ಬಡಗನ್ನೂರು ಗ್ರಾ.ಪಂ ಎನ್ ಆರ್ ಎಲ್ ಎಮ್ ಯೋಜನೆ ವೃತ್ತಿ ಕೌಶಲ್ಯ ಕೇಂದ್ರ ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಉದ್ಘಾಟನಾ ಸಮಾರಂಭ

0

ಬಡಗನ್ನೂರು : ಮಹಿಳೆಯರಲ್ಲಿರುವ  ಕೌಶಲ್ಯ ಅಭಿವ್ಯಕ್ತಪಡಿಸುವ ಕೇಂದ್ರವಾಗಿ ಬಡಗನ್ನೂರು ಗ್ರಾ.ಪಂ ಎನ್ ಆರ್ ಎಲ್ ಎಮ್ ಯೋಜನೆಯ ವೃತ್ತಿ ಕೌಶಲ್ಯ ಕೇಂದ್ರ ಮೂಡಿಬರಲಿದೆ ಎಂದು ಶಾಸಕ ಅಶೋಕ್ ಕುಮಾರ್ ರೈ ಕೋಡಿಂಬಾಡಿ ಹೇಳಿದರು.

ಅವರು ಫೆ.14ರಂದು ಬಡಗನ್ನೂರು ಗ್ರಾಮ ಪಂಚಾಯತ್ ವಠಾರದಲ್ಲಿ ನಡೆದ ಗ್ರಾಮ ಪಂಚಾಯತ್ ಎನ್ ಆರ್ ಎಲ್ ಎಮ್ ಯೋಜನೆ ವೃತ್ತಿ ಕೌಶಲ್ಯ ಕೇಂದ್ರ ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.

ಬಡಗನ್ನೂರು ಗ್ರಾಮದಲ್ಲಿ ಸುಮಾರು  24 ಲಕ್ಷ ರೂಪಾಯಿ ವೆಚ್ಚದಲ್ಲಿ  ಮಹಾತ್ಮ ಗಾಂಧಿ ಉದ್ಯೋಗ ಖಾತರಿ ಯೋಜನೆಯಡಿ ಕೌಶಲ್ಯ ವೃದ್ಧಿ ಕೇಂದ್ರವನ್ನು ಸಂತೋಷದಿಂದ ಲೋಕಾರ್ಪಣೆ ಮಾಡಿದ್ದೇನೆ ಎಂದು ಹೇಳಲು ಸಂತೋಷವಾಗುತ್ತದೆ. ಪುತ್ತೂರು ವಿಧಾನ ಸಭಾ ಕ್ಷೇತ್ರದ 3ನೇ ಕಟ್ಟಡ ಇದಾಗಿದೆ.ಸರಕಾರದ ಉತ್ತಮ ಯೋಜನೆ ಮಹಿಳೆಯರು ತಮ್ಮಲಿರುವ ಕೌಶಲ್ಯವನ್ನು ಅಭಿವ್ಯಕ್ತ ಪಡಿಸಿ ಸ್ವಾವಲಂಬಿಯಾಗಿ ಬದುಕು ಕಟ್ಟಿಕೋಳ್ಳುಲು ಸಹಕಾರಿಯಾಗಿದೆ. ಗುಡಿ ಕೈಗಾರಿಕೆ ಮಾಡುವವರು ಕೇಂದ್ರದಲ್ಲಿ  ಬಂದು ಉತ್ಪಾದನೆ ಮಾಡಿ ಮಾರಾಟ ಮಾಡಬಹುದಾದ ವ್ಯವಸ್ಥೆ ಇದೆ. ಮಹಿಳೆಯರಿಗೆ ಬೇಕಾದಷ್ಟು ದುಡಿಯುವ ಶಕ್ತಿ ಇದೆ. ಅದನ್ನು ಉಪಯೋಗಿಸಿಕೊಂಡು  ತಮ್ಮ ಅಭಿವೃದ್ಧಿ ಜತೆಗೆ ಗ್ರಾಮದ ಮತ್ತು ದೇಶದ ಅಭಿವೃದ್ಧಿ ಹೊಂದಲು ಸಾಧ್ಯವಿದೆ. ಮಹಿಳೆ ಇಡೀ ಕುಟುಂಬವನ್ನು ನಿಭಾಯಿಸಿಕೊಂಡು ಮನೆ ನಡೆಸುತ್ತಾಳೆ.  ಇದರಿಂದ ಮನೆ ಯಜಮಾನನ ಹೊರೆ ಕಡಿಮೆಯಾಗುತ್ತದೆ ಸರಕಾರ ಪಂಚ ಗ್ಯಾರಂಟಿ ಯೋಜನೆಗೆ 991 ಕೋಟಿ ರೂ ಬಿಡುಗಡೆ ಮಾಡಿದೆ. ಇದು ಗ್ರಾಮದ ಬಡವರ ಮನೆಗಳನ್ನು ಬೆಳಗಿಸಿ ಆರ್ಥಿಕ ಮಟ್ಟವನ್ನು ಸುಧಾರಿಸುವಲ್ಲಿ ಸಹಕಾರಿಯಾಗಿದೆ ಎಂದರು.

ಕುಡಿಯುವ ನೀರಿಗೆ ಆದ್ಯತೆ
ತುಂಬೆಯಿಂದ  ಸುಮಾರು 1 ಸಾವಿರದ 6 ಕೋಟಿ  ರೂಪಾಯಿಯಲ್ಲಿ ವೆಚ್ಚದಲ್ಲಿ ಉತ್ತಮ  ಗುಣಮಟ್ಟದಲ್ಲಿ  ಕುಡಿಯುವ ನೀರು ಈಗಾಗಲೇ ಇರುವಂತ ಟ್ಯಾಂಕ್ ಮೂಲಕ ಮನೆ ಮನೆಗೆ ಒದಗಿಸಲಾಗುವುದು ಇದರಿಂದ ಪಂಚಾಯತ್  ವಿದ್ಯುತ್ ಬಿಲ್  ಉಳಿಕೆ ಮೂಲಕ ಅಭಿವೃದ್ಧಿ ಬಳಸಬಹುದಾಗಿದೆ ಎಂದ ಅವರು  ಎನ್ ಆರ್ ಎಲ್ ಎಮ್ ಯೋಜನೆ ವೃತ್ತಿ ಕೌಶಲ್ಯ ಕೇಂದ್ರದ ಮೂಲಕ ಅದಷ್ಟು ಮಹಿಳಾ ಉದ್ಯೋಗಿಗಳು ಮೂಡಿಬರಲಿ ಶುಭ ಹಾರೖೆಸಿದರು.

ಬಡಗನ್ನೂರು  1.ಕೋಟಿ 49 ಲಕ್ಷ  ಕಾಮಗಾರಿ  ಶಿಲಾನ್ಯಾಸ ಮಾಡುತ್ತಿದ್ದೇವೆ. 2 ವರುಷದಲ್ಲಿ  3ಕೋಟಿ 31ಲಕ್ಷ ಒದಗಿಸಲಾಗಿದೆ.  ಇನ್ನಷ್ಟು ಬೇಡಿಕೆ ಇದೆ. ಮುಂದೆ ಹಂತ ಹಂತವಾಗಿ ಈಡೇರಿಸಲಾಗುವುದು ಎಂದು ಶಾಸಕ  ಅಶೋಕ್ ರೖೆ ಹೇಳಿದರು.

ನಿವೇಶನಕ್ಕೆ ಪ್ರಥಮ ಆದ್ಯತೆ
ಬಡಗನ್ನೂರು ಗ್ರಾಮದ ನಿವೇಶನ ಒದಗಿಸುವ ನಿಟ್ಟಿನಲ್ಲಿ 10 ಎಕ್ರೆ  ಭೂಮಿ ಖಾದಿರಿಸಿ ಈಗಾಗಲೇ  ರಸ್ತೆ ಕಾಂಕ್ರೀಟ್ ಗೆ 25 ಲಕ್ಷ ರೂಪಾಯಿ ಬಿಡುಗಡೆ ಮಾಡಲಾಗಿದೆ. ಪುತ್ತೂರು ವಿಧಾನ ಸಭಾ ಕ್ಷೇತ್ರದಲ್ಲಿ ಯಾರೂ ಮನೆ, ನೀರು, ವಿದ್ಯುತ್ ಇಲ್ಲದೆ ಇರಬಾರದು ಎಂಬ ದೃಷ್ಟಿಯಲ್ಲಿ ಸಾಮಾನ್ಯ ಬದುಕಿಗೆ ನ್ಯಾಯ ಒದಗಿಸುವ ಕೆಲಸ ಮಾಡಲಾಗುತ್ತಿದೆ ಎಂದರು. 

  ನವೀನ್ ಕುಮಾರ್ ಭಂಡಾರಿ ಎಚ್‌ ಮಾತನಾಡಿ,  ಇಚ್ಚಾ ಶಕ್ತಿ ಮತ್ತು ಮನಸ್ಸು ಇದ್ದಲ್ಲಿ ಸ್ವಾವಲಂಬಿಯಾಗಿ ಬದಕಲು ಸಾಧ್ಯ ಎಂದರು. ಪುತ್ತೂರು ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ  ನವೀನ್ ಕುಮಾರ್ ಭಂಡಾರಿ ಎಚ್‌ ಮಾತನಾಡಿ ಗ್ರಾಮೀಣ , ಸ್ವ ಸಹಾಯ ಸಂಘಗಳ ಮೂಲಕ ಏನಾದರು ಸಾಧನೆ ಮಾಡಬೇಕು.  ಸ್ವಾವಲಂಬಿಯಾಗಿ ಬದುಕು ದೃಷ್ಟಿಯಲ್ಲಿ ಸರಕಾರ  ಎನ್ ಆರ್ ಎಲ್ ಎಮ್ ಯೋಜನೆ ಮೂಲಕ ಯಾವುದೇ  ದಾಖಲೆ ಇಲ್ಲದೇ ಸಂಘದ ಮುಖಾಂತರ 20ಲಕ್ಷ  ಮತ್ತು ರಾಷ್ಟ್ರಿಕೃತ  ಬ್ಯಾಂಕ್ ಮೂಲಕ 20 ಲಕ್ಷ ಸಾಲ ಸೌಲಭ್ಯ ನೀಡಲಾಗುತ್ತದೆ. ಇದರ ಪರಿಪೂರ್ಣ ಸದ್ಭಳಕೆಯಾದಾಗ ಯಶಸ್ಸು ಸಾಧ್ಯ. ಸ್ಪರ್ಧಾತ್ಮಕ ಯುಗದಲ್ಲಿ ದೊಡ್ಡ ದೊಡ್ಡ  ಕಂಪನಿ ಜತೆ ಪೖೆಪೋಟಿ ಮಾಡಲು ಸಾಧ್ಯವಿಲ್ಲ  ಆದರೆ ಈಗ ಮನೆಯಿಂದ ಆನ್ ಲೖೆನ್  ಮೂಲಕ  ಮಾರಟ ಮಾಡಬಹುದಾಗಿದೆ.  ಯಾವುದೇ ಕೆಲಸಕ್ಕೂ ಕಠಿಣ ಪರಿಶ್ರಮ  ಜತೆಗೆ ಇಚ್ಚಾ ಶಕ್ತಿ ಮತ್ತು ಮನಸ್ಸು ಇರಬೇಕು ಆಗ ಮಾತ್ರ ಸ್ವಾವಲಂಬಿಯಾಗಿ ಬದಕಲು ಸಾಧ್ಯ ಎಂದು ಹೇಳಿದ ಅವರು  ಲೋಕಾರ್ಪಣೆಗೊಂಡ ಈ ವೃತ್ತಿ ಕೌಶಲ್ಯ ಕೇಂದ್ರ ಪರಿಪೂರ್ಣ ಯಶಸ್ಸುಗಳಿಸಿ  ತಾಲೂಕಿಗೆ ಮಾದರಿಯಾಗಿ ಅಭಿವೃದ್ಧಿ ಹೊಂದಲಿ ಎಂದು ಶುಭ ಹಾರೖೆಸಿದರು.

ಸಭೆಯು ಗ್ರಾ. ಪಂ ಅಧ್ಯಕ್ಷೆ  ಪುಷ್ಪಲತಾ ಎಂ. ರವರ ಅಧ್ಯಕ್ಷತೆ ವಹಿಸಿದ್ದರು.ವೇದಿಕೆಯಲ್ಲಿ ಉಪಾಧ್ಯಕ್ಷೆ ಸುಶೀಲ ಪಕ್ಯೊಡ್, ಸದಸ್ಯರಾದ ರವಿರಾಜ ರೖೆ ಸಜಂಕಾಡಿ, ಸಂತೋಷ ಆಳ್ವ ಗಿರಿಮನೆ ಧರ್ಮೇಂದ್ರ ಕುಲಾಲ್ ಪದಡ್ಕ, ಅಕ್ರಮ ಸಕ್ರಮ ಸಮಿತಿ ಸದಸ್ಯ ಮಹಮ್ಮದ್ ಬಡಗನ್ನೂರು, ರವಿಚಂದ್ರ ಸಾರೆಪ್ಪಾಡಿ, ಲಿಂಗಪ್ಪ ಗೌಡ ಮೋಡಿಕೆ, ಕುಮಾರ ಅಂಬಟೆಮೂಲೆ, ವಸಂತ ಗೌಡ ಕನ್ನಯ, ವೆಂಕಟೇಶ್ ಕನ್ನಡ್ಕ, ಪದ್ಮನಾಭ ಕನ್ನಡ್ಕ  ಕಲಾವತಿ ಗೌಡ ಷಟ್ಲಡ್ಕ, ದಮಯಂತಿ ಕೆಮನಡ್ಕ, ಶ್ರೀಮತಿ ಕನ್ನಡ್ಕ ಸುಜಾತ ಮೖೆಂದನಡ್ಕ, ಜ್ಯೋತಿ ಅಂಬಟೆಮೂಲೆ, ಹೇಮಾವತಿ ಮೋಡಿಕೆ , ಸವಿತಾ ನೆರೋಳ್ತಡ್ಕ, ಜ್ಯೋತಿ ಅಂಬಟೆಮೂಲೆ   ಸಂಜೀವಿನಿ ಒಕ್ಕೂಟ ಅಧ್ಯಕ್ಷೆ ಶ್ಯಾಮಲಾ  ಉಪಸ್ಥಿತರಿದ್ದರು.

ಗ್ರಾ. ಪಂ ಸದಸ್ಯ ಸಂತೋಷ ಆಳ್ವ,  ಕಾರ್ಯದರ್ಶಿ ಕೊರಗಪ್ಪ ನಾಯ್ಕ ವಂದಿಸಿ, ಅಭಿವೃದ್ಧಿ ಅಧಿಕಾರಿ ಬಿ. ಕೆ ಸುಬ್ಬಯ್ಯ ಕಾರ್ಯಕ್ರಮ ನಿರೂಪಿಸಿದರು. ಸಿಬ್ಬಂದಿಗಳು ಸಹಕರಿಸಿದರು.

ಸನ್ಮಾನ 
ಈ ಸಂದರ್ಭದಲ್ಲಿ  ಸಂಜೀವಿನಿ ಒಕ್ಕೂಟ ವೃತ್ತಿ ಕೌಶಲ್ಯ ಕೇಂದ್ರವನ್ನು ನಿರ್ಮಿಸಿದ ಗುತ್ತಿಗೆದಾರ ರಾಜ್ ಕುಮಾರ್ ರೖೆ ರವರನ್ನು ಶಾಸಕ ಅಶೋಕ್ ರೖೆ ಅಭಿನಂದಿಸಿದರು.

LEAVE A REPLY

Please enter your comment!
Please enter your name here