






ರಾಮಕುಂಜ: ಮಹಾತ್ಮಗಾಂಧೀಜಿ ಉದ್ಯೋಗ ಖಾತ್ರಿ ಯೋಜನೆ ರದ್ದುಪಡಿಸಿ ನೂತನ ಕಾಯ್ದೆ ಜಾರಿಗೊಳಿಸಿರುವುದನ್ನು ವಿರೋಧಿಸಿ ಕಾಂಗ್ರೆಸ್ ರಾಮಕುಂಜ ಗ್ರಾಮ ಸಮಿತಿಯಿಂದ ರಾಮಕುಂಜ ಗ್ರಾ.ಪಂ.ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಲಾಯಿತು.


ಮನಮೋಹನ್ ಸಿಂಗ್ ಅವರು ಪ್ರಧಾನ ಮಂತ್ರಿಯಾಗಿದ್ದ ನಿರುದ್ಯೋಗ, ಬಡತನ ನಿಮೂರ್ಲನೆಗೆ ಮಹಾತ್ಮಗಾಂಧೀಜಿಯವರ ಹೆಸರಿನಲ್ಲಿ ಉದ್ಯೋಗ ಖಾತ್ರಿ ಯೋಜನೆ ಜಾರಿಗೊಳಿಸಿದ್ದರು. ಈ ಯೋಜನೆಗೆ ಈಗ ಕೇಂದ್ರ ಸರಕಾರ ವಿಬಿ ರಾಮ್ ಜಿ ಎಂದು ಮರುನಾಮಕರಣ ಮಾಡಿದೆ. ಇದು ಮಹಾತ್ಮಗಾಂಧೀಜಿಯವರಿಗೆ ಮಾಡಿದ ಅವಮಾನವಾಗಿದೆ. ಈ ಯೋಜನೆಯಡಿ ಈ ಹಿಂದೆ ಕೇಂದ್ರ ಸರಕಾರ ಪೂರ್ಣ ಹಣ ರಾಜ್ಯ ಸರಕಾರಕ್ಕೆ ನೀಡುತಿತ್ತು. ಆದರೆ ಈಗ ರಾಜ್ಯ ಸರಕಾರ ಶೇ.40ರಷ್ಟು ಅನುದಾನ ನೀಡಬೇಕೆಂದು ತಿದ್ದುಪಡಿ ತರಲಾಗಿದೆ. ಇದು ರಾಜ್ಯ ಸರಕಾರಕ್ಕೆ ಹೊರೆಯಾಗಲಿದೆ. ಆದ್ದರಿಂದ ಈ ಕಾಯ್ದೆ ರದ್ದುಪಡಿಸಿ ಹಿಂದಿನ ಕಾಯ್ದೆಯನ್ನು ಮರು ಜಾರಿಗೊಳಿಸಬೇಕೆಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ. ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.













