






ಬೆಳ್ಳಿಪ್ಪಾಡಿ: ಜಗತ್ತೇ ಒಂದು ವಿಸ್ಮಯ. ಒಂದಲ್ಲಾ ಒಂದು ರೀತಿಯಲ್ಲಿ ವಿಸ್ಮಯಕಾರಿ ಘಟನೆಗಳು ಕಣ್ಣಿಗೆ ಬೀಳುತ್ತಲೇ ಇರುತ್ತದೆ. ಇದೀಗ ದೇವಸ್ಯದ ಬಾರ್ತೋಳಿಯಲ್ಲಿ ಅಂತಹದ್ದೇ ಒಂದು ಘಟನೆ ಬೆಳಕಿಗೆ ಬಂದಿದೆ.


ಹೌದು, ಇಲ್ಲಿ ಬಾಳೆ ಗಿಡದ ಕಾಂಡದಿಂದ ಬಾಳೆ ಗೊನೆ ಹೊರಬಂದಿರುವುದನ್ನು ಕಾಣಬಹುದು.ಬಾರ್ತೋಳಿಯಲ್ಲಿರುವ ದಯಾನಂದ ಗೌಡ ಅವರ ತೋಟದಲ್ಲಿನ ಬಾಳೆ ಗಿಡವೊಂದರ ಕಾಂಡದಿಂದ ಬಾಳೆ ಗೊನೆ ಹೊರಬಂದಿದೆ. ಈ ವಿಸ್ಮಯವನ್ನು ನೋಡಿ ಜನರು ಅಚ್ಚರಿಗೊಂಡಿದ್ದಾರೆ.













