







ದೇವಳದ ರಾಜಾಂಗಣದ ಕಟ್ಟೆಗಳ, ಅಯ್ಯಪ್ಪಗುಡಿ, ಸಭಾಭವನ, ಕೆರೆ ಜೀರ್ಣೋದ್ಧಾರ ಸಹಿತ ಹಲವು ಅಭಿವೃದ್ಧಿ ಕಾರ್ಯಗಳಿಗೆ ಶಿಲಾನ್ಯಾಸ


ಪುತ್ತೂರು: ಇತಿಹಾಸ ಪ್ರಸಿದ್ಧ ಪುತ್ತೂರು ಮಹೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಫೆ.21ರಂದು ಬೆಳಗ್ಗೆ 8.45ರ ಸುಮುಹೂರ್ತದಲ್ಲಿ ಶಂಕುಸ್ಥಾಪನೆ, ಶಿಲಾನ್ಯಾಸ ಮತ್ತು ಸಭಾ ಕಾರ್ಯಕ್ರಮ ನಡೆಯಲಿದೆ.



ಶಾಸಕ ಅಶೋಕ್ ಕುಮಾರ್ ರೈ ಅವರ ಅಧ್ಯಕ್ಷತೆಯಲ್ಲಿ ಮತ್ತು ಕ್ಷೇತ್ರದ ತಂತ್ರಿ ಕುಂಟಾರು ರವೀಶ ತಂತ್ರಿ, ವಾಸ್ತು ಶಿಲ್ಪಿ ಎಸ್.ಎಮ್.ಪ್ರಸಾದ್ ಮುನಿಯಂಗಳ ಅವರ ನೇತೃತ್ವದಲ್ಲಿ ಶಿಲಾನ್ಯಾಸ ಕಾರ್ಯಕ್ರಮ ನಡೆಯಲಿದೆ. ಭಕ್ತಾದಿಗಳು ಭಾಗವಹಿಸುವಂತೆ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆ ಮತ್ತು ಕಾರ್ಯನಿರ್ವಹಣಾಧಿಕಾರಿ
ಕೆ.ವಿ.ಶ್ರೀನಿವಾಸ್ ಅವರು ವಿನಂತಿಸಿದ್ದಾರೆ.
ಶಾಸಕ ಅಶೋಕ್ ಕುಮಾರ್ ರೈ ಅವರ ಸೂಚನೆಯಂತೆ ಭಕ್ತಾದಿಗಳ ಸಭೆಯಲ್ಲಿ ನಿರ್ಣಯಸಿದಂತೆ ಪ್ರಶ್ನಾಚಿಂತನೆಯಲ್ಲಿ ದೈವಜ್ಞರ ಸಲಹೆ, ಕ್ಷೇತ್ರದ ಆಚಾರ್ಯವರ್ಯರಾದ ಬ್ರಹ್ಮಶ್ರೀ ಕುಂಟಾರು ರವೀಶ ತಂತ್ರಿಯವರ ಮಾರ್ಗದರ್ಶನದಲ್ಲಿ ವಿವಿಧ ಪ್ರಾಯಶ್ಚಿತ ಧಾರ್ಮಿಕ ಕಾರ್ಯಕ್ರಮ ನಡೆಸಿ ಶಿಲ್ಪಿ ಮುನಿಯಂಗಳ ಪ್ರಸಾದ್ ಅವರು ಗುರುತಿಸಿದಂತೆ ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ಸಿದ್ದತೆ ನಡೆಸಲಾಗಿದೆ. ದೇವಳದ ರಾಜಾಂಗಣದಲ್ಲಿರುವ ಕಟ್ಟೆಗಳು, ನೂತನ ಅಯ್ಯಪ್ಪನ ಗುಡಿ, ಸಭಾಭವನ, ಕೆರೆ ಜೀರ್ಣೋದ್ದಾರ, ಅಶ್ವತ್ಥಕಟ್ಟೆ ಸಹಿತ ಹಲವು ಅಭಿವೃದ್ದಿ ಕಾರ್ಯಗಳಿಗೆ ಶಿಲಾನ್ಯಾಸ ನಡೆಯಲಿದೆ.
-ಈಶ್ವರ ಭಟ್ ಪಂಜಿಗುಡ್ಡೆ
ಅಧ್ಯಕ್ಷರು, ವ್ಯವಸ್ಥಾಪನಾ ಸಮಿತಿ









