ಕೊಲೆಯತ್ನ ಪ್ರಕರಣದ ಆರೋಪಿಗೆ ಶಿಕ್ಷೆ

0

ಮಂಗಳೂರು: ಬಂಟ್ವಾಳ ತಾಲೂಕಿನ ಪುಣಚ ಗ್ರಾಮದ ಕುರುಡುಕಟ್ಟೆ ಎಂಬಲ್ಲಿ ತನ್ನ ಪುತ್ರನ ಜಾಗದಲ್ಲಿ ಸೊಪ್ಪು ಕತ್ತರಿಸುತ್ತಿದ್ದ ವೆಂಕಪ್ಪ ನಾಯ್ಕ ಎಂಬವರಿಗೆ ಜಾತಿ ನಿಂದನೆ ಮಾಡಿ ಹಲ್ಲೆಗೈದ ಆರೋಪಿಗೆ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ(ವಿಶೇಷ) ನ್ಯಾಯಾಲಯವು 20,5೦೦ ರೂ. ದಂಡ ವಿಧಿಸಿ ಆದೇಶ ನೀಡಿದೆ. ನಾರಾಯಣ ಗೌಡ ಶಿಕ್ಷೆಗೊಳಗಾದ ಆರೋಪಿ.


2019ರ ಮೇ 6ರಂದು ವೆಂಕಪ್ಪ ನಾಯ್ಕ ತನ್ನ ಪುತ್ರ ದೇವಪ್ಪ ನಾಯ್ಕರ ಜಾಗದಲ್ಲಿ ಸೊಪ್ಪು ಕತ್ತರಿಸುತ್ತಿದ್ದಾಗ ನಾರಾಯಣ ಗೌಡ, ಅವಾಚ್ಯ ಶಬ್ದಗಳಿಂದ ಬೈದು ಜಾತಿ ನಿಂದನೆ ಮಾಡಿ ಕಬ್ಬಿಣದ ರಾಡ್ ನಿಂದ ಹಲ್ಲೆಗೈದು ಕೊಲೆಗೆ ಯತ್ನಿಸಿದ್ದ ಎಂದು ಆರೋಪಿಸಲಾಗಿತ್ತು. ಈ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಅಂದಿನ ಸಹಾಯಕ ಪೊಲೀಸ್ ಅಧಿಕ್ಷಕ ಸೈದುಲ್ ಅಡಾವತ್ ದೋಷಾರೋಪಣೆ ಪತ್ರ ಸಲ್ಲಿಸಿದ್ದರು.


ನ್ಯಾಯಾಧಿಶರಾದ ಜಗದೀಶ ವಿ.ಎನ್. ಪ್ರಕರಣದ ವಿಚಾರಣೆ ನಡೆಸಿ ಆರೋಪಿ ನಾರಾಯಣ ಗೌಡನಿಗೆ ಶಿಕ್ಷೆ ವಿಧಿಸಿದ್ದಾರೆ. ದಂಡದ ಪೈಕಿ 20 ಸಾವಿರ ರೂ. ಸಂತ್ರಸ್ತ ವೆಂಕಪ್ಪ ನಾಯ್ಕರಿಗೆ ನೀಡಬೇಕು. 500 ರೂ. ವನ್ನು ಸರಕಾರಕ್ಕೆ ಪಾವತಿಸಬೇಕು ಎಂದು ತೀರ್ಪಿನಲ್ಲಿ ತಿಳಿಸಿದ್ದಾರೆ. ಸರಕಾರದ ಪರವಾಗಿ ಜ್ಯೋತಿ ಪ್ರಮೋದ ನಾಯಕ ವಾದಿಸಿದ್ದಾರೆ.

LEAVE A REPLY

Please enter your comment!
Please enter your name here