ಕೋಳಿ ಮಾರಾಟ ಮಾಡಿದ ಹಣ ಜಮೆ ಮಾಡದೆ ವಂಚನೆ : ಪೆರಿಯಡ್ಕ ನಿವಾಸಿ ಗಫೂರ್ ವಿರುದ್ಧ ದೂರು

0

ಉಪ್ಪಿನಂಗಡಿ: ಪ್ರೋವಿಟ್ ಪುಡ್ಸ್ ಪ್ರೈವೇಟ್ ಲಿಮಿಟೆಡ್ ಕಂಪನಿಯ ಉಪ್ಪಿನಂಗಡಿ ಕಚೇರಿಯಲ್ಲಿ ಮೇನೇಜರ್ ಆಗಿದ್ದ ಪೆರಿಯಡ್ಕ ನಿವಾಸಿ ಗಫೂರ್ ಗಿರಾಕಿಗಳಿಗೆ ಕೋಳಿ ಮಾರಾಟ ಮಾಡಿ ಸಂಗ್ರಹಿಸಿದ ಹಣ ಸಂಸ್ಥೆಗೆ ಜಮೆ ಮಾಡದೆ ವಂಚಿಸಿದ್ದಾರೆ ಎಂದು ಆರೋಪಿಸಿ ಕಂಪನಿಯ ವ್ಯವಸ್ಥಾಪಕರು ಉಪ್ಪಿನಂಗಡಿ ಪೊಲೀಸರಿಗೆ ದೂರು ನೀಡಿದ್ದಾರೆ.

ಪ್ರೋವಿಟ್ ಪುಡ್ಸ್ ಪ್ರೈವೇಟ್ ಲಿಮಿಟೆಡ್ ಮಂಗಳೂರು ಇದರ ಬೆಳ್ತಂಗಡಿ ಶಾಖೆಯ ಉಪ್ಪಿನಂಗಡಿ ಕೂಟೇಲು ಎಂಬಲ್ಲಿರುವ ಕಚೇರಿಯಲ್ಲಿ ಮೇನೇಜರ್ ಆಗಿ ಕೆಲಸ ನಿರ್ವಹಣೆ ಮಾಡುತ್ತಿದ್ದ ಪೆರಿಯಡ್ಕ ನಿವಾಸಿ ಗಪೂರ್ ಸಂಸ್ಥೆಯ ವತಿಯಿಂದ 10 ಗಿರಾಕಿಗಳಿಗೆ ಕೋಳಿ ಮಾರಾಟ ಮಾಡಿ ಸಂಗ್ರಹಿಸಿದ 8,86,617 ರೂಪಾಯಿಯನ್ನು ಸಂಸ್ಥೆಗೆ ಜಮಾ ಮಾಡದೆ ಇದ್ದು, ಈ ಬಗ್ಗೆ ಹಲವು ಬಾರಿ ಹಣ ನೀಡುವಂತೆ ತಿಳುವಳಿಕೆ ನೀಡಿದ್ದರೂ ಕರ್ತವ್ಯ ನಿರ್ವಹಣೆ ಮಾಡುತ್ತಾ ಸಂಸ್ಥೆಗೆ ಹಣ ಜಮೆ ಮಾಡದೆ ನಂಬಿಕೆ ದ್ರೋಹ ಮಾಡಿ ವಂಚಿಸಿರುವುದಾಗಿದೆ ಆರೋಪಿಸಲಾಗಿದೆ. ಈ ಬಗ್ಗೆ ಕಂಪನಿಯ ಹೋಲ್‌ಸೇಲ್ ವಿಭಾಗದ ಹಿರಿಯ ವ್ಯವಸ್ಥಾಪಕ ದಿನೇಶ್ ಎಂಬವರು ನೀಡಿದ ದೂರಿನಂತೆ ಉಪ್ಪಿನಂಗಡಿ ಠಾಣೆಯಲ್ಲಿ ಕೇಸು ದಾಖಲಾಗಿದೆ.

LEAVE A REPLY

Please enter your comment!
Please enter your name here