ಶ್ರೀ ಸರಸ್ವತಿ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷರಾಗಿ ಎಸ್‌ ಆರ್‌ ಸತೀಶ್ಚಂದ್ರ ಪುನರಾಯ್ಕೆ, ಉಪಾಧ್ಯಕ್ಷರಾಗಿ ಉಮೇಶ್‌ ಪ್ರಭು

0

ಪುತ್ತೂರು : ಪುತ್ತೂರಿನಲ್ಲಿ ಪ್ರಧಾನ ಕಛೇರಿಯನ್ನು ಹೊಂದಿ ರಾಜ್ಯವ್ಯಾಪಿ ಕಾರ್ಯಾಚರಿಸುತ್ತಿರುವ ರಾಜ್ಯದ ಪ್ರತಿಷ್ಠಿತ ಸಹಕಾರಿ ಸಂಸ್ಥೆ ಸರಸ್ವತಿ ಕ್ರೆಡಿಟ್‌ ಸೌಹಾರ್ದ ಸಹಕಾರಿ ಸಂಘ ನಿಯಮಿತ ಪುತ್ತೂರು 2026-2031ರ ಸಾಲಿನ ಆಡಳಿತ ಮಂಡಳಿಯು ಅಧ್ಯಕ್ಷರಾಗಿ ಎಸ್‌ ಆರ್‌ ಸತೀಶ್ಚಂದ್ರ ಇವರು ಪುನರಾಯ್ಕೆಯಾಗಿರುತ್ತಾರೆ.

ಉಪಾಧ್ಯಕ್ಷರಾಗಿ ಸುಳ್ಯ ನೆಲ್ಲೂರು ಕೆಮ್ರಾಜೆಯ ಶ್ರೀ ಉಮೇಶ್‌ ಪ್ರಭು ಕೆ ಇವರು ಅವಿರೋಧವಾಗಿ ಆಯ್ಕೆಯಾಗಿರುತ್ತಾರೆ.  ಆಡಳಿತ ಮಂಡಳಿಯ ನಿರ್ದೇಶಕರುಗಳಾಗಿ ಸುಳ್ಯ ತಾಲೂಕು ಕಳಂಜ ಗ್ರಾಮದ ಚಂದ್ರಶೇಖರ ಭಟ್‌, ಮಂಗಳೂರು ತಾಲೂಕು ಉಲ್ಲಾಳದ ದಯಾನಂದ ನಾಯಕ್‌ ಕೆ, ಬಂಟ್ವಾಳ ತಾಲೂಕು ಪುಣಚ ಗ್ರಾಮದ ರವೀಶ ಪಿ, ಪುತ್ತೂರು ತಾಲೂಕು ಇರ್ದೆ ಗ್ರಾಮದ ರಾಜಗೋಪಾಲ ಬಿ, ಪುತ್ತೂರು ತಾಲೂಕು ನೆಹರು ನಗರದ ವಸಂತ ಶಂಕರ್‌, ಬೆಂಗಳೂರಿನ ಮಾಚೋಹಳ್ಳಿಯ ವೇದವ್ಯಾಸ ಕೆ, ಸುಳ್ಯ ತಾಲೂಕು ಸೋಣಂಗೇರಿಯ ಸಂಜೀವ ನಾಯಕ್‌, ಪುತ್ತೂರು ತಾಲೂಕು ನಿಡ್ಪಳ್ಳಿ ಗ್ರಾಮದ ಕೆ ಹರೀಶ್‌ ಬೋರ್ಕರ್‌, ಪುತ್ತೂರಿನ ಆರ್ಯಾಪು ಗ್ರಾಮದ ದೇವಕಿ ಕೆ, ಪುತ್ತೂರು ತಾಲೂಕು ಆರ್ಯಾಪು ಗ್ರಾಮದ ರಂಜಿತ ಆರ್‌ ಪ್ರಭು ಇವರು ಆಯ್ಕೆಯಾಗಿರುತ್ತಾರೆ.

ಚುನಾವಣಾ ರಿಟರ್ನಿಂಗ್ ಅಧಿಕಾರಿಯಾಗಿ ತ್ರಿವೇಣಿ ಹಾಗೂ ಸಹಾಯಕರಾಗಿ ನಾಗೇಂದ್ರ ಇವರು ಸಹಕರಿಸಿದರು. ಸಹಕಾರಿಯು ಪ್ರಸ್ತುತ ರಾಜ್ಯಾದ್ಯಂತ 20 ಶಾಖೆಗಳನ್ನು  ಹೊಂದಿದ್ದು ₹.403 ಕೋಟಿ ಠೇವಣಿ, ₹.380 ಕೋಟಿ ಸಾಲ ಹಾಗೂ 52,000ಕ್ಕೂ ಮಿಕ್ಕಿ ಸದಸ್ಯರನ್ನು ಹೊಂದಿ‌ ಸಹಕಾರಿಯು ಕರ್ನಾಟಕ ರಾಜ್ಯಾದ್ಯಂತ ಸೇವೆಗಳನ್ನು ನೀಡುತ್ತಿದೆ. ಸಹಕಾರಿಯು ಚಿನ್ನಾಭರಣ ಸಾಲ, ಗೃಹ ಸಾಲ, ನಿವೇಶನ ಆಧಾರ ಸಾಲ, ಭೂ ಅಡಮಾನ ಸಾಲ, ಸ್ಥಿರಾಸ್ತಿ ಖರೀದಿ ಸಾಲ, ವಾಹನ ಸಾಲ, ಬಿಲ್ಡರ್‌ ಸಾಲ, ಸಹಕಾರಿಯ ಸದಸ್ಯರಿಗೆ ಲಾಕರ್‌ ಸೌಲಭ್ಯ, ವಿಮಾ ಸೌಲಭ್ಯವನ್ನು ಒದಗಿಸುತ್ತಿದೆ. ಹಾಗೂ ಸಹಕಾರಿಯು ತನ್ನ ಪೂರಕ ಸಂಸ್ಥೆ ಶ್ರೀ ಸರಸ್ವತಿ ಚಾರಿಟೇಬಲ್‌ ಟ್ರಸ್ಟ್‌ ಮುಖಾಂತರ ಸಾಮಾಜಿಕ ಸೇವಾಕಾರ್ಯಗಳನ್ನು ಮಾಡುತ್ತಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

LEAVE A REPLY

Please enter your comment!
Please enter your name here