






ವೃತ್ತಿಯನ್ನು ಗೌರವಿಸಿದಲ್ಲಿ ನೆಮ್ಮದಿಯಿಂದ ಜೀವನ – ಪ್ರಕಾಶ್ ಕುಮಾರ್


ಪುತ್ತೂರು: ಉದ್ಶೋಗವು ಜೀವನದ ಒಂದು ಪ್ರಾಮುಖ್ಶವಾದ ಭಾಗವಾಗಿದೆ. ನಾವು ಮಾಡುವ ಉದ್ಶೋಗವನ್ನು ನಿಷ್ಟೆಯಿಂದ ಮಾಡಬೇಕು ಅದು ಸಮಾಜಕ್ಕೆ ಪೂರಕವಾಗಿದ್ದರೆ ಕುಟುಂಬದ ಆರ್ಥಿಕ ಅಭಿವೃಧ್ಧಿಯೋಂದಿಗೆ ಸಮಾಜದ ಅಭಿವೃಧ್ಧಿಗೂ ಸಹಕಾರಿಯಾಗುತ್ತದೆ ಎಂದು ಬಿಳಿನೆಲೆ ಗ್ರಾಮ ಪಂಚಾಯತ್ ಅಧ್ಶಕ್ಷೆ ಶಾರದಾ ದಿನೇಶ್ ಹೇಳಿದರು. ಅವರು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃಧ್ಧಿ ಯೋಜನೆಯ ಬೆಳ್ತಂಗಡಿ ಗ್ರಾಮೀಣ ಶ್ರೇಷ್ಟತಾ ತರಬೇತಿ ಸಂಸ್ಥೆಯಿಂದ ಬಿಳಿನೆಲೆ ವಲಯದ ಆಯ್ದ ಜ್ಞಾನವಿಕಾಸ ಕೇಂದ್ರದ ಸದಸ್ಶರುಗಳಿಗೆ ಸ್ವಸಹಾಯ ಸಂಘದ ಸದಸ್ಶರುಗಳಿಗೆ ಹಾಗೂ ಅವರ ಮಕ್ಕಳಿಗೆ ಸ್ವಉದ್ಶೋಗಕ್ಕೆ ಪೂರಕವಾಗಿ ಬಿಳಿನೆಲೆ ಶ್ರೀ ಗೊಪಾಲಕೃಷ್ಣ ದೇವಸ್ಥಾನ ಸಭಾಭವನದಲ್ಲಿ ನಡೆದ ಸಾರಿ ಗೊಂಡೆ ತಯಾರಿ ಹಾಗೂ ಸಾರಿ ಪೋಲ್ಡಿಂಗ್ ತರಬೇತಿಯ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಮುಖ್ಶ ಅತಿಥಿಯಾಗಿ ಭಾಗವಹಿಸಿದ ಕಡಬ ತಾಲೂಕು ಯೋಜನಾಧಿಕಾರಿ ಪ್ರಕಾಶ್ ಕುಮಾರ್ ಮಾತನಾಡಿ, ಧರ್ಮಸ್ಥಳ ಯೋಜನೆಯು ಸ್ವಸಹಾಯ ಸಂಘದ ಹಾಗೂ ಜ್ಞಾನವಿಕಾಸದ ಸದಸ್ಶರುಗಳಿಗೆ ಸ್ವಉದ್ಶೋಗಕ್ಕೆ ಪ್ರೇರಣೆ ನೀಡುವ ದ್ರಷ್ಟಿಯಿಂದ ಪೂಜ್ಶರ ಹಾಗೂ ಮಾತ್ರಶ್ರೀ ಹೇಮಾವತಿ ಅಮ್ಮನವರು ರೂಪಿಸಿರುವ ಗ್ರಾಮೀಣ ಶ್ರೇಷ್ಟತಾ ಕೇಂದ್ರವು ಹಲವು ಜನರಿಗೆ ಉದ್ಶೋಗಕ್ಕೆ ಪೂರಕ ತರಬೇತಿಯನ್ನು ನೀಡುತ್ತಿದೆ. ಬಿಳಿನೆಲೆ ವ್ಶಾಪ್ತಿಯಲ್ಲಿ ಸ್ವಉದ್ಶೋಗಮಾಡಲು ಆಸಕ್ತ ಅಭ್ಶಾರ್ಥಿಗಳನ್ನು ಗುರುತಿಸಿ ಸಾರಿ ಗೊಂಡೆ ಹಾಕುವ ಹಾಗೂ ಸಾರಿ ಪೋಲ್ಡಿಂಗ್ ತರಬೇತಿಯು ಎಲ್ಲರಿಗೂ ಸಹಕಾರಿಯಾಗಬೇಕು. ತಾವು ಮಾಡುವ ವೃತ್ತಿಯನ್ನು ಗೌರವಿಸಿದರೆ ತಮ್ಮ ವ್ಶಕ್ತಿತ್ವ ವೃದ್ದಿಯೊಂದಿಗೆ ನೆಮ್ಮದಿಯ ಜೀವನ ನಡೆಸಲು ಉದ್ಶೋಗ ಸಹಕಾರಿಯಾಗುತ್ತದೆ ಎಂದರು.




ಅಧ್ಶಕ್ಷತೆಯನ್ನು ಬಿಳಿನೆಲೆ ಒಕ್ಕೂಟದ ಅಧ್ಶಕ್ಷ ರಾಜೇಶ್ ಒಗ್ಗು ವಹಿಸಿದ್ದರು. ಬೆಳ್ತಂಗಡಿ ಗ್ರಾಮೀಣ ಶ್ರೇಷ್ಟತಾ ತರಬೇತಿ ಸಂಸ್ಥೆಯ ಉಪನ್ಶಾಸಕಿ ಧರಣಿ ಯವರು ಶಿಬಿರಾರ್ಥಿಗಳಿಗೆ ಐದು ದಿನಗಳ ಕಾಲ ನಡೆಯಲಿರುವ ಉಚಿತ ತರಬೇತಿಯ ಸೌಲಭ್ಶಗಳ ಬಗ್ಗೆ,ˌದಾಖಲಾತಿ ನಿರ್ವಹಣೆಯ ಕುರಿತು ಮಾಹಿತಿ ನೀಡಿದರು. ತಾಲೂಕು ಭಜನಾ ಪರಿಷತ್ ಅಧ್ಶಕ್ಷ ಸುಂದರ ಗೌಡ ಒಗ್ಗು ಉಪಸ್ಥಿತರಿದ್ದರು. ತರಬೇತಿ ಶಿಕ್ಷಕಿ ಸೌಮ್ಶ ತರಬೇತಿ ಅವಧಿಯಲ್ಲಿ ನಡೆಸಲಾಗುವ ತರಬೇತಿಗಳ ಬಗ್ಗೆ ಮಾಹಿತಿ ನೀಡಿದರು. ಬಿಳಿನೆಲೆ ವಲಯ ಮೇಲ್ವೀಚಾರಕ ರವಿಪ್ರಸಾದ್ ಆಲಾಜೆ ಸ್ವಾಗತಿಸಿ, ಬಿಳಿನೆಲೆ ಜ್ಞಾನದೀಪಾ ಜ್ಞಾನವಿಕಾಸದ ಸಂಯೋಜಕಿ ಉಷಾ ಸತೀಶ್ ವಂದಿಸಿದರು. ತಾಲೂಕು ಜ್ಞಾನವಿಕಾಸ ಸಮನ್ವಯಾಧಿಕಾರಿ ಚೇತನಾ ಕಾರ್ಯಕ್ರಮ ನಿರೂಪಿಸಿದರು.










