







ಗೌರವಾಧ್ಯಕ್ಷರಾಗಿ ಶಶಿಕುಮಾರ್ ರೈ ಬಾಲ್ಯೊಟ್ಟು, ಅಧ್ಯಕ್ಷರಾಗಿ ಮಹಮ್ಮದ್ ಕುಕ್ಕುವಳ್ಳಿ ಕಾರ್ಯದರ್ಶಿಯಾಗಿ ಪ್ರಭಾಕರ್ ರೈ ಭಾಜುವಳ್ಳಿ ಆಯ್ಕೆ


ಪುತ್ತೂರು: ಸ.ಹಿ.ಪ್ರಾ ಶಾಲೆ ಬೆಟ್ಟಂಪಾಡಿ ಇದರ ಶತಮಾನೋತ್ಸವ ಸಮಿತಿಯನ್ನು ರಚಿಸಲಾಗಿದ್ದು, ಗೌರವಾಧ್ಯಕ್ಷರಾಗಿ ಶಶಿಕುಮಾರ್ ರೈ ಬಾಲ್ಯೊಟ್ಟು, ಅಧ್ಯಕ್ಷರಾಗಿ ಮಹಮ್ಮದ್ ಕುಕ್ಕುವಳ್ಳಿ ಹಾಗೂ ಕಾರ್ಯದರ್ಶಿಯಾಗಿ ಪ್ರಭಾಕರ್ ರೈ ಭಾಜುವಳ್ಳಿ ಆಯ್ಕೆಯಾಗಿದ್ದಾರೆ.




ಉಪಾಧ್ಯಕ್ಷರಾಗಿ ಬಿ.ಎ ಮಹಮ್ಮದ್ ಕುಂಞಿ ಕೂಟತ್ತಾನ, ಜಗನ್ನಾಥ ರೈ ಕೊಮ್ಮಂಡ, ಆಲಿ ಕುಂಞಿ ಕೊರಿಂಗಿಲ, ಕೋಶಾಧಿಕಾರಿಯಾಗಿ ಅಬ್ದುಲ್ ಅಝೀಝ್ ಟಿ.ಎಂ, ಜೊತೆ ಕಾರ್ಯದರ್ಶಿಯಾಗಿ ಯತೀಶ್, ಮಮತಾ, ಸಾಂಸ್ಕೃತಿಕ ಸಮಿತಿಯ ಕಾರ್ಯದರ್ಶಿಯಾಗಿ ಕೃಷ್ಣಪ್ರಸಾದ್ ಬೆಟ್ಟಂಪಾಡಿ ಆಯ್ಕೆಯಾಗಿದ್ದಾರೆ.
ಗೌರವ ಸಲಹೆಗಾರರಾಗಿ ನೌಫಲ್, ನಾರಾಯಣ ರೈ ಕುಕ್ಕುವಳ್ಳಿ, ಶರೀಫ್ ಎನ್, ಅಬೂಬಕ್ಕರ್ ಕೊರಿಂಗಿಲ, ಮೊಯ್ದು ಕುಂಞಿ ಕೊನಡ್ಕ, ಕೆ.ಕೆ ಯಾಕೂಬ್ ಕೂಟತ್ತಾನ, ಸತೀಶ್ ಗೌಡ ಪಾರ, ದಯಾನಂದ ರೈ ಕೋರ್ಮಂಡ ಆಯ್ಕೆಯಾಗಿದ್ದಾರೆ.
ಹೆಚ್ಚಿನ ಸಮಿತಿ ಉಪಸಮಿತಿಗಳಿಗೆ ಮುಂದಿನ ಸಭೆಯಲ್ಲಿ ಆಯ್ಕೆ ಮಾಡಲಾಗುವುದು ಎಂದು ಸಭೆಯಲ್ಲಿ ನಿರ್ಣಯಿಸಲಾಯಿತು









