ಕೌಡಿಚ್ಚಾರಿನಲ್ಲಿ ಹಿಂದೂ ಸಂಗಮ-ಶೋಭಾಯಾತ್ರೆ

0

ಅರಿಯಡ್ಕ : ನಮ್ಮ ಜೀವನದಲ್ಲಿ ಧಾರ್ಮಿಕತೆಯನ್ನು ಬೆಳೆಸಿಕೊಳ್ಳಬೇಕು.ಇಲ್ಲದಿದ್ದರೆ ಕಾಡಿನಲ್ಲಿರುವ ಪ್ರಾಣಿಗಳಿಗೂ ನಮಗೂ ಯಾವುದೇ ವ್ಯತ್ಯಾಸ ಇರುವುದಿಲ್ಲ.ಮಾತಾಡುವ ಭಾಷೆ, ಧಾರ್ಮಿಕ ಪದ್ಧತಿ, ಜೀವನ ಶೈಲಿ, ಜಾತಿ ಧರ್ಮಗಳು ಬೇರೆ ಬೇರೆ ಆದರೂ ದೇಶದ ವಿಚಾರ ಬಂದಾಗ ನಾವೆಲ್ಲರೂ ಒಂದೇ.ಆದುದರಿಂದಲೇ‌ ಭಾರತ ಮಾತೆಗೆ ಜೈ ಎನ್ನುತ್ತೇವೆ.ವೈವಿದ್ಯತೆಯಲ್ಲಿ ಏಕತೆಯನ್ನು ಕಾಣುವ ಏಕೈಕ ದೇಶ ಭಾರತ.ಈ ಭೂಮಿಯಲ್ಲಿ ಹುಟ್ಟಿದ ನಾವುಗಳು ಧನ್ಯರು ಎಂದು ಮಂಗಳೂರು ವಿಭಾಗದ ಸಾಮರಸ್ಯ ಸಹ ಸಂಯೋಜಕ ಶಿವ ಪ್ರಸಾದ್ ಮಲೆಬೆಟ್ಟು ಹೇಳಿದರು.

ಅವರು ಫೆ 1ರಂದು ಅರಿಯಡ್ಕ ಮಂಡಲ ಕೌಡಿಚ್ಚಾರು ಶ್ರೀ ಕೃಷ್ಣ ಭಜನಾ ಮಂದಿರದ ವಾಸುದೇವ ಸಭಾಭವನದಲ್ಲಿ ಆಯೋಜಿಸಿದ್ದ ಹಿಂದೂ ಸಂಗಮ ಸಮಾವೇಶದಲ್ಲಿ ಮಾತನಾಡಿದರು.

ಕಾರ್ಯಕ್ರಮವನ್ನು ಹಿರಿಯ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸ್ವಯಂಸೇವಕ ಗುರುವಪ್ಪ ಹೊಸ ಗದ್ದೆ ದೀಪ ಬೆಳಗಿಸಿ ಉದ್ಘಾಟಿಸಿದರು.ಶ್ರೀಕ್ಷೇತ್ರ ಹನುಮಗಿರಿ ಈಶ್ವರ ಮಂಗಲ ಇದರ ಧರ್ಮದರ್ಶಿ ನನ್ಯ ಅಚ್ಚುತ ಮೂಡಿತ್ತಾಯ ಶುಭ ಹಾರೈಸಿದರು.ವೇದಿಕೆಯಲ್ಲಿ ಶ್ರೀ ಕೃಷ್ಣ ಭಜನಾ ಮಂದಿರ ಕೌಡಿಚ್ಚಾರು ಇದರ ಗೌರವಾಧ್ಯಕ್ಷ ವಾಸು ಪೂಜಾರಿ ಗುಂಡ್ಯಡ್ಕ,ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿರಿಯ ಸ್ವಯಂ ಸೇವಕ ಗಣೇಶ್ ಭಟ್ ಪೈರುಪುಣಿ, ಪ್ರಗತಿ ಪರ ಕೃಷಿಕ ಶ್ರೀ ರಾಮಭಟ್ ಸಿದ್ದಮೂಲೆ ಕೊಳ್ತಿಗೆ ಉಪಸ್ಥಿತರಿದ್ದರು.ಶ್ರೀಕೃಷ್ಣ ಭಜನಾ ಮಂದಿರ ಕೌಡಿಚ್ಚಾರು ಇದರ ಅಧ್ಯಕ್ಷ ರಾಮದಾಸ್ ರೈ ಮದ್ಲ ಸಭಾಧ್ಯಕ್ಷತೆ ವಹಿಸಿದ್ದರು.


ಶೋಭಾಯಾತ್ರೆ…
ಕೌಡಿಚ್ಚಾರು ಶ್ರೀ ಮುತ್ತು ಮಾರಿಯಮ್ಮ ದೇವಸ್ಥಾನದ ಅಧ್ಯಕ್ಷ ರಾಜೇಂದ್ರ ತೆಂಗಿನ ಕಾಯಿ ಒಡೆಯುವ ಮೂಲಕ ಶೋಭಾಯಾತ್ರೆಗೆ ಚಾಲನೆ ನೀಡಿದರು.ಶ್ರೀಮುತ್ತು ಮಾರಿಯಮ್ಮ ದೇವಸ್ಥಾನದ ಮಹಿಳಾ ವಿಭಾಗದ ಅಧ್ಯಕ್ಷೆ ಪೇಚಾಯಿ ಉಪಸ್ಥಿತರಿದ್ದರು.


ವಿವಿಧ ಕುಣಿತ ಭಜನಾ ತಂಡಗಳು, ಆಕರ್ಷಕ ಚೆಂಡೆ ವಾದನ, ಮಹಿಳೆಯರ ಪೂರ್ಣ ಕುಂಭ ಸ್ವಾಗತ,ಭಾರತ ಮಾತೆಯ ಸ್ತಂಭ ಚಿತ್ರ, ಧ್ವಜಧಾರಿಗಳು, ತುಡರ್ ಯುವಕ ಮಂಡಲ ನನ್ಯ ಕಾವು ಇವರಿಂದ ಭಜನೆ ಹಾಗೂ ಸಾವಿರಾರು ಮಂದಿಯ ಶೋಭಾಯಾತ್ರೆ ನಡೆದು ಶ್ರೀ ಕೃಷ್ಣ ಭಜನಾ ಮಂದಿರದ ವಠಾರದಲ್ಲಿ ಸಂಪನ್ನಗೊಂಡಿತು.ತಿಲಕ್ ರೈ ಕುತ್ಯಾಡಿ ಕಾರ್ಯಕ್ರಮ ನಿರೂಪಿಸಿದರು.


ಸಾಂಸ್ಕೃತಿಕ ಕಾರ್ಯಕ್ರಮ…
ನಾರಾಯಣ ಆಚಾರ್ಯ ಮಳಿ ಇವರ ನೇತೃತ್ವದಲ್ಲಿ ಗಾಯನ, ನೃತ್ಯ ಮತ್ತು ಕರಾಟೆ ಪ್ರದರ್ಶನ ನಡೆಯಿತು.

ಸಚಿನ್ ಪಾಪೆ ಮಜಲು, ಜಗದೀಶ್ ನಾಯ್ಕ ಬೇಂಗತ್ತಡ್ಕ, ಯುವರಾಜ್ ಪೂಂಜಾ ಗೋಳ್ತಿಲ, ನಾರಾಯಣ ನಾಯ್ಕ ಚಾಕೋಟೆ, ಹರಿಪ್ರಸಾದ ಮಾಯಿಲಕೊಚ್ಚಿ, ಪ್ರವೀಣ ಜೆ.ಕೆ ಪೆರ್ಲಂಪಾಡಿ, ಸುರೇಶ್ ಮಾಣಿಯಡ್ಕ, ರಮೇಶ್ ನಿಧಿಮುಂಡ ಮತ್ತು ನಂದಕಿಶೋರ್ ಬಡಗನ್ನೂರು ವಿವಿಧ ಕಾರ್ಯಕ್ರಮ ನಿರ್ವಹಿಸಿದರು. ಅರಿಯಡ್ಕ ಗ್ರಾಮ ಪಂಚಾಯತ್ ಸದಸ್ಯೆ ಭಾರತಿ ವಸಂತ್ ಪ್ರಾರ್ಥಿಸಿ, ಅರಿಯಡ್ಕ ಗ್ರಾಮ ಪಂಚಾಯತ್ ಸದಸ್ಯ ಲೋಕೇಶ್ ಚಾಕೋಟೆ ಸ್ವಾಗತಿಸಿ,ಅರಿಯಡ್ಕ ಗ್ರಾಮ ಪಂಚಾಯತ್ ಅಧ್ಯಕ್ಷ ಸಂತೋಷ್ ಮಣಿಯಾಣಿ ಕುತ್ಯಾಡಿ ವಂದಿಸಿದರು.ಅರಿಯಡ್ಕ ಮಂಡಲದ ಹಿಂದು ಸಂಗಮ ಸಂಚಾಲಕ ಹರೀಶ್ ರೈ ಜಾರತ್ತಾರು ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here