







ಪುತ್ತೂರು: ಪುತ್ತೂರು ದೇವಳದಲ್ಲಿ ಬೇತಾಳ ಹೊರುತ್ತಿದ್ದ ಕಸಬಾ ಗ್ರಾಮದ ತೆಂಕಿಲ ದಿ.ವೀರಪ್ಪ ಗೌಡರ ಪತ್ನಿ ಚೆನ್ನಮ್ಮ (102ವ)ರವರು ಜ.23 ರಂದು ಸ್ವಗೃಹದಲ್ಲಿ ನಿಧನರಾದರು.


ಮೃತರು ಪುತ್ರ ಸುದ್ದಿಬಿಡುಗಡೆ ಪತ್ರಿಕೆ ಏಜೆಂಟ್ ಟೈಲರ್ ಮೋನಪ್ಪ ಗೌಡ ತೆಂಕಿಲ ಸುರುಳಿಮೂಲೆ, ಪುತ್ರಿಯರಾದ ಯಮುನ, ಉಮಾವತಿ, ರತ್ನಾವತಿ, ವಿಮಲ, ಸೀತಮ್ಮ, ಸೊಸೆಯಂದಿರಾದ ನೇತ್ರಾವತಿ, ಸೀತಮ್ಮ, ರಾಜೇಶ್ವರಿ, ಪುಷ್ಪಾವತಿ, ಅಳಿಯಂದಿರಾದ ಹೊನ್ನಪ್ಪ ಗೌಡ, ಜಿನ್ನಪ್ಪ ಗೌಡರವರನ್ನು ಅಗಲಿದ್ದಾರೆ.



ಇತ್ತೀಚೆಗೆ ಒಕ್ಕಲಿಗ ಗೌಡ ಸಂಘದ ಆಟಿಕೂಟದಲ್ಲಿ 102 ವರ್ಷ ಕಳೆದ ಕಾರಣ ಸಮಿತಿಯಿಂದ ಸನ್ಮಾನ ಸ್ವೀಕರಿಸಿದ್ದರು. ತನ್ನ 102ನೇ ಹುಟ್ಟುಹಬ್ಬವನ್ನು ಮಕ್ಕಳು, ಸೊಸೆಯಂದಿರು, ಅಳಿಯಂದಿರು, ಮೊಮ್ಮಕ್ಕಳು, ಮರಿಮಕ್ಕಳು ಹಾಗೂ ಕುಟುಂಬಸ್ಥರೊಂದಿಗೆ ಆಚರಿಸಿಕೊಂಡಿದ್ದರು.










