







ಹನುಮಗಿರಿ ಮೇಳದವರಿಂದ ‘ವರ್ಣ ಪಲ್ಲಟ’ ಯಕ್ಷಗಾನ ಪ್ರದರ್ಶನ


ಪುತ್ತೂರು: ಮೂರು ದಿನಗಳ ಕಾಲ ಪರ್ಲಡ್ಕದಲ್ಲಿರುವ ಎಸ್.ಡಿ.ಪಿ. ರೆಮಿಡೀಸ್ ರಿಸರ್ಚ್ ಸೆಂಟರ್‌ನ ಆವರಣದಲ್ಲಿ ಸಂಭ್ರಮಿಸಿದ 22ನೇ ವರ್ಷದ ‘ಎಸ್.ಡಿ.ಪಿ.ಕಲೋಪಾಸನಾ ಸಾಂಸ್ಕೃತಿಕ ಕಲಾ ಸಂಭ್ರಮ’ವು ಫೆ.2ರಂದು ತೆರೆಕಂಡಿತು. ಮೂರನೇ ದಿನ ಹನುಮಗಿರಿ ಕೋದಂಡರಾಮ ಕೃಪಾ ಪೋಷಿತ ಯಕ್ಷಗಾನ ಮಂಡಳಿಯವರಿಂದ ‘ವರ್ಣ ಪಲ್ಲಟ’ ಎಂಬ ಯಕ್ಷಗಾನ ಪ್ರದರ್ಶನ ನಡೆಯಿತು.




ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದ ವಿವೇಕಾನಂದ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಪ್ರೋ.ವಿ.ಜಿ ಭಟ್ ಮಾತನಾಡಿ, ಮನಸ್ಸಿನ ನೋವು ಕಳೆಯಲು ಸಾಂಸ್ಕೃತಿಕವಾಗಿ ತೊಡಗಿಸಿಕೊಳ್ಳಬೇಕು. ಕಲೆಯಿಂದ ಮನಸ್ಸಿನ ನೆಮ್ಮದಿ ದೊರೆಯಲಿದೆ. ಯುವ ಜನತೆ ಸಾಂಸ್ಕೃತಿಕವಾಗಿ ಹೆಚ್ಚು ತೊಡಗಿಸಿಕೊಳ್ಳಬೇಕು. ಎಸ್.ಡಿ.ಪಿ. ರೆಮಿಡೀಸ್ ಕಲೋಪಾಸನಾ ಕಾರ್ಯಕ್ರಮ ಪುತ್ತೂರಿನ ಸಾಂಸ್ಕೃತಿಕ ಹಬ್ಬವಾಗಿ ನಡೆಯುತ್ತಿದೆ ಎಂದು ಹೇಳಿದರು.

ಹನುಮಗಿರಿ ಮೇಳದಿಂದ ವರ್ಣ ಪಲ್ಲಟ ಯಕ್ಷಗಾನ ನಡೆಯಿತು. ಎಸ್‌ಡಿಪಿ. ರೆಮಿಡೀಸ್ ಮತ್ತು ರಿಸರ್ಚ್ ಸೆಂಟರ್ ನಿರ್ದೇಶಕ ಡಾ. ಹರಿಕೃಷ್ಣ ಪಾಣಾಜೆ, ರೂಪಲೇಖ, ಮೇಘನಾ ಪಾಣಾಜೆ, ಸುಜಾತ ಪಿ.ಕೆ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಉಪನ್ಯಾಸಕ ಡಾ.ಶ್ರೀಶ ಕುಮಾರ್ ಕಾರ್ಯಕ್ರಮ ನಿರೂಪಿಸಿದರು. ಸಭಾ ಕಾರ್ಯಕ್ರಮದ ಬಳಿಕ ಯಕ್ಷಗಾನ ಪ್ರದರ್ಶನಗೊಂಡಿತು.










