







ಪುತ್ತೂರು: ಕರ್ನಾಟಕ ರಾಜ್ಯ ಕನ್ನಡ ಉಳಿಸಿ ಬೆಳೆಸಿ ಅಭಿಯಾನ ಇದರ ವತಿಯಿಂದ ಮಂಗಳೂರಿನಲ್ಲಿ ನಡೆದ ಕನ್ನಡ ಮನಸುಗಳ ಬೃಹತ್ ಸಂಗಮ ರಾಜ್ಯ ಸಮಾವೇಶ 2026ರಲ್ಲಿ ಶಿಕ್ಷಕ ವೃತ್ತಿಯ ಸಾಧನೆಗಾಗಿ ದರ್ಬೆ ಲಿಟ್ಲ್ ಫ್ಲವರ್ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಬಾಲಕೃಷ್ಣ ರೈ ಪೊರ್ದಾಲ್ ಇವರಿಗೆ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ನೀಡಿ ಗೌರವಿಸಲಾಯಿತು.


ಅಚ್ಚ ಕನ್ನಡದ ಸ್ಪಷ್ಟ ಮಾತಿನ ಮಧುರ ಸ್ವರ ಮಾಧುರ್ಯಕ್ಕೆ ಹೆಸರಾಗಿರುವ 1000 ಕ್ಕಿಂತ ಮಿಕ್ಕಿದ ಕಾರ್ಯಕ್ರಮದ ನಿರೂಪಣೆಗೈದಿರುವ ಇವರು ಅತ್ತ್ಯುತ್ತಮ ಬರಹಗಾರ, ನಾಟಕ ಕಲಾವಿದ, ಮಾತಿನ ಮೂಲಕ ಪ್ರೇಕ್ಷರನ್ನು ಮಂತ್ರಮುಗ್ದ ಗೊಳಿಸುವ ಸ್ವರ ಮಾಂತ್ರಿಕ, ದುಶ್ಚಟ ಮುಕ್ತ ಸಮಾಜ ಕಾರ್ಯಕ್ರಮದ ರಾಜ್ಯ ಸಂಪನ್ಮೂಲ ವ್ಯಕ್ತಿ, ರಾಷ್ಟ್ರೀಯ ಕಬಡ್ಡಿ ತರಬೇತುದಾರ ತನ್ನ ಶಾಲಾ ಬಾಲಕಿಯರ ಕಬಡ್ಡಿ ತಂಡವನ್ನು ಸತತ ಮೂರು ಭಾರಿ ರಾಷ್ಟ್ರಮಟ್ಟಕ್ಕೆರಿಸಿ ಅಪರೂಪದ ಸಾಧನೆಗೈದಿರುವ ಅತ್ತ್ಯುತ್ತಮ ಸಂಘಟನೆಗೆ ಹೆಸರಾಗಿರುವ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಶಿಕ್ಷಕ ಬಾಲಕೃಷ್ಣ ರೈ ಪೊರ್ದಾಲ್ ರವರಿಗೆ ಕನ್ನಡ ಶಾಲೆ ಉಳಿಸಿ ಬೆಳೆಸಿ ಅಭಿಯಾನದ ಅತ್ಯುತ್ತಮ ಶಿಕ್ಷಕ ರಾಜ್ಯ ಪ್ರಶಸ್ತಿ ನೀಡಿ ಗೌರವಿಸಿದೆ. ಇವರು ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾಗಿರುತ್ತಾರೆ.



ಮಾಜಿ ಸಚಿವ ಬಿ ರಮಾನಾಥ ರೈ ಪ್ರಶಸ್ತಿ ಪ್ರದಾನ ಮಾಡಿದರು. ಕರಾವಳಿ ಅಭಿವೃದ್ಧಿ ಪ್ರಾಧೀಕಾರದ ಅಧ್ಯಕ್ಷ ಎಂ.ಎ ಗಫೂರ್ ಕನ್ನಡ ಶಾಲೆ ಉಳಿಸಿ ಬೆಳೆಸಿ ಅಭಿಯಾನದ ರಾಜ್ಯ ಗೌರವ ಸಲಹೆಗಾರ ಜ್ಞಾನೇಶ್, ಮಹಮ್ಮದ್ ಕುಕ್ಕುವಳ್ಳಿ, ನಾರಾಯಣ ರೈ ಕುಕ್ಕುವಳ್ಳಿ, ಭಾಸ್ಕರ ರೈ ಕುಕ್ಕುವಳ್ಳಿ, ಮಾಧ್ಯಮ ಮುಖ್ಯಸ್ಥ ಸುದೇಶ್, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಹರೇಕಳ ಹಾಜಬ್ಬ, ಸುದ್ದಿ ಸಮೂಹ ಸಂಸ್ಥೆಗಳ ಆಡಳಿತ ನಿರ್ದೇಶಕ ಡಾ.ಯು.ಪಿ ಶಿವಾನಂದ ಮೊದಲಾದವರು ಉಪಸ್ಥಿತರಿದ್ದರು.










