ಸಮಾಜ ಸಂಘಟನೆ ಹಾಗೂ ಅಭಿವೃದ್ಧಿಯಲ್ಲಿ ಯುವಜನತೆಯ ಹೊಣೆ ವಿಚಾರಗೋಷ್ಠಿ

0

ಪುತ್ತೂರು: ಸ್ಥಾನಿಕ ಬ್ರಾಹ್ಮಣ ಮಹಾಮಂಡಲ ಮಂಗಳೂರು ಅಂತಾರಾಷ್ಟ್ರೀಯ ಮಟ್ಟದ ಸ್ಥಾನಿಕ ಸಂಘಗಳು ಮತ್ತು ಸಂಪನ್ಮೂಲ ವ್ಯಕ್ತಿಗಳ ಒಕ್ಕೂಟದ ಆಯೋಜನೆಯಲ್ಲಿ ಪುತ್ತೂರು ಶಿವಬ್ರಾಹ್ಮಣ ಸಮಾಜ ಸೇವಾ ಸಂಘದ ಆತಿಥ್ಯದಲ್ಲಿ ಎರಡು ದಿನಗಳ ಕಾಲ ಕಲ್ಲಾರೆ ಶಿವಕೃಪಾ ಸಭಾಭವನದಲ್ಲಿ ಸ್ಥಾನಿಕ ಬ್ರಾಹ್ಮಣ ಜಾಗತಿಕ ಸಮಾವೇಶ ನಡೆಯಿತು.

ಮೊದಲನೇ ದಿನದ ಸಮಾವೇಶದಲ್ಲಿ ಸಮಾಜ ಸಂಘಟನೆ ಹಾಗೂ ಅಭಿವೃದ್ಧಿಯಲ್ಲಿ ಯುವಜನತೆಯ ಹೊಣೆ ಎನ್ನುವ ವಿಷಯದಲ್ಲಿ ವಿಚಾರಗೋಷ್ಠಿ ಡಾ.ಶಾಂತಾ ಪುತ್ತೂರು ಅಧ್ಯಕ್ಷತೆಯಲ್ಲಿ ನಡೆಯಿತು. ಗೋಷ್ಠಿ ಪತಿ ಡಾ.ಶಾಂತಾ ಪುತ್ತೂರು ವಿಚಾರಗೋಷ್ಠಿಯಲ್ಲಿ ಮಾತನಾಡುತ್ತಾ ಶಿವಬ್ರಾಹ್ಮಣ ಯುವಸಂಘಟನೆಗಳು ಸಮುದಾಯದ ಶೈಕ್ಷಣಿಕ ಹಾಗೂ ನೈತಿಕ ಏಳಿಗೆ ಕಡೆಗೆ ಗಮನ ಹರಿಸಬೇಕಾಗಿದೆ. ಧಾರ್ಮಿಕ ಸಾಮಾಜಿಕ ಕಾರ್ಯಗಳಿಗೆ ಹೆಚ್ಚು ಸಮಯ ನೀಡಬೇಕಾಗಿದೆ ಎಂದು ಹೇಳಿದರು. ಸಂಪನ್ಮೂಲ ವ್ಯಕ್ತಿ ರಂಜನ್ ಬೆಳ್ಳಿಪ್ಪಾಡಿ ಶಿವ ಬ್ರಾಹ್ಮಣ ಸದಸ್ಯತ್ವದ ಕಡೆಗೆ ಕರೆಕೊಟ್ಟರು. ಮತ್ತೋರ್ವ ಸಂಪನ್ಮೂಲ ವ್ಯಕ್ತಿ ಡಾ.ಗೀತಾಕುಮಾರಿ ಪುತ್ತೂರು ಸಂಘಟನೆಯಲ್ಲಿ ಸ್ತ್ರೀಯರ ಪಾತ್ರ ಮತ್ತು ಕುಟುಂಬ ಸಾಮರಸ್ಯದ ಕುರಿತು ವಿಷಯ ಮಂಡಿಸಿದರು. ಸಂಪನ್ಮೂಲ ವ್ಯಕ್ತಿ ಕಮಾಂಡರ್ ಅಶ್ವಿನ್ ಎಂ.ರಾವ್ ರವರು ಸೇನೆಯ ಮೌಲ್ಯಗಳನ್ನು ಸಮಾಜ ಸಂಘಟನೆಯಲ್ಲಿ ಹೇಗೆ ಅಳವಡಿಸಿಕೊಳ್ಳಬಹುದು ಎಂಬುದರ ಬಗ್ಗೆ ವಿಚಾರ ಮಂಡಿಸಿದರು.

ಎನ್.ಕೆ.ಜಗನ್ನಿವಾಸ ರಾವ್ ಸಮ್ಮೇಳನಾಧ್ಯಕ್ಷತೆಯಲ್ಲಿ ಸಮ್ಮೇಳನ ನಡೆಯಿತು. ಸ್ಥಾನಿಕ ಬ್ರಾಹ್ಮಣ ಮಹಾಮಂಡಲ (ರಿ)ಮಂಗಳೂರು ಇದರ ಅಧ್ಯಕ್ಷರಾದ ಕೆ. ಮಂಜುನಾಥ ಹೆಬ್ಬಾರ್ ಗೋಷ್ಠಿಯ ಸಂಪನ್ಮೂಲ ವ್ಯಕ್ತಿ ಗಳಿಗೆ ಸ್ಮರಣಿಕೆ ನೀಡಿ ಗೌರವಿಸಿದರು.

LEAVE A REPLY

Please enter your comment!
Please enter your name here