ಮಾಯಿಲಕೋಟೆ ಸೀಮೆ ದೈವಸ್ಥಾನದಲ್ಲಿ ತಂಬಿಲ ಸೇವೆ, ನೇಮೋತ್ಸವ

0

ನೆಲ್ಯಾಡಿ: ಇಲ್ಲಿಗೆ ಸಮೀಪದ ಕೊಕ್ಕಡ ಮಾಯಿಲಕೋಟೆ ಸೀಮೆ ದೈವಸ್ಥಾನದಲ್ಲಿ ಜ.30ರಂದು ವಾರ್ಷಿಕ ನೇಮೋತ್ಸವ ಸಲುವಾಗಿ ಬೆಳಗ್ಗೆ ತಂಬಿಲ ಸೇವೆ ನಡೆಯಿತು.
ಕ್ಷೇತ್ರದ ತಂತ್ರಿಗಳಾದ ಬ್ರಹ್ಮಶ್ರೀ ಕೆ.ಯು.ಪದ್ಮನಾಭ ತಂತ್ರಿಗಳು ಎಡಮನೆ ನೀಲೇಶ್ವರ ಇವರ ಮಾರ್ಗದರ್ಶನದಲ್ಲಿ ಬೆಳಗ್ಗೆ ಸಾಮೂಹಿಕ ಪ್ರಾರ್ಥನೆ, ಗಣಹೋಮ, ಕಲಶಪೂಜೆ, ನಾಗತಂಬಿಲ, ದೈವಗಳಿಗೆ ತಂಬಿಲ ಸೇವೆ ನಡೆಯಿತು. ಭಕ್ತರಿಂದ ಹಸಿರುವಾಣಿ ಸಮರ್ಪಣೆ ನಡೆಯಿತು. ಮಧ್ಯಾಹ್ನ ಅನ್ನಸಂತರ್ಪಣೆ ನಡೆಯಿತು.


ತಾಳಮದ್ದಳೆ;
ಹಿರಣ್ಮಯಿ ಮಹಿಳಾ ಯಕ್ಷಗಾನ ಕಲಾಸಂಘ ನೆಲ್ಯಾಡಿ ಇವರಿಂದ ಲಕ್ಷ್ಮೀನಾರಾಯಣ ಶೆಟ್ಟಿ ಕುಂಡಡ್ಕ ಇವರ ಸಾರಥ್ಯದಲ್ಲಿ ’ ತುಳುನಾಡ ಅಮರ್ ಬೊಳ್ಳಿಲು’ ಯಕ್ಷಗಾನ ತಾಳಮದ್ದಳೆ ನಡೆಯಿತು. ಕಲಾವಿದರಾಗಿ ಸುಚಿತ್ರ ಬಂಟ್ರಿಯಾಲ್, ಚಿನ್ಮಯಿ ಶೆಟ್ಟಿ, ಸಂಧ್ಯಾ ಸುರೇಶ್, ಸುಲತಾ, ನವ್ಯಪ್ರಸಾದ್, ಭೂಮಿ ಶೆಟ್ಟಿ ಪೃಥ್ವಿ ಸಹಕರಿಸಿದರು. ಸಂಜೆ ಶ್ರೀ ಕಲ್ಲುರ್ಟಿ, ಶ್ರೀ ವರ್ಣಾರ ಪಂಜುರ್ಲಿ, ಶ್ರೀ ಕೋಟೆ ಚಾಮುಂಡಿ ಮತ್ತು ಶ್ರೀ ಗುಳಿಗ ದೈವಗಳ ನೇಮೋತ್ಸವ, ರಾತ್ರಿ ಮಹಾ ಅನ್ನಸಂತರ್ಪಣೆ ನಡೆಯಿತು. ಕೊಕ್ಕಡ ಶ್ರೀ ವೈದ್ಯನಾಥೇಶ್ವರ ದೇವಸ್ಥಾನದ ಪವಿತ್ರಪಾಣಿ ರಾಧಾಕೃಷ್ಣ ಯಡಪಡಿತ್ತಾಯ, ಗೌರವ ಸಲಹೆಗಾರ ಕುಶಾಲಪ್ಪ ಗೌಡ ಪೂವಾಜೆ, ಅಧ್ಯಕ್ಷ ರಾಮಕೃಷ್ಣ ದೇವಾಡಿಗ, ಕಾರ್ಯದರ್ಶಿ ಜಯಪ್ರಕಾಶ್ ಹಾರ, ಸದಸ್ಯರಾದ ಶಶಿ ಪುತ್ಯೆಮಜಲು, ಸುರೇಶ ಪಡಿಪಂಡ, ಜಯರಾಮ ನ್ಯೂ ಆರಿಗ, ಜಯಾನಂದ ಬಂಟ್ರಿಯಾಲ್, ದಾಮೋದರ ನ್ಯೂ ಆರಿಗ, ಜಯಂತಿ ಹಾರ, ಕುಸುಮ ಪೊಯ್ಯೊಳೆ, ಗಣೇಶ ಹಾರ, ಮೋನಪ್ಪ ಗೌಡ ಕೆಂಪಮುದೇಲು, ನಾಗೇಶ್ ಹಾರ, ದಾಮೋದರ ಮುಡ್ಯಲಗುಂಡಿ, ಗಣೇಶ್ ಕಲಾಯಿ, ಮುತ್ತಪ್ಪ ಡೆಂಜ, ವಾಸುದೇವ ಮಂಡೆಕರ, ಬಾಬು ಪುತ್ಯೆಮಜಲು, ಶೇಖರ ಪೂಜಾರಿ, ಗೌರವ್ ಹೊಸಮಜಲು, ದೈವದ ಪರಿಚಾರಕರಾದ ನೇಮಣ್ಣ ಗೌಡ, ದಾಮೋದರ ಪೂಜಾರಿ, ಹೊನ್ನಪ್ಪ ಗೌಡ, ಸುಂದರ ಗೌಡ, ಶೀನಪ್ಪ ಗೌಡ, ಆನಂದ ಗೌಡ, ವೆಂಕಟರಮಣ, ಮಾಯಿಲ ವಿಭಾಗದವರು, ಗುರುವ ಹಾರ ಮುಂಡ ಪೊಯ್ಯಳೆ ಹಾಗೂ ಸಿಮೆಯ ಭಕ್ತಾದಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here