







ಪುತ್ತೂರು: ತಾನು ಶಾಸಕನಾಗಿ ಎರಡು ವರ್ಷದ ಅವಧಿಯಲ್ಲಿ ತನ್ನ ಕ್ಷೇತ್ರ ವ್ಯಾಪ್ತಿಯ ಎಲ್ಲಾ ಗ್ರಾಮಗಳಿಗೂ ಅನುದಾನವನ್ನು ನೀಡಿದ್ದೇನೆ, ಅಭಿವೃದ್ದಿಯಲ್ಲಿ ಎಂದೂ ರಾಜಕೀಯ ಮಾಡದೆ ಶಾಸಕನಾಗಿ ರಾಜಧರ್ಮ ಪಾಲನೆ ಮಾಡಿದ್ದೇನೆ ಎಂದು ಪುತ್ತೂರು ಶಾಸಕ ಅಶೋಕ್ ರೈ ಹೇಳಿದರು.


ಅವರು ಕೆದಂಬಾಡಿ ಗ್ರಾಮದಲ್ಲಿ ಬುಧವಾರ 1.95 ಲಕ್ಷ ವಿವಿಧ ಕಾಮಗಾರಿಗೆ ಶಿಲಾನ್ಯಾಸ ನೆರವೇರಿಸಿ ಮಾತನಾಡಿದರು.



ಗ್ರಾಮೀಣ ಭಾಗದಲ್ಲಿ ಇನ್ನೂ ರಸ್ತೆಗಳು ಅನೇಕ ಅಭಿವೃದ್ದಿಯಾಗಲು ಬಾಕಿ ಇದೆ, ಆದ್ಯತೆ ಮೇರೆಗೆ ಹಲವಾರು ರಸ್ತೆಗಳಿಗೆ ಅನುದಾನವನ್ನು ಒದಗಿಸಿದ್ದೇನೆ. ಬಾಕಿ ಇರುವ ಅರ್ಜಿಗಳನ್ನು ಮಾನ್ಯ ಮಾಡಿ ಅವುಗಳಿಗೂ ಅನುದಾನವನ್ನು ಒದಗಿಸಲಾಗುತ್ತದೆ. ನಮ್ಮ ರಸ್ತೆಗೆ ಅನುದಾನ ಬಂದಿಲ್ಲ ಎಂದು ನೊಂದುಕೊಳ್ಳುವ ಅವಶ್ಯಕತೆ ಇಲ್ಲ. ಕಾಂಗ್ರೆಸ್ ಸರಕಾರ ಇದ್ದಲ್ಲಿ ಮಾತ್ರ ಅಭಿವೃದ್ದಿ ಸಾಧ್ಯ ಎಂಬುದು ಗ್ರಾಮದ ಕಟ್ಟಕಡೇಯ ವ್ಯಕ್ತಿಗೂ ಅರವಿದೆ. ಕರ್ನಾಟಕ ಸರಕಾರದ ಪಂಚ ಗ್ಯಾರಂಟಿ ಯೋಜನೆಗಳು ಜನರ ಮನೆಮನೆಗೆ ತಲುಪಿದೆ, ಅದೇ ರೀತಿಯ ಪ್ರತೀ ಮನೆಗೆ ತೆರಳುವ ರಸ್ತೆಗೂ ಕಾಂಕ್ರೀಟ್ ಹಾಕಲಿದೆ. ಗ್ರಾಮಸ್ಥರು ನೆಮ್ಮದಿಯಿಂದ ಇದ್ದರೆ ಮಾತ್ರ ಅಧಿಕಾರದಲ್ಲಿದ್ದವರು ನೆಮ್ಮದಿಯಿಂದ ಇರುತ್ತಾರೆ ಎಂದು ಹೇಳಿದರು.
ಅಭಿವೃದ್ದಿಗೆ ಮತ ಹಾಕುವ ಮನೋಸ್ಥಿತಿ ಅಗತ್ಯ
ಗ್ರಾಮೀಣ ಜನರು ಅಭಿವೃದ್ದಿ ಪರ ಇದ್ದಾರೆ, ಪ್ರತೀ ಗ್ರಾಮದಿಂದ ರಸ್ತೆ ಸೇರಿದಂತೆ ಮೂಲಭೂತ ಸೌಕರ್ಯಕ್ಕಾಗಿ ಅರ್ಜಿಗಳು ಬರುತ್ತಿರುವುದೇ ಇದಕ್ಕೆ ಸಾಕ್ಷಿಯಾಗಿದೆ. ಗ್ರಾಮೀಣ ರಸ್ತೆಗಳಿಗೆ ಈ ಹಿಂದೆ ಅನುದಾನ ಯಾಕೆ ಕೊಟ್ಟಿಲ್ಲ ಎಂಬುದು ನನಗೆ ಗೊತ್ತಿಲ್ಲ. ರಸ್ತೆಗಳ ದೊಡ್ಡ ಪಟ್ಟಿಯೇ ನಮ್ಮಲ್ಲಿದೆ ಎಂದ ಶಾಸಕರು ಪ್ರತೀ ಗ್ರಾಮದಲ್ಲೂ ಹಿಂದೆಂದಿಗಿಂತಲೂ ಹೆಚ್ಚಿನ ಅಭಿವೃದ್ದಿ ಕಾಣುತ್ತಿದೆ ಇದು ಅತ್ಯಂತ ಸಂತೋಷವನ್ನು ತಂದಿದೆ. ತಿಂಗಳಾಡಿ ದರ್ಬೆಯಿಂದ ಸದಾಶಿವ ದೇವಸ್ಥಾನಕ್ಕೆ ತೆರಳುವ ರಸ್ತೆಯನ್ನು ಡಾಮರೀಕರಣ ಮಾಡಲಾಗುವುದು, ಈ ರಸ್ತೆ ಅನೇಕ ವರ್ಷದಿಂದ ಕೆಟ್ಟು ಹೋಗಿರುವ ಬಗ್ಗೆ ಗ್ರಾಮಸ್ಥರು ತಿಳಿಸಿದ್ದಾರೆ ಎಂದು ಹೇಳಿದರು. ಯಾರು ಅಭಿವೃದ್ದಿ ಮಾಡುತ್ತಿದ್ದಾರೆ ಎಂಬುದು ಕ್ಷೇತ್ರದ ಜನತೆಗೆ ಚೆನ್ನಾಗಿ ತಿಳಿದಿದೆ ಮುಂದಿನ ಎಲ್ಲಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುತ್ತಾರೆ ಎಂಬ ಪೂರ್ಣ ನಂಬಿಕೆಯೂ ಇದೆ ಎಂದು ಶಾಸಕರು ತಿಳಿಸಿದರು.
ಪಂಚ ಗ್ಯಾರಂಟಿಯಿಂದ ಬೆಲೆ ಏರಿಕೆ ಬಿಸಿ ಇಲ್ಲ: ಕೆ ಪಿ ಆಳ್ವ
ಕರ್ನಾಟಕದ ಕಾಂಗ್ರೆಸ್ ಸರಕಾರದ ಪಂಚ ಗ್ಯಾರಂಟಿ ಯೋಜನೆಯಿಂದ ಗ್ರಾಮೀಣ ಭಾಗದ ಜನತೆ ಕೊಂಚ ನೆಮ್ಮದಿಯಿಂದ ಇದ್ದಾರೆ. ಕೇಂದ್ರ ಬಿಜೆಪಿ ಸರಕಾರದ ಬೆಲೆ ಏರಿಕೆ ನೀತಿಯಿಂದ ದೇಶದ ಬೇರೆ ರಾಜ್ಯಗಳಲ್ಲಿ ಜನ ತತ್ತರಿಸಿ ಹೋಗಿದ್ದರೂ ಕರ್ನಾಟಕದಲ್ಲಿ ಬೆಲೆ ಏರಿಕೆ ಬಿಸಿ ಪಂಚ ಗ್ಯಾರಂಟಿಯ ಕಾರಣಕ್ಕೆ ತಟ್ಟಲಿಲ್ಲ ಎಂದು ಪುತ್ತೂರು ಬ್ಲಾಕ್ ಅಧ್ಯಕ್ಷ ಕೃಷ್ಣಪ್ರಸಾದ್ ಆಳ್ವ ಹೇಳಿದರು. ಅಶೋಕ್ ರೈ ಶಾಸಕರಾದ ಬಳಿಕ ಪ್ರತೀ ಗ್ರಾಪಂ ವ್ಯಾಪ್ತಿಯಲ್ಲಿ ನಿತ್ಯ ಅಭಿವೃದ್ದಿ ಕೆಲಸಗಳು ನಡೆಯುತ್ತಿದೆ, ಗ್ರಾಮ ಗ್ರಾಮಗಳಲ್ಲಿ ಸಂತಸ ಮನೆ ಮಾಡಿದ್ದು ಇದುವರೆಗೂ ಆಗದ ಕೆಲಸಗಳು ಈಗ ನಡೆಯುತ್ತಿದೆ ಎಂದು ಹೇಳಿದರು.
ಕೆದಂಬಾಡಿ ಗ್ರಾಮಕ್ಕೆ ಹೆಚ್ಚಿನ ಅನುದಾನ ಇದೇ ಮೊದಲು: ಪುರಂದರ್ ರೈ
ಕೆದಂಬಾಡಿ ವಲಯ ಕಾಂಗ್ರೆಸ್ ಅಧ್ಯಕ್ಷ ಪುರಂದರ್ ರೈ ಕೋರಿಕ್ಕಾರು ಮಾತನಾಡಿ ಅಶೋಕ್ ರೈ ಶಾಸಕರಾದ ಬಳಿಕ ಕೆದಂಬಾಡಿ ಗ್ರಾಮಕ್ಕೆ ಹೆಚ್ಚು ಅನುದಾನ ಬಂದಿದೆ. ನಮ್ಮ ನಿರೀಕ್ಷೆಗೂ ಮೀರಿ ಗ್ರಾಮದಲ್ಲಿ ಕೆಲಸಗಳು ನಡೆಯುತ್ತಿದೆ. ಹಳೆ ಕಾಲದ ಬೇಡಿಕೆಯಾಗಿದ್ದ ಅನೇಕ ರಸ್ತೆ, ತಡೆಗೋಡೆಗೆ ಇಂದು ಶಿಲಾನ್ಯಾಸ ನಡೆದಿದೆ. ಮುಂದಿನ ಚುನಾವಣೆಯಲ್ಲಿ ಜನತೆ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುತ್ತಾರೆ ಎಂಬ ಪೂರ್ಣ ನಂಬಿಕೆಯೂ ಇದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ವಿವಿಧ ವಲಯಗಳ ಪ್ರಮುಖರಾದ ಕೆದಂಬಾಡಿ ಉಸ್ತುವಾರಿ ಅಬ್ದುಲ್ ಖಾದರ್ ಮೇರ್ಲ, ಮನೋಹರ್ ರೈ ಎಂಡೆಸಾಗು , ಬೂತ್ ಅಧ್ಯಕ್ಷ ಸದಾಶಿವ ರೈ, ಭಾಸ್ಕರ್ ನಾಯ್ಕ, ಹಬೀಬ್ ಕಣ್ಣೂರು, ಹೈದರ್ ಗಟ್ಟಮನೆ, ಸೋಮಯ್ಯ ತಿಂಗಳಾಡಿ, ನೌಶಾದ್ ತಿಂಗಳಾಡಿ , ರಘುನಾಥ ರೈ ಚಾವಡಿ, ಸೀತಾರಾಮ ರೈ ಚಾವಡಿ, ಪುಷ್ಪಾವತಿ ರೈ, ವೀಣಾ ಭಾಸ್ಕರ್ ಬಳ್ಳಾಲ್, ಕಿರಣ್ ರೈ ಗುತ್ತು, ಶೇಖರ್ ರೈ, ಚಂದ್ರಾವತಿ ರೈ, ಗೋಪಾಲ ರೈ, ರಚನಾ ರೈ, ಕವನಾ ರೈ, ನೌಶಾದ್ಅಂಙತ್ತಡ್ಕ, ಇಬ್ರಾಹಿಂ ಹಾಜಿ ದರ್ಬೆ, ಇಸಾಖ್ ಮುಸ್ಲಿಯಾರ್, ತಿಂಗಳಾಡಿ ಶಾಲಾ ಎಸ್ಡಿಎಂಸಿ ಅಧ್ಯಕ್ಷ ಹಮೀದ್ ಟಿ ಎಂ, ವಿನೋದ್ ರೈ ಪಟ್ಟೆ, ಇಸುಬು ಪಟ್ಟೆ, ಕುಂಞಿ ಹಾಜಿ ಪಟ್ಟೆ, ಶಕೀಲ್ ಪಟ್ಟೆ, ಪುತತು ಪಟ್ಟೆ, ಯೂಸುಫ್ ಎಕೆ, ನವೀದ್, ಸಾದಿಕ್ ಮುಸ್ಲಿಯಾರ್, ಸಾರ್ಥಕ್ ರೈ ಅರಿಯಡ್ಕ, ಸತೀಶ್ ರೈ ಅರಿಯಡ್ಕ, ಬೇವಿ ಚರಣ್ ರೈ, ವಿಕಾಸ್ ರೈ, ಬಾಬು ಗೌಡ, ಸಾಬುಚ್ಚ ಎಂಡೆಸಾಗು,ಹಿದಾಯತ್ ಕಣ್ಣೂರು, ಅಬ್ಬಾಸ್ ಕೆರೆಮೂಲೆ, ಯಾಕೂಬ್ ತೋಟ, ಹಾರಿಸ್ ಬೋಳೋಡಿ, ಹಮೀದ್ ಮುಸ್ಲಿಯಾರ್, ಶಾಫಿ ಬೇರಿಕೆ, ಉಮ್ಮರ್, ಶೇಖರ, ಮುಂಡಾಲ ಮೋಹನ್ ಆಳ್ವ, ರಾಕೇಶ್ ರೈ, ಯೋಗಿನಿ ರೈ, ಯಶೋಧಾ ರಐ, ಸುಮತಿ ರಐ, ಕಮಲ ಗೌಡ, ರಾಮಣ್ಣ ಗೌಡ, ರಾಮಯ್ಯ ಗೌಡ, ಸೀತಾರಾಮ ರಐ, ಪ್ರೇಮಲತಾ ರೈ, ರಮಣಿ ರೈ, ಪ್ರಜ್ಞಾ ಶೆಟ್ಟಿ, ಭಾಸ್ಕರ್ ರೈ, ಸೀತಮ್ಮ ಗೌಡ, ಜಗನ್ನಾಥ ರೈ, ನಾರಾಯಣ ರಐ, ಶ್ರೀಧರ್ ರೈ, ಸನ್ಯಾಸಿ ಗುಡ್ಡೆ ಭಜನಾಮಂದಿರದ ಅಧ್ಯಕ್ಷ ರಾಘವ ಗೌಡ ಕೆರೆಮೂಲೆ, ರಾಜೀವಿ ರೈ, ಸಂತೋಷ್ ರೈ ಕೋರಂಗ, ಚಂಧ್ರನಳಿಕೆ, ಕರುಣಾಕರ್ ರೈ ಕೋರಂಗ, ಸುಂದರ ಪೂಜಾರಿ, ಪದ್ಮನಾಭ ಮುಂಡಾಲ, ಗ್ರಾಪಂ ಸದಸ್ಯೆ ಅಸ್ಮಾಗಟ್ಟಮನೆ, ಸುಜಾತಾ ರೈ, ಮೆಲ್ವಿನ್ ಮೊಂತೆರೋ, ಅಬ್ದುಲ್ಲ ಹಾಜಿ ಗಟ್ಟಮನೆ, ಅಬೂಬಕ್ಕರ್ ಸಾರೆಪುಣಿ, ಬಾತಿಷಾ ಗಟ್ಟಮನೆ ಉಪಸ್ಥಿತರಿದ್ದರು.
ಶಿಲಾನ್ಯಾಸಗೊಂಡ ಕಾಮಗಾರಿಗಳು:
ಗ್ರಾಮದ ಪೊಟ್ಟಿಮೂಲೆ-ಬಾಳಾಯ ಪರಿಶಿಷ್ಟ ಪಂಗಡ ರಸ್ತೆ ಅಭಿವೃದ್ಧಿಗೆ ಶಾಸಕ ಅಶೋಕ್ ರೈ ಅವರು 10,೦೦ ಲಕ್ಷ ರೂ ಅನುದಾನ ಮಂಜೂರು ಮಾಡಿಸಿದ್ದು ಕಾಮಗಾರಿಗೆ ಶಿಲಾನ್ಯಾಸ ನಡೆಯಿತು

ಗ್ರಾಮದ ತಿಂಗಳಾಡಿಯಿಂದ ಕೆಯ್ಯೂರು ಗ್ರಾಮ ಅಂಗನತಡ್ಕ ಅಭಿವೃದ್ಧಿಗೆ ಶಾಸಕರು 10.೦೦ ಲಕ್ಷ ಅನುದಾನವನ್ನು ಮಂಜೂರು ಮಾಡಿಸಿದ್ದು ಕಾಮಗಾರಿಗೆ ಶಿಲಾನ್ಯಾಸ ನೆರವೇರಿಸಲಾಯಿತು

ಗ್ರಾಮದ ಕುಯ್ಯಾರು-ಗಟ್ಟಮನೆ ಪಂಚಾಯತ್ ರಸ್ತೆಯಲ್ಲಿ ಗಟ್ಟಿಮನೆ ಒಳ ರಸ್ತೆ ಅಭಿವೃದ್ಧಿಗೆ ಶಾಸಕರು 10 ಲಕ್ಷ ರೂ ಅನುದಾನ ಮಂಜೂರುಮಾಡಿದ್ದು ಕಾಮಗಾರಿಗೆ ಶಿಲಾನ್ಯಾಸ ನಡೆಯಿತು. ಇದು ಬಹುವರ್ಷಗಳ ಬೇಡಿಕೆಯ ರಸ್ತೆಯಾಗಿತ್ತು

ಗ್ರಾಮದ ನಿಡ್ಯಾಣ ಚನಿಯಪ್ಪ ಎಂಬುವವರ ಮನೆಯಿಂದ- ನೆಬಿಸ ಎಂಬುವವರ ಮನೆ ವರೆಗು ರಸ್ತೆ ಅಭಿವೃದ್ಧಿಗೆ ಶಾಸಕರು 5.05 ಲಕ್ಷ ಅನುದಾನ ಒದಗಿಸಿದ್ದು ಕಾಮಗಾರಿಗೆ ಗುದ್ದಲಿಪೂಜೆ ನಡೆಸಲಾಯಿತು.

ಗ್ರಾಮದ ತಿಂಗಳಾಡಿ-ಕೊಡಂಗೋಣಿ ಪರಿಶಿಷ್ಟ ಜಾತಿ ಕಾಲೋನಿ ಸಂಪರ್ಕ ರಸ್ತೆಗೆ ಅಭಿವೃದ್ಧಿಗೆ ಶಾಸಕರು 10 ಲಕ್ಷ ಅನುದಾನ ನೀಡಿದ್ದು ಕಾಮಗಾರಿಗೆ ಶಿಲಾನ್ಯಾಸ ನಡೆಯಿತು
ಪುತ್ತೂರು ತಾಲೂಕು ಕೆದಂಬಾಡಿ ಗ್ರಾಮದ ತ್ಯಾಗರಾಜ ರಸ್ತೆಯಿಂದ ಕೆದಂಬಾಡಿ ತೋಟಕ್ಕೆ ಹೋಗುವ ರಸ್ತೆ ಅಭಿವೃದ್ಧಿಗೆ ಶಾsಸಕರು 15 ಲಕ್ಷ ಅನುದಾನ ಮಂಜೂರು ಮಾಡಿದ್ದು ಕಾಮಗಾರಿಗೆ ಶಿಲಾನ್ಯಾಸ ನಡೆಯಿತು

ಗ್ರಾಮದ ಕುಂಡಕೋರಿ ಮೊಟ್ಟಮೂಲೆಗೆ ಹೋಗುವ ರಸ್ತೆ ಅಭಿವೃದ್ಧಿಗೆ ಶಾಸಕರು 10 ಲಕ್ಷ ಅನುದಾನ ನೀಡಿದ್ದು ಕಾಮಗಾರಿಗೆ ಶಿಲಾನ್ಯಾಸ ನಡೆಸಲಾಯಿತು.ಇದು ಬಹುವರ್ಷಗಳ ಬೇಡಿಕೆ ರಸ್ತೆಯಾಗಿತ್ತು.

ಗ್ರಾಮದ ಮಿತ್ರಂಪಾಡಿ ಗ್ರೀನ್ ಹೌಸ್ ನಿಂದ ಪಟ್ಟಿ ಸಂಪರ್ಕ ರಸ್ತೆ ಅಭಿವೃದ್ದಿಗೆ ಶಾಸಕರು 5 ಲಕ್ಷ ಅನುದಾನ ನೀಡಿದ್ದು ಕಾಮಗಾರಿಗೆ ಶಿಲಾನ್ಯಾಸ ನಡೆಯಿತು.

ಗ್ರಾಮದ ಬೂತ್ 88ರ ಎಂಡೆಸಾಗು, ಗೋಲ್ತಿಳ, ನಿದ್ಯಾಣ ಸಂಪರ್ಕಿಸುವ ರಸ್ತೆ ಅಭಿವೃದ್ಧಿಗೆ ಶಾಸಕರು 15 ಲಕ್ಷ ಅನುದಾನ ಮಂಜೂರು ಮಾಡಿದ್ದು ಕಾಮಗಾರಿಗೆ ಗುದ್ದಲಿಪೂಜೆ ನಡೆಯಿತು.

ಗ್ರಾಮದ ಕೊಡಂಕೀರಿಯಿಂದ ರೇಖಾ ರವರ ಮನೆ ಬಳಿ ಹೋಗುವ ರಸ್ತೆಗೆ ಕಾಂಕ್ರೀಟ್ಗೆ 5 ಲಕ್ಷ ಅನುದಾನ ಮಂಜೂರಾಗಿದ್ದು ಕಾಮಗಾರಿಗೆ ಶಿಲಾನ್ಯಾಸ ನಡೆಯಿತು

ಗ್ರಾಮದ ಸಾರೆಪುಣಿ, ಮುಂಡಾಲ, ಬೋಳೋಡಿ ರಸ್ತೆ ಅಭಿವೃದ್ಧಿಗೆ ಶಾಸಕರು 10 ಲಕ್ಷ ಅನುದಾನ ನೀಡಿದ್ದು ಕಾಮಗಾರಿಗೆ ಗುದ್ದಲಿಪೂಜೆ ನಡೆಯಿತು.

ಗ್ರಾಮದ ಬಾಳಾಯ-ಪೊಟ್ಟಮೂಲೆ-ಮಿತ್ತೋಡಿ ಹೋಗುವ ರಸ್ತೆಗೆ ಶಾಸಕರು 10 ಲಕ್ಷ ಅನುದಾನ ಮಂಜೂರು ಮಾಡಿದ್ದು ಕಾಮಗಾರಿಗೆ ಶಿಲಾನ್ಯಾಸ ನಡೆಯಿತು

ಗ್ರಾಮದ ಶ್ರೀ ರಾಮ ಮಂದಿರ ಸನ್ಯಾಸಿಗುಡ್ಡೆ ಇದರ ಅಭಿವೃದ್ಧಿಗೆ ಶಾಸಕರು 5 ಲಕ್ಷ ಅನುದಾನ ನೀಡಿದ್ದು ಕಾಮಗಾರಿಗೆ ಶಿಲಾನ್ಯಾಸ ನಡೆಯಿತು

ಗ್ರಾಮದ ಮೋಂಟೆಮೂಲೆ ಗುತ್ತು ಕಾಲೂದಾರಿಯ ತೋಡಿನ ಎರಡು ಬದಿಗೆ ತಡೆಗೋಡೆ ನಿಮರ್ನಾಣ ಕಾಮಗಾರಿಗೆ ಶಾಸಕರು 75 ಲಕ್ಷ ಅನುದಾನ ನೀಡಿದ್ದು ಕಾಮಗಾರಿಗೆ ಗುದ್ದಲಿಪೂಜೆ ನಡೆಯಿತು











