ಪಿ ಜಿ ಜಗನ್ನಿವಾಸ ರಾವ್ ಅವರಿಂದ ಎಸ್ಪಿಗೆ ದೂರು : ಪ್ರತಿಭಾ ಕುಳಾಯಿ ಅವರು ಠಾಣೆಗೆ ಹಾಜರಾಗುವಂತೆ ನೋಟಿಸ್ !

0

ಪುತ್ತೂರು: ಪ್ರಕರಣ ನ್ಯಾಯಾಲಯದ ವಿಚಾರಣೆಯಲ್ಲಿರುವಾಗ ನಮ್ಮ ಮೇಲೆ ಮಾನಹಾನಿ ಮತ್ತು ಬೆದರಿಕೆ ಹಾಕಿದ್ದಾರೆಂದು ಪಿ ಜಿ ಜಗನ್ನಿವಾಸ ರಾವ್ ಅವರು ಪ್ರತಿಭಾ ಕುಳಾಯಿ ಅವರ ವಿರುದ್ದ ನೀಡಿದ ದೂರಿಗೆ ಸಂಬಂಧಿಸಿ ಪುತ್ತೂರು ನಗರ ಪೊಲೀಸ್ ಠಾಣೆಯಿಂದ ಪ್ರತಿಭಾ ಕುಳಾಯಿ ಅವರಿಗೆ ವಿಚಾರಣೆಗೆ ಹಾಜರಾಗುವಂತೆ ನೊಟೀಸ್ ಜಾರಿ ಮಾಡಿದ್ದಾರೆ.


ಆರೋಪಿ ಶ್ರೀಕೃಷ್ಣ ರಾವ್ ಎಂಬವರ ತಂದೆ ಪಿ.ಜಿ. ಜಗನ್ನಿವಾಸ ರಾವ್ ದ.ಕ. ಜಿಲ್ಲಾ ಪೊಲೀಸ್ ಅಧೀಕ್ಷಕರಿಗೆ ನೀಡಿದ ದೂರಿನ ಮೇರೆಗೆ ಅರ್ಜಿಯನ್ನು ಅಧೀಕ್ಷರು ವಿಚಾರಣೆಗಾಗಿ ಪುತ್ತೂರು ನಗರ ಪೊಲೀಸ್‌ ಠಾಣೆಗೆ ಕಳುಹಿಸಿದ್ದಾರೆ. ಹೀಗಾಗಿ, ವಿಚಾರಣೆಗಾಗಿ ಪುತ್ತೂರು ನಗರ ಪೊಲೀಸ್‌ ಠಾಣೆಗೆ ಹಾಜರಾಗಿ ತನಿಖೆಗೆ ಸಹಕರಿಸುವಂತೆ ನೋಟಿಸ್ ನಲ್ಲಿ ತಿಳಿಸಲಾಗಿದೆ ಎಂದು ತಿಳಿದು ಬಂದಿದೆ. ಇದರ ಜೊತೆಗೆ ಪಿ ಜಿ ಜಗನ್ನಿವಾಸ ರಾವ್ ಅವರಿಗೂ ವಿಚಾರಣೆಯಲ್ಲಿ ಸಹಕರಿಸುವಂತೆ ನೋಟಿಸ್ ನೀಡಲಾಗಿದೆ ಎಂದು ತಿಳಿದು ಬಂದಿದೆ‌.

LEAVE A REPLY

Please enter your comment!
Please enter your name here