕುಡ್ಲ ತಂಡದ ಮುಖ್ಯಸ್ಥ, ರಾಜ್ಯಪ್ರಶಸ್ತಿ ಪುರಸ್ಕೃತ ತೆಲಿಕೆದ ಬೊಳ್ಳಿ ದೇವದಾಸ್ ಕಾಪಿಕಾಡ್ ರವರನ್ನು ಇದೇ ವೇಳೆ ಗೌರವಿಸಲಾಯಿತು. ಬಳಿಕ ಚಾಪರ್ಕ ಕಲಾವಿದೆರ್ ತಂಡದಿಂದ ʻಎನ್ನನೇ ಕಥೆʼ ತುಳು ಹಾಸ್ಯಮಯ ನಾಟಕ ಪ್ರದರ್ಶನಗೊಂಡಿತು.













