ಮಾಡ್ನೂರು : ಮನೆಯಿಂದ ಚಿನ್ನಾಭರಣ ಕಳವು

0

ಪುತ್ತೂರು:ಮಾಡ್ನೂರು ಪರನೀರು ಮನೆಯೊಂದರಿಂದ ಸಾವಿರಾರು ರೂ.ಮೌಲ್ಯದ ಚಿನ್ನಾಭರಣ ಕಳವಾದ ಘಟನೆ ಕುರಿತು ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮನೆಯಿಂದ 300 ಮೀಟರ್ ದೂರದಲ್ಲಿರುವ ತರವಾಡು ಮನೆಯಲ್ಲಿ ನಡೆದ ದೈವದ ಕೋಲಕ್ಕೆ ಹೋಗಿದ್ದ ವೇಳೆ ಕೃತ್ಯ ನಡೆದಿದೆ.


ಘಟನೆ ಕುರಿತು ಬಂಟ್ವಾಳ ಕುಳ ಗ್ರಾಮದ ಓಜಾಲ ನಿವಾಸಿ ವಿನೋದ್ ಕುಮಾರ್ ಅವರು ದೂರು ನೀಡಿದ್ದಾರೆ. ‘ನನ್ನ ಪತ್ನಿಯ ಮನೆ ಮಾಡ್ನೂರು ಗ್ರಾಮದ ಪರನೀರು ಎಂಬಲ್ಲಿಂದ 300 ಮೀಟರ್ ದೂರದಲ್ಲಿರುವ ಪತ್ನಿಯ ತರವಾಡು ಮನೆಯಲ್ಲಿ ದೈವದ ಕೋಲ ಇದ್ದ ಹಿನ್ನೆಲೆಯಲ್ಲಿ ಫೆ.23ರಂದು ಪರನೀರು ಮನೆಗೆ ಬೀಗ ಹಾಕಿ ದೈವದ ಕಾರ್ಯಕ್ರಮಕ್ಕೆ ತೆರಳಿದ್ದೆವು.ಫೆ.24ರಂದು ಬೆಳಿಗ್ಗೆ ಮನೆಗೆ ಬಂದು ನೋಡಿದಾಗ ಮನೆಯಿಂದ ಚಿನ್ನಾಭರಣ ಕಳವಾಗಿರುವುದು ಬೆಳಕಿಗೆ ಬಂದಿದೆ.ರೂ.21 ಸಾವಿರ ಮೌಲ್ಯದ 2 ಕೈ ಉಂಗುರ, 49 ಸಾವಿರ ರೂ.ಮೌಲ್ಯದ ಚಿನ್ನದ ಸರ, 6 ಸಾವಿರ ರೂ. ಮೌಲ್ಯದ ಒಂದು ಕಿವಿಯೋಲೆ, 3 ಸಾವಿರ ರೂ.ಮೌಲ್ಯದ ವಾಚ್, ರೂ.1,500 ನಗದು ಹಣ ಕಳವಾಗಿದೆ.ಕಳ್ಳರು ಮನೆಯ ಹಿಂಬಾಗಿಲು ಮುರಿದು ಮನೆಯೊಳಗೆ ಪ್ರವೇಶಿಸಿ ಸೊತ್ತನ್ನು ಕಳವು ಮಾಡಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

LEAVE A REPLY

Please enter your comment!
Please enter your name here